ಮೇಲುಕೋಟೆ ಶ್ರೀನಾರಾಯಣಸ್ವಾಮಿ ಮತ್ತು ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನಗಳ ಇತಿಹಾಸ ಹಿಂದೆ ಒಮ್ಮೆ ವಿಷ್ಣು ಭಕ್ತನಾದಂಥ ನಾರದ ಮಹಾ ಮುನಿಯು ಸತ್ಯ ಲೋಕಕ್ಕೆ ಹೋಗಿ ಧರ್ಮಾತ್ಮನೂ ಭಗವಾನನೂ ಆದ ಚತುರ್ಮುಖ ಬ್ರಹ್ಮನಿಂದ ಸಕಲ ಶಾಸ್ತ್ರಗಳನ್ನು ಪುರಾಣಗಳನ್ನು ಕೇಳಿ ಕೃತಾರ್ಥನಾಗಿ ಕೊನೆಯಲ್ಲಿ ಹೇ ಮಾಹಾತ್ಮಾ! ಕಾವೇರಿ ತೀರದಲ್ಲಿ ವಿಷ್ಣುವಿನ ಒಂದು ಪುಣ್ಯ ಕ್ಷೇತ್ರವನ್ನು ತಿಳಿಸಬೇಕೆಂದು ಪ್ರಾರ್ಥಿಸಲಾಗಿ ಬ್ರಹ್ಮದೇವರು ತಾವು ಕೇಳಿದ ಪ್ರಶ್ನೆಯು ಲೋಕೋಪಕಾರವಾದುದ್ಧರಿಂದ ಶ್ರೀಮನ್ನನಾರಯಣನ ಪಾದಾರವಿಂದವನ್ನು ಭಕ್ತರು ಸೇವಿಸುವಂತಹ ಅದೃಷ್ಟವು ಲಭಿಸುವಂತಃ ಶ್ರೀ ತಿರುನಾರಾಯಣಪುರ ಎಂಬ ದಿವ್ಯಕ್ಷೇತ್ರದ ಮಹತ್ವವನ್ನು ನಾರದ ಮಹಾಮುನುಗೆ ವಿವರಿಸಿದ ಕ್ಷೇತ್ರವೇ ಯಾದವಗಿರಿ ಮೇಲುಕೋಟೆ ಕ್ಷೇತ್ರ. ಈ ದೇವಾಲಯದಲ್ಲಿ ವಿಶಿಷ್ಟಾದ್ವೈತ ಸಿದ್ದಾಂತÀದ ಪ್ರಕಾರ ಶ್ರೀ ಪಾಂಚರಾತ್ರಾಗಾಮ ಈಶ್ವರ ಸಂಹಿತೆಯ ರೀತಿ ನಿತ್ಯ ಮತ್ತು ವಿಶೇಷ ಪೂಜಾದಿಗಳು ಶ್ರೀ...