ಹಲವು ವರ್ಷಗಳ ಹಿಂದೆ ಸಣ್ಣ ದೇವರ ಮೂರ್ತಿ ಇದ್ದು ಅದರ ಪೂಜೆ ನಿರ್ವಹಣೆ ನಡೆಯುತ್ತಿತ್ತು. ನಂತರ 24.11.1966ರಲ್ಲಿ ಶ್ರೀ ಹೆಚ್. ವೀರಭದ್ರಯ್ಯ, ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ರವರು ದೇವಸ್ಥಾನ ನಿರ್ಮಾಣ ಮಾಡಲು ಸಹಾಯ ಧನ ನೀಡಲು ಸಹಕರಿಸಿ ದೇವಸ್ಥಾನ ಪುನರ್ ನಿರ್ಮಾಣ ಕಾರ್ಯ ಕೈಗೊಂಡಿರುವುದು ಗುಡಿಯ ಮುಂಭಾಗದ ಕಲ್ಲಿನ ಕೆತ್ತನೆಯಿಂದ ತಿಳಿದು ಬರುತ್ತದೆ.