Screen Reader Access     A-AA+
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಬೋಳಾರ, ಮಂಗಳೂರು - 575001, ದಕ್ಷಿಣ ಕನ್ನಡ .
Mahathobara Sri Mangaladevi Temple, Bolara, Mangaluru - 575001, Dakshina Kannada District [TM000105]
×
Temple History

ಇತಿಹಾಸ

ತುಳು ನಾಡನ್ನು ಆಳುಪ ವಂಶದ ಅರಸರಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಕುಂದವರ್ಮನು ಮಂಗಳಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ತುಳುನಾಡನ್ನು ಆಳುತ್ತಿದ್ದನು. ಅದೇ ಸಮಯ ಉತ್ತರ ನೇಪಾಳ ದೇಶದಿಂದ ಮಚ್ಚೇಂದ್ರನಾಥ ಗೋರಕನಾಥರೆಂಬ ಯೋಗಿದ್ವಯರು ತಮ್ಮ ಶಿಷ್ಯ ಗಣದೊಂದಿಗೆ ನೇತ್ರಾವತಿ ನದಿಯನ್ನು ದಾಟಿ, ಮಂಗಳಾಪುರಕ್ಕೆ ಕಾಲಿರಿಸುವರು ಆ ಸ್ಥಳವನ್ನು ಇಂದಿಗೂ ಗೋರಕ ದಂಡು ಎಂದು ಕರೆಯುತ್ತಿರುವ ವಾಡಿಕೆಯಾಗಿದೆ. ಅಲ್ಲಿಂದ ಅವರು ಪರಶುರಾಮನಾರಿದಿದ ಸ್ಥಳಕ್ಕೆ ಬರುವರು, ಆ ಸ್ಥಳದಲ್ಲಿ ಹಿಂದೆ ಮಹಾಯೋಗಿಗಳಾದ ಕಪಿಲ ಮುನಿಗಳು ಆಶ್ರಮವನ್ನು ರಚಿಸಿ, ತಮ್ಮ ಶಿಷ್ಯರಿಗೆ ವೇದಧ್ಯಯನ ಮುಂತಾದ ಧಾರ್ಮಿಕ ಪಾಠಗಳನ್ನು ಹೇಳಿ ಕೊಡುತ್ತಿದ್ದರು. ಆ ಪ್ರಶಾಂತವಾದ ಸ್ಥಳದಲ್ಲಿ ಮಚ್ಚೇಂದ್ರನಾಥ ಗೋರಕನಾಥರು ತಮ್ಮ ಶಿಷ್ಯರೊಂದಿಗೆ ಬೀಡು ಬಿಟ್ಟು ಸಿದ್ಧ ಯೋಗದಲ್ಲಿ ನಿರತರಾಗಿದ್ದರು. ಸಿದ್ಧ ಪುರುಷರಿಬ್ಬರು ಶಿಷ್ಯ ಸಮೇತರಾಗಿ ಬಂದು ತಮ್ಮ ಪಟ್ಟಣದಲ್ಲಿ ನೆಲಸಿರುವ ವಾರ್ತೆಯನ್ನು ಕೇಳಿ ಹರ್ಷಚಿತ್ತನಾದ...

ಸಾಹಿತ್ಯದ ಹಿನ್ನೆಲೆ

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಇತಿಹಾಸ ಕ್ರಿ.ಶ. 950-980 ಶತಮಾನಕ್ಕೆ ಸೇರಿದ ದೇವಾಲಯವಾಗಿದೆ. ದೇವಾಲಯವನ್ನು ಶಿವಾನುಗ್ರಹ ಪಡೆದ ಭಾರ್ಗವರಾಮನಿಗೆ ಒಲಿದ ಶ್ರೀ ಮಂಗಳಾದೇವಿಯ ಲಿಂಗರೂಪದ ಬಿಂಬವಾಗಿ ಪ್ರತಿಷ್ಠಾಪಿಸಿದೆ. ಈ ದೇವಾಲಯವು ಕ್ರಿ.ಶ. 950-980ರ ವರೆಗೆ ತುಳುನಾಡನ್ನು ಆಳಿದ ಅರಸನಾದ ಕುಂದವರ್ಮನು ಮಚ್ಚೇಂದ್ರನಾಥ ಗೋರಕ್ಷನಾಥರ ಅನುಗ್ರಹದಂತೆ ಶ್ರೀ ಮಂಗಳಾದೇವಿ ದೇವಸ್ಥಾನವನ್ನು ಪುನಃ ನಿರ್ಮಾಣ ಮಾಡಿ ಪೂಜಿಸಲಾಗುತ್ತಾ ಬಂದಿರುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮದುವೆಯಾಗದ ಕನ್ಯೆಯರಿಗೆ ಹಾಗೂ ಪುರುಷರಿಗೆ ಸ್ವಯಂವರ ಪಾರ್ವತಿ ಪೂಜೆಯ ವೃತದಿಂದ ಮಾಡುವ ಪೂಜೆಯಿಂದ ಕಂಕಣಭಾಗ್ಯ ಪ್ರಾಪ್ತಿಯಾಗುವ ನಂಬಿಕೆ ಇದೆ. ಅಲ್ಲದೆ ಕ್ಷೇತ್ರದಲ್ಲಿ ವಿವಾಹವಾದರೆ ಅವರ ಜೀವನ ಸುಖಮಯವಾಗುತ್ತದೆನ್ನುವ ಪ್ರತೀತಿಯೂ ಇದೆ. ಶ್ರೀ ದೇವಾಲಯದಲ್ಲಿ ವಿಶೇಷತೆ ನವರಾತ್ರಿ ಒಂಬತ್ತು ದಿನಗಳಿಂದ ಪೂಜೆ ಮಹಾನವಮಿಯಂದು ಆಯಧ ಪೂಜೆ, ವಿಜಯದಶಮಿ ರಥೋತ್ಸವ (ದೇವಾಲಯದಲ್ಲಿ ಪಂಚಾಮೃತ...