Sri Egguttappa Temple, Kunjila, Padi, Kodagu District [TM000127]
×
Temple History
ಸ್ಥಳ ಪುರಾಣ
ಈ ದೇವರ ಹೆಸರು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ (ಈಶ್ವರ, ಶಿವ) ಪಾಡಿ ಎಂದರೆ ಮೊದಲನೆಯದು ಇಗ್ಗು ಎಂದರೆ ಮೂಲ ಭಾಷೆಯಲ್ಲಿ ಅನ್ನು ಎಂದು, ತಪ್ಪ ಎಂದರೆ ಕೊಡುವುದು ಎಂದು ಅರ್ಥ. ಮತ್ತು ಇದನ್ನು ಮಳೆ ದೇವರು, ಬೆಳೆ ದೇವರೆಂದು ಮತ್ತು ಕೊಡವರ ಕುಲದೇವರೆಂದೇ ಆರಾಧಿಸಲ್ಪಪಡುತ್ತದೆ. ಸುಮಾರು 1300 ವರ್ಷಗಳ ಹಿಂದೆ ಶಿವಲಿಂಗವು ಇಲ್ಲೇ ಉದ್ಭವವಾಗಿರುತ್ತದೆ. ಸುಬ್ರಮಣ್ಯನಾದ ಇಗ್ಗುತ್ತಪ್ಪ ದೇವರು ಕೇರಳದಿಂದ ಬಂದು ಇಲ್ಲಿ ನೆಲೆ ನಿಂತ ದೇವರಾಗಿರುತ್ತಾರೆ. ದೇವರು ಬರುವಾಗ ಮನುಷ್ಯ ರೂಪದಲ್ಲಿ ಬಂದು, ಇಲ್ಲಿನ ಜನರಿಗೆ ದೇವತಾ ಕಾರ್ಯದಲ್ಲಿ ನಂಬಿಕೆ ಇಲ್ಲದಂತ ಸಮಯದಲ್ಲಿ ಈ ಜನರನ್ನು ಕಂಡು ದೇವತಾ ಕಾರ್ಯದಲ್ಲಿ ನಂಬಿಕೆ ಬರುವಂತೆ ಮಾಡಿ, ಪೂಜೆ ಪುನಸ್ಕಾರಗಳನ್ನು ಮಾಡುವಂತೆ ಮಾಡಿದ ದೇವರಾಗಿರುತ್ತಾರೆ. ಈ ದೇವಾಲಯವನ್ನು ಊರಿನವರೇ ಸೇರಿ ಕಟ್ಟಿರುತ್ತಾರೆ. ಲಿಂಗರಾಜರ...ಈ ದೇವರ ಹೆಸರು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ (ಈಶ್ವರ, ಶಿವ) ಪಾಡಿ ಎಂದರೆ ಮೊದಲನೆಯದು ಇಗ್ಗು ಎಂದರೆ ಮೂಲ ಭಾಷೆಯಲ್ಲಿ ಅನ್ನು ಎಂದು, ತಪ್ಪ ಎಂದರೆ ಕೊಡುವುದು ಎಂದು ಅರ್ಥ. ಮತ್ತು ಇದನ್ನು ಮಳೆ ದೇವರು, ಬೆಳೆ ದೇವರೆಂದು ಮತ್ತು ಕೊಡವರ ಕುಲದೇವರೆಂದೇ ಆರಾಧಿಸಲ್ಪಪಡುತ್ತದೆ. ಸುಮಾರು 1300 ವರ್ಷಗಳ ಹಿಂದೆ ಶಿವಲಿಂಗವು ಇಲ್ಲೇ ಉದ್ಭವವಾಗಿರುತ್ತದೆ. ಸುಬ್ರಮಣ್ಯನಾದ ಇಗ್ಗುತ್ತಪ್ಪ ದೇವರು ಕೇರಳದಿಂದ ಬಂದು ಇಲ್ಲಿ ನೆಲೆ ನಿಂತ ದೇವರಾಗಿರುತ್ತಾರೆ. ದೇವರು ಬರುವಾಗ ಮನುಷ್ಯ ರೂಪದಲ್ಲಿ ಬಂದು, ಇಲ್ಲಿನ ಜನರಿಗೆ ದೇವತಾ ಕಾರ್ಯದಲ್ಲಿ ನಂಬಿಕೆ ಇಲ್ಲದಂತ ಸಮಯದಲ್ಲಿ ಈ ಜನರನ್ನು ಕಂಡು ದೇವತಾ ಕಾರ್ಯದಲ್ಲಿ ನಂಬಿಕೆ ಬರುವಂತೆ ಮಾಡಿ, ಪೂಜೆ ಪುನಸ್ಕಾರಗಳನ್ನು ಮಾಡುವಂತೆ ಮಾಡಿದ ದೇವರಾಗಿರುತ್ತಾರೆ. ಈ ದೇವಾಲಯವನ್ನು ಊರಿನವರೇ ಸೇರಿ ಕಟ್ಟಿರುತ್ತಾರೆ. ಲಿಂಗರಾಜರ ಕಾಲದಲ್ಲಿ ಇದನ್ನು ಜೀರ್ಣೋದ್ಧಾರ ಮಾಡಲಾಯಿತು. ಶ್ರೀಮಾತೆ ಕಾವೇರಿಯನ್ನು ಕೊಡಗಿನ ಕುಲದೇವತೆ ತಾಯಿ ಎಂದು ಹಾಗೂ ಶ್ರೀ ಇಗ್ಗುತ್ತಪ್ಪ ದೇವರನ್ನು ಕುಲದೇವರ ತಂದೆ ಸ್ಥಾನದಲ್ಲಿ ಆರಾಧಿಸಲ್ಪಡುತ್ತಾರೆ. ಇಲ್ಲಿ ಹುತ್ತರಿ ಹಬ್ಬವು ಅತೀ ಪ್ರಾಮುಖ್ಯವಾದ ಹಬ್ಬವಾಗಿರುತ್ತದೆ.
ದೇವರು ನೆಲೆ ನಿಂತಂತ ಸಮಯದಲ್ಲಿ ನೆಟ್ಟ ಬೆಳೆಗಳನ್ನು ಕುಯ್ಯಲು ಯಾವುದೇ ಹಬ್ಬ ಆಚರಣೆಗಳು ಇಲ್ಲದಂತ ಸಮಯದಲ್ಲಿ ದೇವರು ಹುತ್ತರಿ ಹಬ್ಬ (ಸುಗ್ಗಿ ಹಬ್ಬ) ಎಂದು ಪ್ರಚಾರ ಮಾಡಿದಂತ ಪ್ರತೀತಿ ಈ ದೇವರಿಗಿರುತ್ತದೆ. ಸುಮಾರು ವರ್ಷಕ್ಕೆ 5 ಸಲ ಹಬ್ಬ ನಡೆಯಲಿದ್ದು ಇದರಲ್ಲಿ ಹುತ್ತರಿ ಹಬ್ಬವು ಪ್ರಾಮುಖ್ಯತೆಯನ್ನು ಪಡೆದಿದೆ. ಇದರ ಮೂಲ ಸ್ಥಾನವು ಸುಮಾರು ಐದು ಕಿ.ಮೀ ದೂರದ ಬೆಟ್ಟದ ಮೇಲೆ ಇದ್ದು ವರ್ಷಕ್ಕೆ 5 ಸಲ ಉತ್ಸವ ಮೂರ್ತಿಯನ್ನು ಶಿರದ ಮೇಲೆ ಹೊತ್ತುಕೊಂಡು ಹೋಗಿ ಇದರ ಜೊತೆಯಲ್ಲಿ ದನಗಳಿಗೆ ಸಿಂಗಾರ ಮಾಡಿ ಇದನ್ನು ಸಮೇತ ಅಲ್ಲಿಗೆ ಕರೆತಂದು ಪೂಜೆ ಪುನಸ್ಕಾರವನ್ನು ಮಾಡಲಾಗುವುದು. ಇಲ್ಲಿ ಇರುವ 2 ಕೆರೆಯಲ್ಲಿ ನೀರು ಸದಾ ಬತ್ತದೇ ಇರುತ್ತದೆ. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ತುಲಾಭಾರ ಸೇವೆಯು ಅತೀ ಪ್ರಮುಖವಾದ ಸೇವೆಯಾಗಿರುತ್ತದೆ. ಇಲ್ಲಿ ಪ್ರತಿನಿತ್ಯ ಅನ್ನದಾನವಿದ್ದು ಈ ತುಲಾಭಾರ ಪೂಜೆಯಿಂದಲೇ ಅನ್ನದಾನ ಸೇವೆಯನ್ನು ಮಾಡಲಾಗುತ್ತದೆ. ಇಲ್ಲಿ ಪ್ರತಿನಿತ್ಯ ಮಹಾಪೂಜೆ, ಅಭಿಷೇಕ, ಸತ್ಯನಾರಾಯಣ ಪೂಜೆ ಮತ್ತು ಇತರೆ ಪೂಜೆಗಳನ್ನು ನಡೆಸಲಾಗುತ್ತದೆ. ಪ್ರತೀನಿತ್ಯ ಬೆಳಿಗ್ಗೆ 5.30 ಕ್ಕೆ ತೆರೆಯಲ್ಪಟ್ಟು ಮಧ್ಯಾಹ್ನ 12.30 ಕ್ಕೆ ಮಹಾ ಮಂಗಳಾರತಿ ಪೂಜೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಏಳರ ತನಕ ತೆರೆಯಲ್ಪಟ್ಟು ಪೂಜೆ ಪುನಸ್ಕಾರ ನಡೆಯಲಿದೆ. ಇಲ್ಲಿ ಬಂದು ಬೇಡಿಕೊಂಡ ಭಕ್ತರುಗಳಿಗೆ, ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳ ಭಾಗ್ಯವನ್ನು ಈ ದೇವರು ನೀಡುತ್ತಾರೆ. ಯಾವುದಾದರು ಖಾಯಿಲೆ ಮತ್ತು ಕಷ್ಟದ ಸಮಯದಲ್ಲಿ ಬೇಡಿಕೊಂಡರೆ ಅದಕ್ಕೆ ಪ್ರತಿಫಲ ಸಿಗುವುದು. ಮಳೆ ಬರದಂತಹ ಸಮಯದಲ್ಲಿ ಮಳೆಗಾಗಿ ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಿದರೆ ಮಳೆ ಬಂದು ಭೂಮಿ ತಂಪಾಗುವುದು ಈ ದೇವರ ಪ್ರತೀತಿ.
ದೇವಾಲಯಗಳ ಇತಿಹಾಸ, ಸ್ಥಳ ಪುರಾಣ, ದೇವಾಲಯಗಳಲ್ಲಿನ ವಿಶೇಷತೆ ಹಾಗೂ ವಿಶೇಷ ಪೂಜೆಯಿಂದ ಭಕ್ತರಿಗೆ ಲಭಿಸುವ ಫಲ, ದೇವಾಲಯದ ಪ್ರಸಿದ್ದತೆ ಮತ್ತು ದೇವಾಲಯದ ವಿಶೇಷ ಪೂಜೆಯ ಮಾಹಿತಿ.