ಶ್ರೀ ಚನ್ನಕೇಶವ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿದ್ದು, ಪಟ್ಟಣದ ಮಧ್ಯಭಾಗದಲ್ಲಿರುತ್ತದೆ. ಈ ದೇವಾಲಯವು 600 ವರ್ಷಗಳಷ್ಟು ಇತಿಹಾಸ ಹೊಂದಿರುತ್ತದೆ. ಹೊಯ್ಸಳ ಮುಮ್ಮಡಿ ಬಲ್ಲಾಳರ ವಂಶಜರು ಸುಳ್ಯದ ಪನ್ನೆಬೀಡಿನಲ್ಲಿ ನೆಲೆಸಿದ್ದು, ತಮಗೆ ದೊರೆತ ಪಂಚಲೋಹದ ಶ್ರೀ ಚನ್ನಕೇಶವ ದೇವರ ವಿಗ್ರಹವನ್ನು ಗುಡಿ ಕಟ್ಟಿ ಪೂಜಿಸಲು ನಿರ್ಧರಿಸಿ ಅದಕ್ಕಾಗಿ ಸ್ಥಳ ಹುಡಕಾಟದಲ್ಲಿದ್ದಾಗ ದನ ಮತ್ತು ಹುಲಿ ಅನ್ಯೋನ್ಯವಾಗಿದ್ದ ವಿಸ್ಮಯಕಾರಿ ಸ್ಥಳ ಕಂಡು ಅಲ್ಲಿ ಚನ್ನಕೇಶವನನ್ನು ನಿರ್ಮಿಸಿರುತ್ತಾರೆಂದು ಐತಿಹ್ಯ. ಶ್ರೀ ಚನ್ನಕೇಶವ ದೇವರ ಮೂರ್ತಿ ಶಂಖ, ಚಕ್ರ ಗಧಾ ಮತ್ತು ಪದ್ಮಧಾರಿಯಾಗಿದ್ದು, ದೇವಳದ ಒಳಗೋಪುರದಲ್ಲಿ ದೇವಾಲಯ ಸ್ಥಾಪನೆ ಮಾಡಿದ ಚೆನ್ನಿಗರಾಯ ಬಲ್ಲಾಳರ ಆಶ್ವಾರೋಹಿ ಮೂರ್ತಿ ಇದೆ. ಈಶಾನ್ಯ ಭಾಗದಲ್ಲಿ ಆನಂತರ ಸ್ಥಾಪಿಸಿದ ಶ್ರೀ ದುರ್ಗಾದೇವಿಯ ಮೂರ್ತಿ ಇದೆ. ದೇವಾಲಯದ ಹೊರಗೋಪುರದ ವಾಯುವ್ಯ ಭಾಗದಲ್ಲಿ ಶ್ರೀ ಅಂಜನೇಯನ ಗುಡಿ...