ಶ್ರೀ ಕಾಲಭೈರವೇಶ್ವರ ದೇವಸ್ಥಾನ, ವದ್ದಿಕೆರೆ, ಚಿತ್ರದುರ್ಗ - 577558, ಚಿತ್ರದುರ್ಗ .
Sri Kalabhairaveshwara Temple, Vaddikere, Chitradurga - 577558, Chitradurga District [TM000110]
×
Temple History
ಇತಿಹಾಸ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವದ್ದೀಕೆರೆ ಗ್ರಾಮದ ಶ್ರೀ ಕಾಲಬೈರವೇಶ್ವರಸ್ವಾಮಿ ಪುರಾತನ ದೇವಾಲಯವಾಗಿದ್ದು, ಸದರಿ ಗ್ರಾಮವನ್ನು ಈ ಹಿಂದೆ ಸಾಧು ಸಜ್ಜನರ ನೆಲೆವೀಡು ಎನ್ನಲಾಗುತಿತ್ತು. ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಸದರಿ ಗ್ರಾಮದ ಕೆರೆಯ ಆಜುಬಾಜಿನಲ್ಲಿ ವದ್ದೀಬೇಳೆ (ವದ್ದೀಪೆಳೆ) ವ್ಯಾಪಕವಾಗಿ ಬೆಳೆದಿದ್ದರಿಂದ ವದ್ದೀಕೆರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ.
ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದಂತೆ, ಈ ದೇವಾಲಯವು ಸುಮಾರು ಕ್ರಿ.ಶ. 8 ರಿಂದ 9ನೇ ಶತಮಾನದಲ್ಲಿ ಚೋಳರ ಕಾಲದಲ್ಲಿಯೇ ನಿರ್ಮಾಣ ಆಗಿರಬಹುದೆಂದು ಅಂದಾಜಿಸಲಾಗಿರುತ್ತದೆ. ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು ನೋಡಲು ವೈಶಿಷ್ಟ್ಯಪೂರ್ಣವಾಗಿದೆ, ಹೇಮಾವತಿಯ ವೀರಶೈವ ಸಮುದಾಯದ ಮನೆಯಲ್ಲಿ ಮೂರು ಕಾಲಭೈರವ ವಿಗ್ರಹಗಳಿದ್ದ ಕಾರಣ ಆ ಮನೆಗೆ ನಾನಾ ತೊಂದರೆಗಳು ಬಂದು ಎಲ್ಲರೂ ಮೃತರಾಗಿ ಒಬ್ಬ ಹೆಣ್ಣು ಮಗಳು ಉಳಿದಿದ್ದಳು, ಆಕೆಯ ಕನಸಿನಲ್ಲಿ ಸನ್ಯಾಸಿಯೊಬ್ಬ ಕಾಣಿಸಿಕೊಂಡು ಮನೆಯಲ್ಲಿ ಮೂರು...ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವದ್ದೀಕೆರೆ ಗ್ರಾಮದ ಶ್ರೀ ಕಾಲಬೈರವೇಶ್ವರಸ್ವಾಮಿ ಪುರಾತನ ದೇವಾಲಯವಾಗಿದ್ದು, ಸದರಿ ಗ್ರಾಮವನ್ನು ಈ ಹಿಂದೆ ಸಾಧು ಸಜ್ಜನರ ನೆಲೆವೀಡು ಎನ್ನಲಾಗುತಿತ್ತು. ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಸದರಿ ಗ್ರಾಮದ ಕೆರೆಯ ಆಜುಬಾಜಿನಲ್ಲಿ ವದ್ದೀಬೇಳೆ (ವದ್ದೀಪೆಳೆ) ವ್ಯಾಪಕವಾಗಿ ಬೆಳೆದಿದ್ದರಿಂದ ವದ್ದೀಕೆರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ.
ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದಂತೆ, ಈ ದೇವಾಲಯವು ಸುಮಾರು ಕ್ರಿ.ಶ. 8 ರಿಂದ 9ನೇ ಶತಮಾನದಲ್ಲಿ ಚೋಳರ ಕಾಲದಲ್ಲಿಯೇ ನಿರ್ಮಾಣ ಆಗಿರಬಹುದೆಂದು ಅಂದಾಜಿಸಲಾಗಿರುತ್ತದೆ. ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು ನೋಡಲು ವೈಶಿಷ್ಟ್ಯಪೂರ್ಣವಾಗಿದೆ, ಹೇಮಾವತಿಯ ವೀರಶೈವ ಸಮುದಾಯದ ಮನೆಯಲ್ಲಿ ಮೂರು ಕಾಲಭೈರವ ವಿಗ್ರಹಗಳಿದ್ದ ಕಾರಣ ಆ ಮನೆಗೆ ನಾನಾ ತೊಂದರೆಗಳು ಬಂದು ಎಲ್ಲರೂ ಮೃತರಾಗಿ ಒಬ್ಬ ಹೆಣ್ಣು ಮಗಳು ಉಳಿದಿದ್ದಳು, ಆಕೆಯ ಕನಸಿನಲ್ಲಿ ಸನ್ಯಾಸಿಯೊಬ್ಬ ಕಾಣಿಸಿಕೊಂಡು ಮನೆಯಲ್ಲಿ ಮೂರು ಕಾಲಭೈರವ ವಿಗ್ರಹಗಳಿರುವುದರಿಂದ ಮನೆ ಊರ್ಜಿತಕ್ಕೆ ಬಂದಿಲ್ಲ ನಿಮ್ಮ ಮನೆಗೆ ಬರುವ ನುಂಕೆಮಲೆ ಮಠದ ಸ್ವಾಮಿಗಳಿಗೆ ವಿಗ್ರಹಗಳನ್ನು ಕೊಟ್ಟುಬಿಡು ಎಂದು ಹೇಳಿದ ಹಾಗಾಗಿ ಕನಸಿನಲ್ಲಿ ಕಂಡಂತೆ ಕೆಲ ದಿನಗಳ ಬಳಿಕ ನುಂಕೆಮಲೆ ಶ್ರೀಗಳು ಹೇಮಾವತಿಗೆ ಬಂದಾಗ ಅವರಿಗೆ ಆಕೆಯು ವಿಗ್ರಹಗಳನ್ನು ಒಪ್ಪಿಸಿದಳಂತೆ. ಅದರಲ್ಲಿ ಒಂದನ್ನು ಹೇಮಾವತಿಯಲ್ಲಿ, ಮತ್ತೊಂದನ್ನು ಚಳ್ಳಕೆರೆ ತಾಲ್ಲೂಕು ಪಡಗಬಂಡೆಯಲ್ಲಿ ಹಾಗೂ ಕೊನೆಯದನ್ನು ವದ್ದೀಕೆರೆಯ ಯತಿಸಿದ್ದರ ಗದ್ದಿಗೆ ಮೇಲೆ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತಿದೆ.
ಒಮ್ಮೆ ರತ್ನಪಾಡಿ ಎಂಬ ವ್ಯಾಪಾರಿಯು ರತ್ನಗಳನ್ನು ತುಂಬಿಕೊಂಡು ವ್ಯಾಪಾರಕ್ಕೆ ಹೋಗುವ ದಾರಿ ಮಧ್ಯೆ ವಿಶ್ರಾಂತಿಗಾಗಿ ವದ್ದೀಕೆರೆಯಲ್ಲಿ ತಂಗಿದನು. ಇಲ್ಲಿ ಉತ್ತಮ ನೀರು ಮತ್ತು ನೆರಳಿದ್ದ ಕಾರಣ ಪ್ರಯಾಣಿಕರಿಗೆ ಒಳ್ಳೆಯ ತಂಗುದಾಣವಾಗಿತ್ತು. ಮರುದಿನ ವ್ಯಾಪಾರಿ ತನ್ನ ಜೊತೆಯಲ್ಲಿ ಮಲಗಿದ್ದ ಎತ್ತುಗಳನ್ನು (ದನಗಳನ್ನು)ಎಬ್ಬಿಸಲು ಹೋದಾಗ ಅವು ಮೇಲೇಳಲಿಲ್ಲ. ಆಗ ಯತಿಸಿದ್ದರಿಗೆ ದೇವಸ್ಥಾನ ಕಟ್ಟಿಸುತ್ತೇನೆಂದು ಹರಕೆ ಮಾಡಿಕೊಂಡು ಮಜ್ಜನ ಬಾವಿಯ ನೀರನ್ನು ತಂದು ಎತ್ತುಗಳಿಗೆ ಚಿಮುಕಿಸಿದಾಗ ಆ ಎತ್ತುಗಳು (ದನಗಳು) ಮೇಲೆದ್ದು ನಿಂತವು. ನಂತರ ಯತಿಸಿದ್ದರಿಗೆ ದೇವಾಲಯ ಕಟ್ಟಿಸಿ ತಾನು ಮಾಡಿಕೊಂಡ ಹರಕೆ ತೀರಿಸಿಕೊಂಡನು ಎಂಬ ಕಥೆ ವಾಡಿಕೆಯಲ್ಲಿರುತ್ತದೆ.
ಶ್ರೀ ಸಿದ್ದೇಶ್ವರ ಸ್ವಾಮಿ ಯಾನೆ ಶ್ರೀ ಕಾಲಬೈರವೇಶ್ವರಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಒಂದು ಬಾವಿ ಇದ್ದು ಅದನ್ನು ಮಜ್ಜನಬಾವಿ ಎಂದು ಕರೆಯುತ್ತಾರೆ. ಈ ನೀರನ್ನು ಪ್ರೋಕ್ಷಣೆ (ಚಿಮುಕಿಸಿ ಕೊಂಡರೆ) ಯಾವ ರೋಗ- ರುಜಿನಗಳು ಬರುವುದಿಲ್ಲ. ಹಾಗೂ ಬಾವಿಯ ನೀರಿನ ಸ್ನಾನದಿಂದ ಭವರೋಗ ನಿವಾರಣೆ, ಪೂರ್ವ ಜನ್ಮದ ಮತ್ತು ಈಗೀನ ಜನ್ಮದ ಕರ್ಮಗಳ ನಿವಾರಣೆ, ಸಿಟ್ಟು, ಕಾಮ, ಕ್ರೋಧ ಶಾಂತಗೊಳ್ಳುವುದು ಎಂಬ ಭಾವನೆ ಈ ಭಾಗದ ಜನರಲ್ಲಿದೆ ಮತ್ತು ವರ್ಷದ ಪ್ರತಿ ದಿನವೂ ಬಾವಿಯಲ್ಲಿ ನೀರು ತುಂಬಿದ್ದು, ಸಿದ್ದಭುಕ್ತಿಯ ದಿನದಂದು ಖಾಲಿಯಾಗುತ್ತದೆ, ಹಾಗೂ ಮಾರನೇ ದಿನ ಗಂಗಾಪೂಜೆ ನಂತರ ಪುನಃ ನೀರು ಬರುತ್ತದೆ ಎಂಬ ಪ್ರತೀತಿ ಇರುತ್ತದೆ.
ದೇವಾಲಯದ ಪ್ರವೇಶ ದ್ವಾರದಲ್ಲಿ ದ್ವಾರಪಾಲಕರ ಚಿತ್ರ ಇರುತ್ತದೆ ಹಾಗೂ ಶ್ರೀ ಸ್ವಾಮಿಯವರ ದೇವಾಲಯದ ಒಳಭಾಗದಲ್ಲಿ ಶಿವಲಿಂಗ ಮತ್ತು ಬಸವಣ್ಣ ಶ್ರೀ ಚನ್ನಕೇಶವ ದೇವರು ಇದ್ದು, ಕಾಲಬೈರವ ಪಾದ, ಶ್ರೀ ಆಂಜನೇಯ ಮೂರ್ತಿ ಮತ್ತು ಮೂರು ಕಾಲಿನ ಬೃಂಗಿ (ಕುದುರೆ) ಇದ್ದು, ಶ್ರೀ ಸ್ವಾಮಿಯವರ ವಿಗ್ರಹದಲ್ಲಿ ಶ್ವಾನದ ಚಿತ್ರ ಇರುತ್ತದೆ.
ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಸಂತಾನ ಭಾಗ್ಯ, ದೃಷ್ಟಿ ದೋಷ ನಿವಾರಣೆ, ಚರ್ಮರೋಗ ನಿವಾರಣೆ, ಕಂಕಣಭಾಗ್ಯ, ವಾಮಾಚಾರ ನಿವಾರಣೆ, ಪ್ರಾಣಿಗಳಿಗೆ ರೋಗ ರುಜಿನಗಳು ಬಂದರೆ ಸ್ವಾಮಿಯ ತೀರ್ಥಸೇವನೆಯಿಂದ ನಿವಾರಣೆಯಾಗುವುದು. ಮತ್ತು ತೀರ್ಥ ಕಾಯಿ ಮಾಡಿಕೊಳ್ಳುವುದರಿಂದ ದುಷ್ಟಶಕ್ತಿಗಳ ನಿಯಂತ್ರಣ, ಮನುಷ್ಯರ ಮತ್ತು ಮನೆಗಳ ಆಯಸ್ಸು ವೃದ್ದಿಯಾಗುವುದು. ಸದರಿ ದೇವಸ್ಥಾನದಲ್ಲಿ ಗಂಧ, ಪತ್ರೆ ಪೂಜೆ, ತೀರ್ಥ ಮತ್ತು ಮಜ್ಜನ ಸೇವೆ ಹಾಗೂ ಅರ್ಚನೆ, ಹೂವಿನ ಪ್ರಸಾದ ಪೂಜೆ, ಹೂವಿನ ಪಲ್ಲಕ್ಕಿ ಸೇವೆ, ರುದ್ರಾಭಿಷೇಕ, ಮತ್ತು ಪಂಚಾಮೃತ ಅಭಿಷೇಕ ಹಾಗೂ ಇತರೆ ಸೇವೆಗಳು ಲಭ್ಯವಿರುತ್ತವೆ.
ಶ್ರೀ ಸ್ವಾಮಿಯವರ ಸನ್ನಿಧಿಯಲ್ಲಿ ಶ್ರಾವಣ ಮಾಸದಲ್ಲಿ ಪೂಜೆಗಳನ್ನು ಮಾಡಿದರೆ ಶನಿ ದೋಷ, ನವಗ್ರಹ ದೋಷ ನಿವಾರಣೆಯಾಗುವುದು ಹಾಗೂ ಕಾರ್ತಿಕ ಮಾಸದಲ್ಲಿ ಪೂಜೆಗಳನ್ನು ಮಾಡಿದರೆ ಪಿತೃ, ಮಾತೃ, ಪೂರ್ವಿಕರ ದೋಷ ನಿವಾರಣೆಯಾಗುವುದು. ಈ ಜನ್ಮ ಮತ್ತು ಹಿಂದಿನ ಜನ್ಮದ ಪಾಪಗಳು ನಿವಾರಣೆಯಾಗುವುದು ಮತ್ತು ದೀಪಾರಾಧನೆ ಮಾಡಿದರೆ ಈ ಜನ್ಮದಲ್ಲಿ ಪುಣ್ಯ ಲಭಿಸುವುದು.