ಶ್ರೀ ದೇವಿರಮ್ಮ ದೇವಾಲಯವು ಬೆಟ್ಟ/ಗುಡ್ಡದ ಮಧ್ಯೆ ಚಿಕ್ಕಮಗಳೂರು ತಾಲ್ಲೂಕು, ಕಸಬಾ ಹೋಬಳಿ ಮಲ್ಲೇನಹಳ್ಳಿ ಗ್ರಾಮದಲ್ಲಿರುತ್ತದೆ. ಇದು ಪುರಾತನ ದೇವಾಲಯವಾಗಿದ್ದು, 13ನೇ ಶತಮಾನಕ್ಕೆ ಸೇರಿರುವ ದೇವಾಲಯವೆಂದು ಅರ್ಚಕರಿಂದ ಮಾಹಿತಿಯು ದೊರೆತಿರುತ್ತದೆ. ಈ ದೇವಾಲಯದ ಕುರಿತು ಯಾವುದೇ ಉಲ್ಲೇಖ, ಶಾಸನವಾಗಲೀ ಇರುವುದಿಲ್ಲ. ಈ ದೇವಾಲಯದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ರುದ್ರಾಭಿಷೇಕ ಹಾಗೂ ಪಂಚಾಮೃತಾಭಿಷೇಕ ಮಾಡಿ ಅನ್ನದಾನ ಮಾಡಲಾಗುತ್ತಿದೆ. ಶ್ರೀ ದೇವಿರಮ್ಮ ದೇವಿಯಲ್ಲಿ ಹರಕೆ ಮಾಡಿಕೊಳ್ಳುವುದರಿಂದ ಸಾಂಸಾರಿಕ ಸಮಸ್ಯೆ, ದೃಷ್ಟಿ ದೋಷ ಹಾಗೂ ಗಂಗೆ ಸ್ನಾನದಿಂದ ಪೂಜೆ ಮಾಡುವುದು ಹಾಗೂ ಕಲ್ಯಾಣಿ ಕೊಳಗಳಲ್ಲಿ ನೀರಿನ ಸ್ನಾನ ಮಾಡುವುದರಿಂದ ಮತ್ತು ಇಲ್ಲಿನ ತೀರ್ಥ ಕಾಯಿ ಪೂಜೆಯಿಂದ ದೋಷ ಪರಿಹಾರ ಅಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇರುತ್ತದೆ. ಶ್ರೀ ದೇವಿರಮ್ಮ ದೇವಾಲಯದಲ್ಲಿ ಪ್ರತಿ ವರ್ಷ ಅಂದರೆ ನವಂಬರ್ ಅಥವಾ ಡಿಸೆಂಬರ್...