ಶ್ರೀ ಕೊಡಮಂತ್ತಾಯ ದೈವಸ್ಥಾನ ಶಿಬರೂರು, ದೇಲಂತಬೆಟ್ಟು, ದಕ್ಷಿಣ ಕನ್ನಡ - 575030, ದಕ್ಷಿಣ ಕನ್ನಡ .
Sri Kodamanthaya Temple Shibaroor, Delantabettu, Dakshina Kannada - 575030, Dakshina Kannada District [TM000131]
×
Temple History
ಇತಿಹಾಸ
ತಾಂಗಡಿ ಬರ್ಕೆಯ ದುಗ್ಗಣ್ಣಕಾವೇರರು ಹಾಗೂ ತಿಬಾರಗುತ್ತಿನಲ್ಲಿ ತಿಮ್ಮತ್ತಿಕರಿವಾಳ್ ಎಂಬವರು ಆಡಳಿತ ನಡೆಸುತ್ತಿದ್ದರು. ಒಂದು ದಿನ ಅವರು ಶ್ರೀವದುರ್ಗಾಪರಮೇಶ್ವರಿ ಹಾಗೂ ಕೊಡಮಣಿತ್ತಾಯನ ಮಹಿಮಾ ಕೇಂದ್ರವಾದ ಇರುವೈಲು ದೇವಸ್ಥಾನದ ಉತ್ಸವಕ್ಕೆ ಹೋದರು. ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಂಡು ಭಕ್ತಿಯಿಂದ ಹರಕೆ ಸಲ್ಲಿಸಿ, ಪೊಸದೈವನ್ನು ಕಂಡು ಹರಕೆ ಸಲ್ಲಿಸಿ ಬರಲೆಂದು ಕೆಳಬರ್ಕೆಗೆ ಬರುತ್ತಾರೆ. ಅಲ್ಲಿ ದೈವದ ದರ್ಶನ ಪೆಡೆದು ಹರಕೆ ಸಲ್ಲಿಸಿ ಬಾಯಾರಿಕೆ ಪರಿಹರಿಸಿಕೊಳ್ಳುವುದಕ್ಕಾಗಿ ಕೆಳಬರ್ಕೆಗೆ ತೆರಳುತ್ತಾರೆ. ಅಲ್ಲಿ ಅವರಿಗೆ ಒಂದೊಂದು ಎತ್ತು ಮತ್ತು ಕೋಳಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇವನ್ನು ಹಿಡಿದುಕೊಂಡು ಬರುವಾಗ ದಾರಿಮಧ್ಯೆ ಇಬ್ಬರಿಗೂ ಬಾಯಾರಿಕೆಯಾಗುತ್ತದೆ. ಇನ್ನೇನು ಮಾಡುವುದೆಂದು ತಿಳಿಯದೇ ಎತ್ತುಗಳನ್ನು ದಾರಿ ಮಧ್ಯೆ ಇರುವ ಅಶ್ವತ್ಥ ಮರದಡಿ ಕಟ್ಟಿ ಹಾಕಿ ತಾವು ಅಲ್ಲೇ ಸಮೀಪವಿರುವ ನಡ್ಡೋಡಿಗೆ ಹೋಗುತ್ತಾರೆ. ಅಲ್ಲಿ ಬಾಯಾರಿಕೆ, ಆಯಾಸವನ್ನು ಪರಿಹರಿಸಿಕೊಂಡು ಬಿಸಿಲ ಝಳ...ತಾಂಗಡಿ ಬರ್ಕೆಯ ದುಗ್ಗಣ್ಣಕಾವೇರರು ಹಾಗೂ ತಿಬಾರಗುತ್ತಿನಲ್ಲಿ ತಿಮ್ಮತ್ತಿಕರಿವಾಳ್ ಎಂಬವರು ಆಡಳಿತ ನಡೆಸುತ್ತಿದ್ದರು. ಒಂದು ದಿನ ಅವರು ಶ್ರೀವದುರ್ಗಾಪರಮೇಶ್ವರಿ ಹಾಗೂ ಕೊಡಮಣಿತ್ತಾಯನ ಮಹಿಮಾ ಕೇಂದ್ರವಾದ ಇರುವೈಲು ದೇವಸ್ಥಾನದ ಉತ್ಸವಕ್ಕೆ ಹೋದರು. ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಂಡು ಭಕ್ತಿಯಿಂದ ಹರಕೆ ಸಲ್ಲಿಸಿ, ಪೊಸದೈವನ್ನು ಕಂಡು ಹರಕೆ ಸಲ್ಲಿಸಿ ಬರಲೆಂದು ಕೆಳಬರ್ಕೆಗೆ ಬರುತ್ತಾರೆ. ಅಲ್ಲಿ ದೈವದ ದರ್ಶನ ಪೆಡೆದು ಹರಕೆ ಸಲ್ಲಿಸಿ ಬಾಯಾರಿಕೆ ಪರಿಹರಿಸಿಕೊಳ್ಳುವುದಕ್ಕಾಗಿ ಕೆಳಬರ್ಕೆಗೆ ತೆರಳುತ್ತಾರೆ. ಅಲ್ಲಿ ಅವರಿಗೆ ಒಂದೊಂದು ಎತ್ತು ಮತ್ತು ಕೋಳಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇವನ್ನು ಹಿಡಿದುಕೊಂಡು ಬರುವಾಗ ದಾರಿಮಧ್ಯೆ ಇಬ್ಬರಿಗೂ ಬಾಯಾರಿಕೆಯಾಗುತ್ತದೆ. ಇನ್ನೇನು ಮಾಡುವುದೆಂದು ತಿಳಿಯದೇ ಎತ್ತುಗಳನ್ನು ದಾರಿ ಮಧ್ಯೆ ಇರುವ ಅಶ್ವತ್ಥ ಮರದಡಿ ಕಟ್ಟಿ ಹಾಕಿ ತಾವು ಅಲ್ಲೇ ಸಮೀಪವಿರುವ ನಡ್ಡೋಡಿಗೆ ಹೋಗುತ್ತಾರೆ. ಅಲ್ಲಿ ಬಾಯಾರಿಕೆ, ಆಯಾಸವನ್ನು ಪರಿಹರಿಸಿಕೊಂಡು ಬಿಸಿಲ ಝಳ ಕಡಿಮೆಯಾಗಿ ಗಾಳಿ ಬೀಸಲಾರಂಭಿಸಿದಾಗ ಪ್ರಯಾಣ ಮುಂದುವರಿಸಲು ಅಶ್ವತ್ಥ ಮರದಡಿಗೆ ಬರುವಾಗ ಕಟ್ಟಿಹಾಕಿರುವ ಎತ್ತುಗಳೆರಡು ಹುಡಿ ಧೂಳೆಬ್ಬಿಸಿ ಚಡಪಡಿಸುತ್ತಿರುತ್ತವೆ. ಹತ್ತಿರ ಬಂದು ನೋಡುವಾಗ ಎತ್ತುಗಳಿಗೆ ದೈವದ ಜೋಗ ಬಂದಿರುವುದು ತಿಳಿಯುತ್ತದೆ. ತಾಂಗಡಿ ಬರ್ಕೆಗೆ ಬಂದ ದುಗ್ಗಣ್ಣ ಕಾವೇರರು ತನ್ನ ಎತ್ತಿನ ಮೈಮೇಲೆ ಅವೇಶಗೊಂಡಿರುವುದು ಏನೆಂದು ತಿಳಿಯಲು ಬಲ್ಯಾಯನ್ನು ಬರಹೇಳಿದರು. ಇಟ್ಟ ರಾಶಿಫಲದಲ್ಲಿ ಒರಿಉಲ್ಲಾಯ ಹಾಗೂ ಧರ್ಮದೈವ ಇರುವೈಲು ಕ್ಷೇತ್ರದಿಂದ ಬೋರಿ ಹಾಗೂ ಕೋರಿಯ ಎಚ್ಚಿಯಲ್ಲಿ (ಎತ್ತು ಮತ್ತು ಕೋಳಿಯ ಅವೇಶದಲ್ಲಿ) ಬಂದಿರುವ ವಿಚಾರ ತಿಳಿದು ಬರುತ್ತದೆ. ಇದಕ್ಕೇನು ಮಾಡಬೇಕೆಂದು ಬಲ್ಯಾಯನಲ್ಲಿ ಕೇಳಿದಾಗ ಅವರು ಧರ್ಮದೈವಕ್ಕೂ ಉಳ್ಳಾಯನಿಗೂ ಸ್ಥಾನಮಾನ ಬೇಕು ಮಾತ್ರವಲ್ಲ ಊರು ಸೇರಿಕೊಂಡು ಸರ್ವ ಬಿರುದಾವಳಿಯ ಆಯನ ಉತ್ಸವ (ಉತ್ಸವ, ಜಾತ್ರೆ) ಆಗಬೇಕೆಂದರು. ಹೀಗೆ ಊರು ಸೇರಿಸಿ ದುಗ್ಗಣ್ಣ ಕಾವೇರರ ನೇತೃತ್ವದಲ್ಲಿ ದೇರಿಂಜೆ ಗಿರಿ (ಎಕ್ಕಾರು ಸ್ಥಾನ)ದಲ್ಲಿ ಸರ್ವಬಿರುದಾವಳಿಯ ಆಯನ ನಡೆಸಿದರು. ದುಗ್ಗಣ್ಣ ಕಾವೇರರಿಂದ ಬೇರ್ಪಟ್ಟ ತಿಬಾರಗುತ್ತು ತಿಮ್ಮತ್ತಿಕರಿವಾಳರು ತನ್ನ ಜೊತೆಗೆ ತಂದಿರುವವ ಒಂದು ಹೋರಿ ಮತ್ತು ಹುಂಜವನ್ನು ಹಿಡಿದುಕೊಂಡು ತಿಬಾರಗುತ್ತಿಗೆ ಬರುತ್ತಾರೆ. ರಾತ್ರಿ ಹೊತ್ತು ದನಗಳ ಹಟ್ಟಿಯಲ್ಲಿ ಒಂದೇ ಸಮನೆ ದನಗಳ ಕಿರುಚಾಟ ಕೇಳಲಾರಂಭಿಸುತ್ತದೆ. ಇದೇನು ಚೋದ್ಯವೆಂದು ತಿಳಿಯದ ಗುತ್ತಿನವರು ಅಲವೂಲಿ ಪಂಚಾಂಗ ನೋಡಲು ಒರಿಉಲ್ಲಾಯ ಹಾಗೂ ಧರ್ಮದೈವ ಬಂದು ಅಳುವ ಕೂಸಿಗೂ, ಕೂಗುವ ಕರುವಿಗೂ ಪಹರೆ ಹಾಕಿರುವ ವಿಚಾರ ತಿಳಿದುಬರುತ್ತದೆ. ಹಾಗೆ ಬಂದಿರುವ ದೈವಗಳಿಗೆ ಏನಾಗಬೇಕೆಂದು ರಾಶಿಫಲ ನೋಡಿದಾಗ ಸ್ಥಾನಮಾನ ಬೇಕೆಂದು ತಿಮ್ಮತ್ತಿಕರಿವಾಳರಲ್ಲಿ ತಿಳಿಸಿದರು. ತಿಬಾರಗುತ್ತಿಗೆ ದೈವಗಳು ಬಂದಿರುವ ವಿಚಾರವನ್ನು ತಿಳಿದುಕೊಂಡು ತ್ಯಾಂಪ ಶೆಟ್ರು ಊರು ಸೇರಿಸಿ ಒಳ್ಳೆಯ ದಿನ ಮುಹೂರ್ತದಲ್ಲಿ ನಿಗದಿಪಡಿಸಿದ ಜಾಗದಲ್ಲಿ ದೈವಸ್ಥಾನಕ್ಕೆ ಕೆಸರು ಕಲ್ಲು ಹಾಕುತ್ತಾರೆ. ಜನರ ಆಪತ್ಕಾಲದಲ್ಲಿ ವಿಷವೈದ್ಯದ ಸೇವೆಯನ್ನು ಮಾಡುತ್ತಿದ್ದ ತ್ಯಾಂಪ ಶೆಟ್ರು ಅವರ ಬಳಿಯಿದ್ದ ವಿಷದ ಕಲ್ಲನ್ನು ತೆಗೆದು ಒಳ್ಳೆಯ ಗಳಿಗೆ, ಮುಹೂರ್ತದಲ್ಲಿ ತಿಬಾರಗುತ್ತಿನ ಬಾವಿಗೆ ಹಾಕಿದರು. ಈ ಬಾವಿಯ ನೀರು ವರ್ಷಕ್ಕೆ ಅಮೃತವಾಗಲೀ ಎಂಬ ವರಫಲವನ್ನು ನೀಡಿದರು. ಅರಸರಾದ ತಿಮ್ಮತ್ತಿಕರಿವಾಳರು ಊರಿನ ಹಿರಿಯರ ಹಾಗೂ ಭಕ್ತರ ಸಹಕಾರದಿಂದ ದೈವಗಳ ನೇಮವನ್ನು ಬಹಳ ಭಕ್ತಿ ಮತ್ತು ಗೌರವದಿಂದ ನಡೆಸಿಕೊಂಡು ಬಂದರು. ದೈವವೂ ಅರಸರ, ಊರವರ, ಭಕ್ತರ ಕಷ್ಟಕಾರ್ಪಣ್ಯಗಳನ್ನು ತೊಡೆದು ಊರನ್ನು ಸಂಪೂರ್ಣವಾಗಿ ಸುಭಿಕ್ಷೆಯಲ್ಲಿರುವಂತೆ ಮಾಡಿತು. ಹೀಗೆ ತಿಬಾರಸ್ಥಾನದ ಕೊಡಮಂದಾಯನ ಕೀರ್ತಿಯು ಎಲ್ಲ ದಿಕ್ಕುಗಳಿಗೆ ಹಬ್ಬಿತು.