ಶ್ರೀ ಚನ್ನಕೇಶವ ದೇವಸ್ಥಾನ, ಸುಳ್ಯ, ದಕ್ಷಿಣ ಕನ್ನಡ - 574239, ದಕ್ಷಿಣ ಕನ್ನಡ .
Sri Channakeshava Temple, Sulya, Dakshina Kannada - 574239, Dakshina Kannada District [TM000100]
×
Temple History
ಇತಿಹಾಸ
ಶ್ರೀ ಚೆನ್ನಕೇಶವ ದೇವಸ್ಥಾನವು ಸುಳ್ಯ ಪಟ್ಟಣದ ಮಧ್ಯಭಾಗದಲ್ಲಿದ್ದು, ಮಡಿಕೇರಿ, ಮಂಗಳೂರು ರಾಜ್ಯ ಹೆದ್ದಾರಿಯ ಸುಳ್ಯ ಬಸ್ ನಿಲ್ದಾಣದಿಂದ ½ ಕಿ.ಮೀ. ದೂರದಲ್ಲಿದೆ, ಸುಮಾರು 850 ವರ್ಷಗಳ ಹಿಂದಿನ ಇತಿಹಾಸವಿರುವ ಈ ಪ್ರಸಿದ್ಧ ಕ್ಷೇತ್ರವು ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುವ ಕ್ಷೇತ್ರವಾಗಿದೆ. ತುಳುನಾಡಿನ ಇತಿಹಾಸದಲ್ಲಿ ಜೈನ ಪರಂಪರೆಯ ರಾಜರನ್ನು ಬಲ್ಲಾಳರು ಎಂದು ಕರೆಯುತ್ತಿದ್ದು ಶ್ರೀ ಚೆನ್ನಕೇಶವ ದೇವಸ್ಥಾನದ ಸಮೀಪವೇ ಇರುವ “ಪನ್ನೆಬೀಡು” ಎಂಬಲ್ಲಿಯ ಬಲ್ಲಾಳ ರಾಜನು ಈ ದೇವಸ್ಥಾನವನ್ನು ಕಟ್ಟಿಸಿದನೆಂದು ಪ್ರತೀತಿ. ಈ ಪನ್ನೆಬೀಡು ದೇವಸ್ಥಾನದಿಂದ ½ ಕಿ.ಮೀ. ದೂರವಿದ್ದು, ಅಲ್ಲಿ ಶ್ರೀ ಭಗವತಿ ಮತ್ತು ನಾಲ್ಕು ಸ್ಥಾನ ಚಾವಡಿ ಎಂಬ ವಿಶೇಷ ಸಾನಿಧ್ಯ ಸ್ಥಳ ಇರುತ್ತದೆ.
ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಶ್ರೀ ಚೆನ್ನಕೇಶವ ದೇವರ ಮೂಲ ಬಿಂಬವು ಪಂಚಲೋಹದ್ದಾಗಿದ್ದು, ದಿನಂಪ್ರತಿ...ಶ್ರೀ ಚೆನ್ನಕೇಶವ ದೇವಸ್ಥಾನವು ಸುಳ್ಯ ಪಟ್ಟಣದ ಮಧ್ಯಭಾಗದಲ್ಲಿದ್ದು, ಮಡಿಕೇರಿ, ಮಂಗಳೂರು ರಾಜ್ಯ ಹೆದ್ದಾರಿಯ ಸುಳ್ಯ ಬಸ್ ನಿಲ್ದಾಣದಿಂದ ½ ಕಿ.ಮೀ. ದೂರದಲ್ಲಿದೆ, ಸುಮಾರು 850 ವರ್ಷಗಳ ಹಿಂದಿನ ಇತಿಹಾಸವಿರುವ ಈ ಪ್ರಸಿದ್ಧ ಕ್ಷೇತ್ರವು ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುವ ಕ್ಷೇತ್ರವಾಗಿದೆ. ತುಳುನಾಡಿನ ಇತಿಹಾಸದಲ್ಲಿ ಜೈನ ಪರಂಪರೆಯ ರಾಜರನ್ನು ಬಲ್ಲಾಳರು ಎಂದು ಕರೆಯುತ್ತಿದ್ದು ಶ್ರೀ ಚೆನ್ನಕೇಶವ ದೇವಸ್ಥಾನದ ಸಮೀಪವೇ ಇರುವ “ಪನ್ನೆಬೀಡು” ಎಂಬಲ್ಲಿಯ ಬಲ್ಲಾಳ ರಾಜನು ಈ ದೇವಸ್ಥಾನವನ್ನು ಕಟ್ಟಿಸಿದನೆಂದು ಪ್ರತೀತಿ. ಈ ಪನ್ನೆಬೀಡು ದೇವಸ್ಥಾನದಿಂದ ½ ಕಿ.ಮೀ. ದೂರವಿದ್ದು, ಅಲ್ಲಿ ಶ್ರೀ ಭಗವತಿ ಮತ್ತು ನಾಲ್ಕು ಸ್ಥಾನ ಚಾವಡಿ ಎಂಬ ವಿಶೇಷ ಸಾನಿಧ್ಯ ಸ್ಥಳ ಇರುತ್ತದೆ.
ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಶ್ರೀ ಚೆನ್ನಕೇಶವ ದೇವರ ಮೂಲ ಬಿಂಬವು ಪಂಚಲೋಹದ್ದಾಗಿದ್ದು, ದಿನಂಪ್ರತಿ ಮೂರು ಹೊತ್ತು ಪೂಜೆ, ವಾರ್ಷಿಕ ಜಾತ್ರೆ, ಪಂಚಪರ್ವಾದಿಗಳು ನಡೆಯುತ್ತಿದ್ದು ಒಳಗೋಪುರದಲ್ಲಿ ಶ್ರೀ ದುರ್ಗಾ ಅಮ್ಮನವರು ಹಾಗೂ ಚನ್ನಿಗರಾಯನ ಮೂರ್ತಿ, ಉಪದೇವರುಗಳಾಗಿ ಪೂಜಿಸಲ್ಪಡುತ್ತಾರೆ. ಹೊರ ಅಂಗಣದಲ್ಲಿ ಆಂಜನೇಯ ಗುಡಿ ಇದ್ದು ಆಂಜನೇಯ ದೇವರಿಗೂ ವಿಶೇಷ ಪೂಜಾದಿಗಳು ನೆರವೇರುತ್ತವೆ.
ಸ್ಥಳ ಪುರಾಣ
ಶ್ರೀ ಚನ್ನಕೇಶವ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿದ್ದು, ಪಟ್ಟಣದ ಮಧ್ಯಭಾಗದಲ್ಲಿರುತ್ತದೆ. ಈ ದೇವಾಲಯವು 600 ವರ್ಷಗಳಷ್ಟು ಇತಿಹಾಸ ಹೊಂದಿರುತ್ತದೆ.
ಹೊಯ್ಸಳ ಮುಮ್ಮಡಿ ಬಲ್ಲಾಳರ ವಂಶಜರು ಸುಳ್ಯದ ಪನ್ನೆಬೀಡಿನಲ್ಲಿ ನೆಲೆಸಿದ್ದು, ತಮಗೆ ದೊರೆತ ಪಂಚಲೋಹದ ಶ್ರೀ ಚನ್ನಕೇಶವ ದೇವರ ವಿಗ್ರಹವನ್ನು ಗುಡಿ ಕಟ್ಟಿ ಪೂಜಿಸಲು ನಿರ್ಧರಿಸಿ ಅದಕ್ಕಾಗಿ ಸ್ಥಳ ಹುಡಕಾಟದಲ್ಲಿದ್ದಾಗ ದನ ಮತ್ತು ಹುಲಿ ಅನ್ಯೋನ್ಯವಾಗಿದ್ದ ವಿಸ್ಮಯಕಾರಿ ಸ್ಥಳ ಕಂಡು ಅಲ್ಲಿ ಚನ್ನಕೇಶವನನ್ನು ನಿರ್ಮಿಸಿರುತ್ತಾರೆಂದು ಐತಿಹ್ಯ.
ಶ್ರೀ ಚನ್ನಕೇಶವ ದೇವರ ಮೂರ್ತಿ ಶಂಖ, ಚಕ್ರ ಗಧಾ ಮತ್ತು ಪದ್ಮಧಾರಿಯಾಗಿದ್ದು, ದೇವಳದ ಒಳಗೋಪುರದಲ್ಲಿ ದೇವಾಲಯ ಸ್ಥಾಪನೆ ಮಾಡಿದ ಚೆನ್ನಿಗರಾಯ ಬಲ್ಲಾಳರ ಆಶ್ವಾರೋಹಿ ಮೂರ್ತಿ ಇದೆ. ಈಶಾನ್ಯ ಭಾಗದಲ್ಲಿ ಆನಂತರ ಸ್ಥಾಪಿಸಿದ ಶ್ರೀ ದುರ್ಗಾದೇವಿಯ ಮೂರ್ತಿ ಇದೆ. ದೇವಾಲಯದ ಹೊರಗೋಪುರದ ವಾಯುವ್ಯ ಭಾಗದಲ್ಲಿ ಶ್ರೀ ಅಂಜನೇಯನ ಗುಡಿ...ಶ್ರೀ ಚನ್ನಕೇಶವ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿದ್ದು, ಪಟ್ಟಣದ ಮಧ್ಯಭಾಗದಲ್ಲಿರುತ್ತದೆ. ಈ ದೇವಾಲಯವು 600 ವರ್ಷಗಳಷ್ಟು ಇತಿಹಾಸ ಹೊಂದಿರುತ್ತದೆ.
ಹೊಯ್ಸಳ ಮುಮ್ಮಡಿ ಬಲ್ಲಾಳರ ವಂಶಜರು ಸುಳ್ಯದ ಪನ್ನೆಬೀಡಿನಲ್ಲಿ ನೆಲೆಸಿದ್ದು, ತಮಗೆ ದೊರೆತ ಪಂಚಲೋಹದ ಶ್ರೀ ಚನ್ನಕೇಶವ ದೇವರ ವಿಗ್ರಹವನ್ನು ಗುಡಿ ಕಟ್ಟಿ ಪೂಜಿಸಲು ನಿರ್ಧರಿಸಿ ಅದಕ್ಕಾಗಿ ಸ್ಥಳ ಹುಡಕಾಟದಲ್ಲಿದ್ದಾಗ ದನ ಮತ್ತು ಹುಲಿ ಅನ್ಯೋನ್ಯವಾಗಿದ್ದ ವಿಸ್ಮಯಕಾರಿ ಸ್ಥಳ ಕಂಡು ಅಲ್ಲಿ ಚನ್ನಕೇಶವನನ್ನು ನಿರ್ಮಿಸಿರುತ್ತಾರೆಂದು ಐತಿಹ್ಯ.
ಶ್ರೀ ಚನ್ನಕೇಶವ ದೇವರ ಮೂರ್ತಿ ಶಂಖ, ಚಕ್ರ ಗಧಾ ಮತ್ತು ಪದ್ಮಧಾರಿಯಾಗಿದ್ದು, ದೇವಳದ ಒಳಗೋಪುರದಲ್ಲಿ ದೇವಾಲಯ ಸ್ಥಾಪನೆ ಮಾಡಿದ ಚೆನ್ನಿಗರಾಯ ಬಲ್ಲಾಳರ ಆಶ್ವಾರೋಹಿ ಮೂರ್ತಿ ಇದೆ. ಈಶಾನ್ಯ ಭಾಗದಲ್ಲಿ ಆನಂತರ ಸ್ಥಾಪಿಸಿದ ಶ್ರೀ ದುರ್ಗಾದೇವಿಯ ಮೂರ್ತಿ ಇದೆ. ದೇವಾಲಯದ ಹೊರಗೋಪುರದ ವಾಯುವ್ಯ ಭಾಗದಲ್ಲಿ ಶ್ರೀ ಅಂಜನೇಯನ ಗುಡಿ ಇದೆ. ದೇವಾಲಯದ ಹೊರಗಡೆ ಪಡುಭಾಗದಲ್ಲಿ ದೇವಾಲಯಕ್ಕಿಂತಲೂ ಪ್ರಾಚೀನವಾದ ಸ್ಥಳ ಸಾನಿಧ್ಯಗಳಾದ ರಕ್ತೇಶ್ವರಿ, ಗುಳಿಗ ಹಾಗೂ ನಾಗಬನಗಳಿವೆ, ಸ್ವಾಮಿ ಪ್ರಸನ್ನವದನನಾಗಿ ಭಕ್ತರ ಆಭೀಷ್ಠೆಗಳನ್ನು ಈಡೇರಿಸಿಕೊಂಡು ಬರುತ್ತಿದ್ದಾರೆ.
ಜನವರಿ ಮಾಹೆಯಲ್ಲಿ ಸುಮಾರು 10 ದಿನಗಳ ಕಾಲ ಈ ದೇವರ ಜಾತ್ರೆಯು ಈ ದೇವಾಲಯದ ರೂಢೀ ಸಂಪ್ರದಾಯದಂತೆ ವೈಭವದಿಂದ ನೆರವೇರುತ್ತದೆ. ಈ ದೇವಾಲಯಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ವಿಶೇಷ ದೈವಗಳು ದೇವಾಲಯಕ್ಕೆ ಬಂದು ಶ್ರೀ ದೇವರು ಮತ್ತು ದೈವಗಳ ಭೇಟಿಯಾಗಿ ವಿಜೃಂಭಣೆಯ ಉತ್ಸವವು ನಡೆಯುತ್ತದೆ. ಈ ಸಂದರ್ಭದಲ್ಲಿ ಅಸಂಖ್ಯಾತ ಸಾರ್ವಜನಿಕ ಭಕ್ತಾಧಿಗಳು ದೇವಾಲಯಕ್ಕೆ ಬಂದು ಹರಕೆ ಕಾಣಿಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಸಾಹಿತ್ಯದ ಹಿನ್ನೆಲೆ
ಈ ದೇವಾಲಯವು 850 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ ಮತ್ತು ರಾಜ್ಯದ ಮತ್ತು ಸುತ್ತಮುತ್ತಲಿನ ರಾಜ್ಯಗಳು ಮತ್ತು ದೇಶದ ವಿವಿಧ ಭಾಗಗಳು ಸೇರಿದಂತೆ ನೆರೆಯ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಹೊಂದಿದೆ. ತುಳುನಾಡಿನ ಇತಿಹಾಸದಲ್ಲಿ ಜೈನ ರಾಜನನ್ನು ಬಲ್ಲಾಳ ಎಂದು ಕರೆಯಲಾಗುತ್ತಿತ್ತು. ಬಲ್ಲಾಳ ರಾಜನು ಪನ್ನೆಬೀಡು ನಿವಾಸಿಯಾಗಿದ್ದನು ಎಂದು ನಂಬಲಾಗಿದೆ. ಈ ದೇವಾಲಯವನ್ನು ಬಲ್ಲಾಳ ರಾಜನು ನಿರ್ಮಿಸಿದ ಎಂಬ ಪ್ರತೀತೀ ಇದೆ .ಪನ್ನೆಬೀಡು ಚೆನ್ನಕೇಶವ ದೇವಾಲಯದ ಸಮೀಪವಿರುವ ಸ್ಥಳವಾಗಿದೆ. ಈ ಪನ್ನೆಬೀಡು ಚೆನ್ನಕೇಶವ ದೇವಾಲಯದಿಂದ 0.50 ಕಿಮೀ ದೂರದಲ್ಲಿದೆ ಮತ್ತು ಶ್ರೀ ಭಗವತಿ ಮತ್ತು ನಾಲ್ಕು ಸ್ಥಳಗಳ ಚಾವಡಿ ಅಸ್ತಿತ್ವದಲ್ಲಿದೆ. ದೇವಸ್ಥಾನದಲ್ಲಿರುವ ಚೆನ್ನಕೇಶವನ ಮೂರ್ತಿಯನ್ನು ಪಂಚಲೋಹದಿಂದ ನಿರ್ಮಿಸಲಾಗಿದೆ. ದಿನಕ್ಕೆ ಮೂರು ಬಾರಿ ಪೂಜಿಸಲಾಗುತ್ತದೆ, ವಾರ್ಷಿಕ ಉತ್ಸವ, ಇತರ ಉತ್ಸವಗಳು ನಡೆಯುತ್ತವೆ ಮತ್ತು ಗೋಪುರದ...ಈ ದೇವಾಲಯವು 850 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ ಮತ್ತು ರಾಜ್ಯದ ಮತ್ತು ಸುತ್ತಮುತ್ತಲಿನ ರಾಜ್ಯಗಳು ಮತ್ತು ದೇಶದ ವಿವಿಧ ಭಾಗಗಳು ಸೇರಿದಂತೆ ನೆರೆಯ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಹೊಂದಿದೆ. ತುಳುನಾಡಿನ ಇತಿಹಾಸದಲ್ಲಿ ಜೈನ ರಾಜನನ್ನು ಬಲ್ಲಾಳ ಎಂದು ಕರೆಯಲಾಗುತ್ತಿತ್ತು. ಬಲ್ಲಾಳ ರಾಜನು ಪನ್ನೆಬೀಡು ನಿವಾಸಿಯಾಗಿದ್ದನು ಎಂದು ನಂಬಲಾಗಿದೆ. ಈ ದೇವಾಲಯವನ್ನು ಬಲ್ಲಾಳ ರಾಜನು ನಿರ್ಮಿಸಿದ ಎಂಬ ಪ್ರತೀತೀ ಇದೆ .ಪನ್ನೆಬೀಡು ಚೆನ್ನಕೇಶವ ದೇವಾಲಯದ ಸಮೀಪವಿರುವ ಸ್ಥಳವಾಗಿದೆ. ಈ ಪನ್ನೆಬೀಡು ಚೆನ್ನಕೇಶವ ದೇವಾಲಯದಿಂದ 0.50 ಕಿಮೀ ದೂರದಲ್ಲಿದೆ ಮತ್ತು ಶ್ರೀ ಭಗವತಿ ಮತ್ತು ನಾಲ್ಕು ಸ್ಥಳಗಳ ಚಾವಡಿ ಅಸ್ತಿತ್ವದಲ್ಲಿದೆ. ದೇವಸ್ಥಾನದಲ್ಲಿರುವ ಚೆನ್ನಕೇಶವನ ಮೂರ್ತಿಯನ್ನು ಪಂಚಲೋಹದಿಂದ ನಿರ್ಮಿಸಲಾಗಿದೆ. ದಿನಕ್ಕೆ ಮೂರು ಬಾರಿ ಪೂಜಿಸಲಾಗುತ್ತದೆ, ವಾರ್ಷಿಕ ಉತ್ಸವ, ಇತರ ಉತ್ಸವಗಳು ನಡೆಯುತ್ತವೆ ಮತ್ತು ಗೋಪುರದ ಒಳಗೆ ಶ್ರೀ ದುರ್ಗೆ, ಚೆನ್ನಿಗರಾಯನ ಪ್ರತಿಮೆಯನ್ನು ಇತರ ದೇವರಂತೆ ಪೂಜಿಸಲಾಗುತ್ತದೆ. ಹೊರಭಾಗದಲ್ಲಿ ಆಂಜನೇಯ ಗುಡಿ ಇದೆ ಮತ್ತು ಇಲ್ಲಿ ದೇವರ ಕಾಣಿಕೆ ಹುಂಡಿ ಇದೆ ಮತ್ತು ನೈವೇದ್ಯಗಳನ್ನು ಮಾಡಲಾಗುತ್ತದೆ