ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ, ಸಜೀಪಮೂಡ, ಬಂಟ್ವಾಳ ತಾಲೂಕು- ಈ ದೈವಸ್ಥಾನ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುತ್ತದೆ. ಆದರೆ ಯಾವುದೇ ಶಾಸನಗಳು ಇರುವುದಿಲ್ಲ. ಈ ದೈವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಕಾರಣೀಕ ದೈವಸ್ಥಾನವಾಗಿರುತ್ತದೆ. ಸುಮಾರು 400 ವರ್ಷಗಳಿಗೂ ಹಿಂದೆ ಉಪ್ಪಿನಂಗಡಿಯ ಮಂತ್ರವಾದಿ, ವಿದ್ವಾಂಸನಾದ ವೈಲಾಯರ ಮನೆ ದೇವರಾಗಿ ಬೆಳಗಿದ ಶ್ರೀ ಕಲ್ಲುರ್ಟಿ, ಶ್ರೀ ಕಲ್ಕುಡ, ಈ ಎರಡು ಶಕ್ತಿಗಳು ಅನಂತರ ಕಲ್ಲೇಗ, ನೇರಳಕಟ್ಟೆ, ಕಡಂಬು, ಪೊಳತ್ತೂರು ಆ ಮೂಲಕ ಪಣೋಲಿಬೈಲಿನಲ್ಲಿ ನೆಲೆಯಾದರು ಎಂಬ ನಂಬಿಕೆ ಇದೆ. ಮಿತ್ತಮಜಲು ಜಾಗದಲ್ಲಿ ನಡಿಯೇಳು ದೈಯಂಗುಲು ದೈವಕ್ಕೆ ನೇಮ ನಡೆಯುತ್ತಿರುವಾಗ ನಡಿಯೇಳು ದೈಯೊಂಗುಲು ದೈವದ ಪಕ್ಕದಲ್ಲಿ ನಾಲ್ಕೆತ್ತಾಯ ದೈವವು ದರ್ಶನ ಪಾತ್ರಿಯ ಮೂಲಕ ಇರುವಾಗ ಕಲ್ಲುರ್ಟಿಯು ಮಿತ್ತ ಮಜಲಿಗೆ ಪ್ರವೇಶವನ್ನಿಟ್ಟಳು. ನನಗೆ ಈ ಮಾಗಣೆಯಲ್ಲಿ ನೆಲೆಯಾಗಲು...