Screen Reader Access     A-AA+
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಾವಂಜೆ, ದಕ್ಷಿಣ ಕನ್ನಡ - 574146, ದಕ್ಷಿಣ ಕನ್ನಡ .
Sri Mahalingeshwara Temple, Pavanje, Dakshina Kannada - 574146, Dakshina Kannada District [TM000114]
×
Temple History

ಇತಿಹಾಸ

ಮಹಾಲಿಂಗೇಶ್ವರ ದೇವಸ್ಥಾನವು ಪಾವಂಜೆ ಗ್ರಾಮದ ಎತ್ತರದ ದಿಣ್ಣೆಯ ಮೇಲಿದೆ. ಈ ದೇವಾಲಯದ ಮೊದಲಿನ ಹೆಸರು “ಪಾಳೆಉಂಜ” ಮಹಾದೇವ, ಸೀಮೆ ದೇವಸ್ಥಾನವಾಗಿರುವ ಈ ದೇವಾಲಯವು ಎತ್ತರದ ದಿಣ್ಣೆಯ ಮೇಲೆ ನಂದಿನಿ ನದಿಯು ಪೂರ್ವದಿಂದ ದಕ್ಷಿಣಾಭಿಮುಖವಾಗಿ ಹರಿದು ಪಶ್ಚಿಮಕ್ಕೆ ತಿರುಗುವ ಸುತ್ತಿನ ಉತ್ತರದ ದಡದ ಮೇಲಿದೆ. ಸಾಕಷ್ಟು ಎತ್ತರದ ಸ್ಥಾನದಲ್ಲಿರುವ ಈ ದೇವಾಲಯವು ಬಹಳ ದೂರದಿಂದಲೇ ಕಾಣುತ್ತದೆ. ಈ ದೇವಾಲಯದ ಇರುವಿಕೆ ಪಾವಂಜೆ ಗ್ರಾಮಕ್ಕೆ ಗಾಂಭೀರ್ಯವನ್ನು ಕೊಟ್ಟಿದೆ. ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಎತ್ತರದಿಂದ ಬರಲು ದಾರಿಯಿದೆ. ದಿಣ್ಣೆಯ ತುದಿಯಲ್ಲಿ ಮಧ್ಯಮ ಗಾತ್ರದ ಕಟ್ಟಡವಿದೆ. ಇದರಲ್ಲಿರುವ ದೇವಾಲಯ ಚತುರಸ್ತಂಭಗೃಹ ಎದುರು ತೆರದ ಮಂಟಪ, ಸುತ್ತಲೂ ಪ್ರಾಕಾರಇದರ ಹೊರಗೆ ಹೊರಾಂಗಣ ಇದರ ನೈಋತ್ಯ ದಿಕ್ಕಿನಲ್ಲಿ ಗಣಪತಿಯ ಗುಡಿ ವಾಯುವ್ಯದಲ್ಲಿ ವಿಜಯನಗರ ಅರಸ ಇಮ್ಮಡಿ ದೇವರಾಯನು ನೀಡುವ ದಾನ ಶಾಸನವಿದೆ....

ಸಾಹಿತ್ಯದ ಹಿನ್ನೆಲೆ

ಸ್ಕಾಂದ ಪುರಾಣದಲ್ಲಿ ಈ ಸ್ಥಳವು ಕುಟಜ ಪವ೵ತವೆಂದು ಉಲ್ಲೇಖಗೊಂಡಿದೆ ಎಂದು ತಿಳಿಯಲಾಗಿದೆ. ಪುರಾತನ ಕಾಲದಲ್ಲಿ ಕುಟಜ ಪವ೵ತದ ಪಶ್ಚಿಮ ದಿಕ್ಕಿನಲ್ಲಿ ನದಿ ಹರಿಯುತ್ತಿತ್ತೆಂದೂ ಒಂದು ಸಂದಭ೵ದಲ್ಲಿ ವಿಪರೀತವಾದ ಮಳೆಯಿಂದ ಅಚ೵ಕರಿಗೆ ಪೂಜೆ ಮಾಡಲು ನೆರೆಯ ಆತಂಕ ಮಾಡಿದುದರ ಪರಿಣಾಮವಾಗಿ, ಅಚ೵ಕರ ಚಿಂತೆಯನ್ನು ಹೋಗಲಾಡಿಸಲೆಂಬಂತೆ ನದಿಯು ಪೂವ೵ಕ್ಕೆ ದಿಕ್ಕನ್ನು ಬದಲಾಯಿಸಿತ್ತೆಂದೂ ಹಿರಿಯರ ನಂಬಿಕೆ. ಚಾರಿತ್ರಿಕವಾಗಿ ಈ ದೇವಾಲಯದ ಸ್ಥಾಪನೆಯ ಕಾಲವನ್ನು ನಿಶ್ಚಿತವಾಗಿ ಹೇಳುವುದು ಕಷ್ಟ. ಹೊಯ್ಸಳ ರಾಜರ ಹಿರಿಯಣ್ಣಗಳಿಂದ ಪ್ರಾರಂಭವಾಗಿ ಕ್ರಿ.ಶ.1417-18 ರಲ್ಲಿ ವಿಜಯನಗರದ ದೇವರಾಯನ ಕಾಲದಲ್ಲಿ “ಪಾಳಉಂಜೆ” ಯ ಮಹಾದೇವರಿಗೆ ದತ್ತಿಬಿಟ್ಟ ಉಲ್ಲೇಖವಿದೆ. ಇಲ್ಲಿರುವ 30 ಸೆಂ.ಮೀ. ಎತ್ತರದ ಪಂಚಲೋಹದ ಸದಾಶಿವ ವಿಗ್ರಹವು ಕ್ರಿ.ಶ. 14ನೇ ಶತಮಾನದ ರಚನೆಯೆನ್ನಬಹುದು. ಈ ದೇವಾಲಯ ಚತುರಸ್ರವಾದ ಮಧ್ಯಮ ಗಾತ್ರದ ಗಭ೵ಗ್ರಹವನ್ನು ಹೊಂದಿದೆ. ಉಪಸ್ಥಾನದೇವತೆ ಗಣೇಶನ...