ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಅತ್ತಿಗೆರೆ ಗ್ರಾಮ ವ್ಯಾಪಿಗೆ ಬರುವ ನಿತ್ಯಹರಿದ್ವರ್ಣ ಕಾಡುಗಳ ನಿಸರ್ಗ ದತ್ತವಾದ ಹಚ್ಚಹಸಿರಿನ ಭೂ ಭಾಗದಿಂದ ಕೂಡಿದ ರಮಣೀಯ ಪ್ರಾಕೃತಿಕ ಸೌಂದರ್ಯ ಹೊದ್ದು ನಿಂತು ಭೂಸ್ವರ್ಗದಂತೆ ಕಂಗೊಳಿಸುವ ಪ್ರದೇಶದಲ್ಲಿ ಅತ್ಯಂತ ಕಡಿದಾದ ಬೆಟ್ಟಗುಟ್ಟದಿಂದ ಆವೃತವಾದ ಅತಿಯಾದ ತಿರುವುಗಳಿಂದ ಕೂಡಿದ ಭೂಪ್ರದೇಶದಲ್ಲಿ ಮೂಡಿಗೆರೆಯಿಂದ ಮಂಗಳೂರಿಗೆ ಹೋಗುವ ಮಾರ್ಗದಲ್ಲಿ ಚಾರ್ಮುಡಿ ಘಾಟ್ ರಸ್ತೆಯ ಪಕ್ಕದಲ್ಲಿ ಶ್ರೀ ಜೇನುಕಲ್ಲು ಅಣ್ಣಪ್ಪ ಸ್ವಾಮಿಯವರ ದೇವಾಲಯವಿದ್ದು ಸುಮಾರು 20ನೇ ಶತಮಾನದಲ್ಲಿ ಮಾನವ ನಿರ್ಮಿತವಾದ ಅತ್ಯಂತ ಪುರಾತನ ದೇವಾಲಯವಾಗಿರುವುದು ತಿಳಿದುಬಂದಿರುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಸುಬ್ರಹ್ಮಣ್ಯ ಮಂಗಳೂರು ಕಡೆಗೆ ಸಂಚರಿಸುವ ಪ್ರಯಾಣಿಕ ವಾಹನಗಳಲ್ಲಿ ಸಾಗುವ ಪ್ರಯಾಣಿಕರು ದುರ್ಗಮವಾದ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ಯಾವುದೇ ಅವಗಡಗಳು ಸಂಭವಿಸದೇ ಸುರಕ್ಷಿತ ಪ್ರಯಾಣ ಮತ್ತು ಜೀವ ರಕ್ಷಣೆ ಮಾಡಲೆಂದು ದೇವಾಲಯದ...