ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣವು ಒಂದು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ದ ಯಾತ್ರ ಸ್ದಳ ಹಾಗೂ ಪ್ರವಾಸಿಧಾಮ. ಹಿಂದೆ ಗಂಗರ, ಹೊಯ್ಸಳರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದೆ. ಶ್ರೀರಂಗಪಟ್ಟಣವು ಮೈಸೂರು ಅರಸರ ಹಾಗೂ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ರಾಜಧಾನಿಯಾಗಿ ಐತಿಹ್ಯ ನಿರ್ಮಿಸಿದೆ. ಶ್ರೀರಂಗಪಟ್ಟಣವು ಒಂದು ಮುಖ್ಯವಾದ ಪ್ರವಾಸಿಧಾಮವಾಗಿದ್ದು ಇಲ್ಲಿ ಪುರಾಣ ಪ್ರಸಿದ್ದ ಶ್ರೀರಂಗನಾಥ ಸ್ವಾಮಿಯವರ ದೇವಾಲಯವಲ್ಲದೇ ಅನೇಕ ವಿಷ್ಣು ಹಾಗೂ ಈಶ್ವರ ದೇವಾಲಯಗಳನ್ನೊಳಗೊಂಡಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟ ಕೋಟೆ ಹಾಗೂ ಜನಾಬ್ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರು ಹಾಗೂ ಅವರ ವಂಶಸ್ಧರುಗಳ ಸಮಾಧಿಗಳಿರುವ ಆಕರ್ಷಕ ಗುಂಬಜ್ ಹಾಗೂ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ (ದರಿಯಾ ದೌಲತ್ ಬಾಗ್ ) ಟಿಪ್ಪು ಸುಲ್ತಾನರ ಕಾಲದಲ್ಲಿ ಯುದ್ದ ಖೈದಿಗಳನ್ನು ಬಂಧಿಸಿ ಇಡಲಾಗುತ್ತಿದ್ದ...