ಮಂಡ್ಯ ನಗರದ ಶ್ರೀ ಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದ ಸ್ಥಳಪುರಾಣ/ಉದ್ಭವದ ಹಿನ್ನೆಲೆ ಮಾಂಡವ್ಯ ಋಷಿಗಳು ವೇದಾರಣ್ಯದಲ್ಲಿ ತಪಸ್ಸನ್ನು ಆಚರಿಸಿರುವುದರಿಂದ ಮಾಂಡವ್ಯ ಕ್ಷೇತ್ರ, ಮಾಂಡವ್ಯ ನಗರ, ಮಂಡ್ಯ ಎಂದು ಹೆಸರಾಯಿತು. ಹಿಂದೆ ಗಂಗರು ತಲಕಾಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರವನ್ನು ಆಳ್ವಿಕೆ ಮಾಡಿಕೊಂಡು ಬರುತ್ತಿದ್ದರು. ಇವರು ಸ್ವತಂತ್ರರಾಗಿ ಕ್ರಿ.ಶ.350ರಿಂದ 550 ರವರೆಗೆ ನಂತರ, 1004ರವರೆಗೆ ಚಾಲುಕ್ಯರಿಗೆ ಸಾಮಂತರಾಗಿ ಆಳ್ವಿಕೆ ನಡೆಸಿದರು. ಸಾಮಂತರಾಗಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು ಕ್ರಿ.ಶ.1001ರ ಅವಧಿಯಲ್ಲಿ ಇಂದ್ರವರ್ಮಾ ಎಂಬ ಪಾಳೇಗಾರ ಮಂಡ್ಯ ಪ್ರದೇಶವನ್ನು ಆಳ್ವಿಕೆ ನಡೆಸುತ್ತಿದ್ದನು ಇವನಿಗೆ ಸಂತಾನ ಪ್ರಾಪ್ತಿ ಇರಲಿಲ್ಲ. ಆಗ ಮಾಂಡವ್ಯ ಋಷಿಗಳನ್ನು ಕೇಳಿಕೊಂಡಾಗ ಅವರು ಲಕ್ಷ್ಮೀ ಸಮೇತನಾಗಿರುವ ಶ್ರೀ ಜನಾರ್ದನ ಸ್ವಾಮಿಯನ್ನು ಪ್ರತಿಷ್ಠಾಪಿಸು ಇದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. ಆಗ ಮಾಂಡವ್ಯ ಋಷಿಗಳ ಮಾರ್ಗದರ್ಶನದಂತೆ ಇಂದ್ರವರ್ಮಾನು ಶ್ರೀಲಕ್ಷ್ಮೀಜನಾರ್ದನಸ್ವಾಮಿಯವರನ್ನು ಪ್ರತಿಷ್ಠಾಪಿಸಿದನು....