ತಾಂಗಡಿ ಬರ್ಕೆಯ ದುಗ್ಗಣ್ಣಕಾವೇರರು ಹಾಗೂ ತಿಬಾರಗುತ್ತಿನಲ್ಲಿ ತಿಮ್ಮತ್ತಿಕರಿವಾಳ್ ಎಂಬವರು ಆಡಳಿತ ನಡೆಸುತ್ತಿದ್ದರು. ಒಂದು ದಿನ ಅವರು ಶ್ರೀವದುರ್ಗಾಪರಮೇಶ್ವರಿ ಹಾಗೂ ಕೊಡಮಣಿತ್ತಾಯನ ಮಹಿಮಾ ಕೇಂದ್ರವಾದ ಇರುವೈಲು ದೇವಸ್ಥಾನದ ಉತ್ಸವಕ್ಕೆ ಹೋದರು. ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಂಡು ಭಕ್ತಿಯಿಂದ ಹರಕೆ ಸಲ್ಲಿಸಿ, ಪೊಸದೈವನ್ನು ಕಂಡು ಹರಕೆ ಸಲ್ಲಿಸಿ ಬರಲೆಂದು ಕೆಳಬರ್ಕೆಗೆ ಬರುತ್ತಾರೆ. ಅಲ್ಲಿ ದೈವದ ದರ್ಶನ ಪೆಡೆದು ಹರಕೆ ಸಲ್ಲಿಸಿ ಬಾಯಾರಿಕೆ ಪರಿಹರಿಸಿಕೊಳ್ಳುವುದಕ್ಕಾಗಿ ಕೆಳಬರ್ಕೆಗೆ ತೆರಳುತ್ತಾರೆ. ಅಲ್ಲಿ ಅವರಿಗೆ ಒಂದೊಂದು ಎತ್ತು ಮತ್ತು ಕೋಳಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇವನ್ನು ಹಿಡಿದುಕೊಂಡು ಬರುವಾಗ ದಾರಿಮಧ್ಯೆ ಇಬ್ಬರಿಗೂ ಬಾಯಾರಿಕೆಯಾಗುತ್ತದೆ. ಇನ್ನೇನು ಮಾಡುವುದೆಂದು ತಿಳಿಯದೇ ಎತ್ತುಗಳನ್ನು ದಾರಿ ಮಧ್ಯೆ ಇರುವ ಅಶ್ವತ್ಥ ಮರದಡಿ ಕಟ್ಟಿ ಹಾಕಿ ತಾವು ಅಲ್ಲೇ ಸಮೀಪವಿರುವ ನಡ್ಡೋಡಿಗೆ ಹೋಗುತ್ತಾರೆ. ಅಲ್ಲಿ ಬಾಯಾರಿಕೆ, ಆಯಾಸವನ್ನು ಪರಿಹರಿಸಿಕೊಂಡು ಬಿಸಿಲ ಝಳ...