ಮಹಾಲಿಂಗೇಶ್ವರ ದೇವಸ್ಥಾನವು ಪಾವಂಜೆ ಗ್ರಾಮದ ಎತ್ತರದ ದಿಣ್ಣೆಯ ಮೇಲಿದೆ. ಈ ದೇವಾಲಯದ ಮೊದಲಿನ ಹೆಸರು “ಪಾಳೆಉಂಜ” ಮಹಾದೇವ, ಸೀಮೆ ದೇವಸ್ಥಾನವಾಗಿರುವ ಈ ದೇವಾಲಯವು ಎತ್ತರದ ದಿಣ್ಣೆಯ ಮೇಲೆ ನಂದಿನಿ ನದಿಯು ಪೂರ್ವದಿಂದ ದಕ್ಷಿಣಾಭಿಮುಖವಾಗಿ ಹರಿದು ಪಶ್ಚಿಮಕ್ಕೆ ತಿರುಗುವ ಸುತ್ತಿನ ಉತ್ತರದ ದಡದ ಮೇಲಿದೆ. ಸಾಕಷ್ಟು ಎತ್ತರದ ಸ್ಥಾನದಲ್ಲಿರುವ ಈ ದೇವಾಲಯವು ಬಹಳ ದೂರದಿಂದಲೇ ಕಾಣುತ್ತದೆ. ಈ ದೇವಾಲಯದ ಇರುವಿಕೆ ಪಾವಂಜೆ ಗ್ರಾಮಕ್ಕೆ ಗಾಂಭೀರ್ಯವನ್ನು ಕೊಟ್ಟಿದೆ. ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಎತ್ತರದಿಂದ ಬರಲು ದಾರಿಯಿದೆ. ದಿಣ್ಣೆಯ ತುದಿಯಲ್ಲಿ ಮಧ್ಯಮ ಗಾತ್ರದ ಕಟ್ಟಡವಿದೆ. ಇದರಲ್ಲಿರುವ ದೇವಾಲಯ ಚತುರಸ್ತಂಭಗೃಹ ಎದುರು ತೆರದ ಮಂಟಪ, ಸುತ್ತಲೂ ಪ್ರಾಕಾರಇದರ ಹೊರಗೆ ಹೊರಾಂಗಣ ಇದರ ನೈಋತ್ಯ ದಿಕ್ಕಿನಲ್ಲಿ ಗಣಪತಿಯ ಗುಡಿ ವಾಯುವ್ಯದಲ್ಲಿ ವಿಜಯನಗರ ಅರಸ ಇಮ್ಮಡಿ ದೇವರಾಯನು ನೀಡುವ ದಾನ ಶಾಸನವಿದೆ....