ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನವು ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು, ದೊಡ್ಡಮಳೂರು ಗ್ರಾಮದಲ್ಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಬೆಂಗಳೂರಿನಿಂದ 60 ಕಿ.ಮೀ. ದೂರ, ಮೈಸೂರಿನಿಂದ 80 ಕಿ.ಮೀ.ದೂರದಲ್ಲಿ ಇದೆ. ರಾಮನಗರ ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ಮತ್ತು ಚನ್ನಪಟ್ಟಣ ತಾಲ್ಲೂಕು ಕೇಂದ್ರದಿಂದ 3 ಕಿ.ಮೀ. ದೂರದಲ್ಲಿ ಕಣ್ವ ನದಿಯ ದಡದಲ್ಲಿರುವ ಪುರಾತನವಾದ ಸುಂದರ ದೇವಾಲಯವಾಗಿದೆ. ಹಿಂದೆ ಈ ನದಿಯನ್ನು ‘ನಿರ್ಮಲಾ ನದಿ’ ಎಂದು ಕರೆಯಲಾಗುತ್ತಿದ್ದು, ಅಪಾರ ಮರಳ ರಾಶಿಯನ್ನು ಹೊಂದಿದ ನದಿಯ ದಡದಲ್ಲಿದ್ದ ಈ ಗ್ರಾಮಕ್ಕೆ ಮರಳೂರು ಅಥವಾ ಮಣಲೂರು (ತಮಿಳಿನಲ್ಲಿ) ಎಂದು ಕರೆಯಲಾಗುತ್ತಿದ್ದು, ನಂತರದಲ್ಲಿ ಮಳೂರು ರೂಢಿಗೆ ಬಂದಿರುತ್ತದೆ. ಮಳೂರು ಗ್ರಾಮದ ಬಗ್ಗೆ ಅನೇಕ ಹಿರಿಯರು ಹೇಳುವ ಪ್ರಕಾರವಾಗಿ ಇಲ್ಲಿ ಅನೇಕ ಪ್ರಸಿದ್ಧ ವಿದ್ವಾಂಸರು ವಾಸಿಸುತ್ತಿದ್ದುದರಿಂದ ಕ್ಷೇತ್ರಕ್ಕೆ ‘ಜ್ಞಾನಮಂಟಪ ಕ್ಷೇತ್ರ’ ಎಂದು...
| 07:30 AM IST - 01:30 PM IST | |
| 04:00 PM IST - 08:30 PM IST | |
| 01:00 PM IST - 04:00 PM IST | |
| ಶ್ರೀದೇವಾಲಯದಲ್ಲಿ ಬೆಳಿಗ್ಗೆ 7-30 ರಿಂದ ಮಧ್ಯಾಹ್ನ 01-00 ಗಂಟೆಯವರಿಗೆ ಮತ್ತು ಸಾಯಂಕಾಲ 04-00 ರಿಂದ ರಾತ್ರಿ 8-30 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 01-00 ಗಂಟೆಯಿಂದ 04-00 ಗಂಟೆಯವರೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ ಹಾಗೂ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. | |