ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯವು 12 ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು. ಕ್ರಿ.ಶ. 1117 ರಲ್ಲಿ ನಿರ್ಮಾಣವಾಗಿದ್ದು ಈಗ ಸದರಿ ದೇವಾಲಯಕ್ಕೆ 904 ವರ್ಷಗಳಾಗಿರುತ್ತದೆ. ಈ ದೇವಾಲಯವನ್ನು ಹೊಯ್ಸಳ ವಂಶದ ದೊರೆ ವಿಷ್ಣುವರ್ಧನನು ತನ್ನ ಯುದ್ಧ ವಿಜಯದ ನೆನಪಿಗಾಗಿ ನಿರ್ಮಿಸಿರುವುದಾಗಿರುತ್ತದೆ. ಪುರಾಣ ಹಾಗೂ ದಂತ ಕಥೆಗಳ ಪ್ರಕಾರ ಬೇಲೂರಿನ ಸಮೀಪದ ಚಂದ್ರದ್ರೋಣ ದರ್ಪತದಲ್ಲಿ ಕೃತ ಯುಗದಲ್ಲಿ ಬಚ್ಚಿಡಲಾಗಿದ್ದ ಶ್ರೀ ವಿಷ್ಣು ಮೂರ್ತಿಯನ್ನು ಶ್ರೀ ರಾಮಾನುಜಾಚಾರ್ಯರ ಸೂಚನೆಯಂತೆ ರಾಜ ವಿಷ್ಣುವರ್ಧನನು ಹೊರತೆಗಿಸಿ ಪ್ರತಿಷ್ಠಾಪಿಸಿದರೆಂದು. ವಸ್ತು ತಜ್ಞರ ಪ್ರಕಾರ 12 ನೇ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ...