ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಸುಮಾರು 12 ಮತ್ತು 13 ನೇ ಶತಮಾನಕ್ಕೆ ಸೇರಿದ್ದಾಗಿದೆ. ಸುಮಾರು 700 ವರ್ಷಗಳ ಹಿಂದಿನ ದೇವಾಲಯವಾಗಿದೆ. ಈ ಬಗ್ಗೆ ಶ್ರೀ ಕೆ.ಜಿ. ಲಕ್ಷ್ಮೀನಾರಾಯಣಪ್ಪ (ಕೆ.ಗು.ಲ) ಇವರು 2018ನೇ ಸಾಲಿನಲ್ಲಿ ಬರೆದಿರುವ ದೇವರಾಯನದುರ್ಗ ದಿವ್ಯ ದರ್ಶನ (ತುಮಕೂರು ಜಿಲ್ಲಾ ದೇವಾಲಯಗಳು) ಪುಸ್ತಕದಲ್ಲಿ ಉಲ್ಲೇಖವಿದೆ. ಇತಿಹಾಸದ ಪ್ರಕಾರ ಪಾಳೇಗಾರರು ನಿರ್ಮಿಸಿದ ದೇವಾಲಯವಾಗಿದೆ. ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಬೆಟ್ಟದ ಮೇಲೆ ಇರುತ್ತದೆ. ಈ ಮೂರ್ತಿಯು ದೈವ ಆರ್ಷ ಪ್ರಯೋಗ ಎಂದು ಪ್ರಚಲಿತದಲ್ಲಿದೆ. ಶ್ರೀ ಭೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಬೆಟ್ಟದ ಮೇಲೆ ಗ್ರಾಮದ ಮಧ್ಯೆ ಇರುತ್ತದೆ. ಈ ಮೂರ್ತಿಯು ದೂರ್ವಾಸ ಮುನಿಗಳಿಂದ ಪ್ರತಿಷ್ಟಿತ ಎಂದು ಪ್ರಚಲಿತದಲ್ಲಿದೆ. ಎರಡು ದೇವಾಲಯದಲ್ಲಿ ಮಹಾಲಕ್ಷ್ಮೀ ದೇವತೆಯನ್ನು ಮೈಸೂರು ಅರಸರ ಮಹಾರಾಣಿಯವರು ಪ್ರತಿಷ್ಟಾಪಿಸಿರುತ್ತಾರೆ ಎಂದು ಪ್ರತೀತಿ. ಶ್ರೀ ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಬೆಟ್ಟದ...