ಶ್ರೀ ವೆಂಕಟರಮಣಸ್ವಾಮಿ ದೇವಾಲಯವು 18-19 ನೇ ಶತಮಾನದ ದೇವಾಲಯವಾಗಿರುತ್ತದೆ. ಈ ದೇವಾಲಯವನ್ನು ನಗರ್ತರ ಜನಾಂಗದ ದೊಡ್ಡಿ ವಂಶಸ್ಥರಿಂದ ನಿರ್ಮಾಣಗೊಂಡು ಸರ್ಕಾರ ಸುಪರ್ದಿಗೆ ನೀಡಿರುತ್ತಾರೆ. ಈ ದೇವಾಲಯದಲ್ಲಿ ವೈಖಾನಸಾಗಮ ಪ್ರಕಾರ ಪೂಜಾದಿಗಳು ನಡೆಯುತ್ತಿರುತ್ತದೆ. ಈ ದೇವಾಲಯದಲ್ಲಿ ಮುಖ್ಯವಾಗಿ ಶ್ರೀ ವೆಂಕಟರಮಣಸ್ವಾಮಿ ದೇವರ ಪೂಜೆಗಳು ವಿಶೇಷವಾಗಿರುತ್ತದೆ. ಇದರ ಜೊತೆಯಲ್ಲಿ ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಕೃಷ್ಣ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯಗಳ ಪೂಜಾದಿಗಳು ದಿನನಿತ್ಯ ನಡೆಯುತ್ತಿರುತ್ತದೆ. ವಿಶೇಷ ದಿನಗಳಂದು ಶ್ರೀ ಸ್ವಾಮಿಗೆ ಹೂವಿನ ಅಲಂಕಾರಗಳನ್ನು ನಡೆಸಲಾಗುವುದು. ಶ್ರೀ ಸ್ವಾಮಿಯು ಕೆಲವು ನಗರ್ತರ ಜನಾಂಗದವರ ಮನೆ ದೇವರಾಗಿ ಪ್ರಸಿದ್ದಿಯನ್ನು ಹೊಂದಿರುತ್ತದೆ. ಈ ದೇವಾಲಯದಲ್ಲಿ ವಿಶೇಷವಾಗಿ ಬ್ರಹ್ಮರಥೋತ್ಸವ, ಶ್ರಿರಾಮನವಮಿ ಮತ್ತು ವೈಕುಂಠ ಏಕಾದಶಿ ದಿನಗಳಂದು ವಿಶೇಷವಾಗಿ ಸ್ವಾಮಿಯವರಿಗೆ ಪೂಜಾದಿಗಳನ್ನು ನಡೆಸಲಾಗುತ್ತದೆ. ಅ ದಿನಗಳಂದು ಭಕ್ತಾಧಿಗಳು ದೇವಾಲಯಕ್ಕೆ ಅಗಮಿಸಿ...