ಬೆಂಗಳೂರು ನಗರ ಜಯನಗರ 4ನೇ ಬಡಾವಣೆಯಲ್ಲಿರುವ ಶ್ರೀ ವಿನಾಯಕ ಸ್ವಾಮಿ ದೇವಾಲಯವನ್ನು ಮಾನ್ಯ ಸರ್ಕಾರದ ಆದೇಶದಂತೆ ದಿನಾಂಕ: 04-01-2014 ರಲ್ಲಿ ಸರ್ಕಾರದ ವಶಕ್ಕೆ ಪಡೆಯಲಾಗಿದ್ದು, ಸರ್ಕಾರದ ಆದೇಶದಂತೆ ದಿನಾಂಕ: 03-09-2016 ರಲ್ಲಿ ಈ ದೇವಾಲಯವನ್ನು “ಘೋಷಿತ ಸಂಸ್ಥೆ”ಗೆ ಸೇರಿಸಿ ಆದೇಶ ಹೊರಡಿಲಾಗಿರುತ್ತದೆ. ಶ್ರೀ ದೇವಾಲಯವನ್ನು ಭಕ್ತಾದಿಗಳು ಮತ್ತು ಸಾರ್ವಜನಿಕ ಸಹಕಾರದಿಂದ 1977ನೇ ಇಸವಿಯಲ್ಲಿ ನಿರ್ಮಿಸಲಾಗಿರುತ್ತದೆ. ಶ್ರೀ ದೇವಾಲಯವು ಮಾನುಷ ಪ್ರತಿಷ್ಠೆಯಾಗಿದ್ದು, ಸದರಿ ದೇವಾಲಯವು 20ನೇ ಶತಮಾನಕ್ಕೆ ಸೇರಿದ್ದಾಗಿದ್ದು, 44 ವರ್ಷಗಳ ಹಳೆಯ ದೇವಾಲಯವಾಗಿರುತ್ತದೆ. ಶ್ರೀ ದೇವಾಲಯದ ಮೂಲ ದೇವರು ಶ್ರೀ ವಿನಾಯಕಸ್ವಾಮಿ ಆಗಿದ್ದು ಭಕ್ತಾದಿಗಳು ಶ್ರೀ ಸ್ವಾಮಿಯ ಅಭಿಷೇಕ, ಅಲಂಕಾರ ದರ್ಶನವನ್ನು ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೇ ಶ್ರೀ ದೇವಾಲಯದಲ್ಲಿ ನವಗ್ರಹ ಸನ್ನಿಧಿ, ನಾಗದೇವರು, ಮೃತ್ಯಂಜಯ ಸ್ವಾಮಿ ಸನ್ನಿಧಿ ಇವೆ....