ಈ ದೇವಾಲವು ಸುಮಾರು 550 ವರ್ಷಗಳು ಇತಿಹಾಸವನ್ನು ಹೊಂದಿದ್ದು, ಇದು ಶಿಂಷಾ ನದಿ ತೀರದಲ್ಲಿದೆ. ಶ್ರೀ ಕೃಷ್ಣದೇವರಾಯ, ಭಕ್ತರಿಗೆ ಒಳ್ಳೆಯದಾಗಲಿ ಎಂದು ಶ್ರೀ ವ್ಯಾಸರಾಜರು ಮತ್ತು ಶ್ರೀ ಪಾದರಾಜರಿಂದ ಸ್ಥಾಪಿಸಲಾಗಿರುತ್ತದೆ. ಸ್ವಾಮಿಗೆ ಹರಕೆ ಹೊತ್ತರೆ ಮತ್ತು ಮಾಸ ನಿಯಮಾಕ ಪೂಜೆ ಕಾರ್ಯ ಕೈಗೊಂಡರೆ ಬೇಡಿದ ಫಲಗಳು ದೊರಕುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಪ್ರತಿ ವರ್ಷವೂ ರಾಮನವಮಿ, ವಿಶೇಷವಾಗಿ ನವರಾತ್ರಿ ಉತ್ಸವಗಳು, ರಾಮೋತ್ಸವ ಮತ್ತು ಹನುಮ ಜಯಂತಿ ಹನುಮದ ವ್ರತ ಮತ್ತು ಮಧ್ವನವಮಿ ಹಾಗೂ ಶ್ರಾವಣ ಮಾಸ, ಕಾರ್ತಿಕ ಮಾಸ ಹಾಗೂ ಧರ್ನುಮಾಸಗಳಲ್ಲಿ ವಿಶೇಷವಾದ ಪೂಜೆಗಳನ್ನು ಈ ದೇವಾಲಯದ ಸಂಪ್ರದಾಯದಂತೆ ನಡೆಸಲಾಗುತ್ತದೆ.