ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ, ಮಾಲೇಕಲ್ ತಿರುಪತಿ, ಹಾಸನ - 573103, ಹಾಸನ .
Sri Venkataramana Swamy Temple, Malekallu Thirupathi, Hassan - 573103, Hassan District [TM000134]
×
Temple History
ಸ್ಥಳ ಪುರಾಣ
ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಮಾಲೇಕಲ್ಲು ತಿರುಪತಿ ಬೆಟ್ಟದ ಮೇಲೆ ದೇವಾಲಯವನ್ನು ಪೂರ್ವಕಾಲದಲ್ಲಿ ವಶಿಷ್ಠ ಮಹರ್ಷಿಗಳು ತಪಸ್ಸು ಮಾಡಿದ ನಂತರ ಶಾಲಿವಾಹನ ಶಕೆ (14ನೇ ಶತಮಾನದಲ್ಲಿ) ಅಂಕುಶ ಮಹಾರಾಜನಿಂದ ಕಟ್ಟಿಸಲ್ಪಟ್ಟಿರುವುದಾಗಿ ತಿಳಿದುಬರುತ್ತದೆ. ಸುಮಾರು 700 ವರ್ಷಗಳಷ್ಟು ಪ್ರಾಚೀನ ಇತಿಹಾಸವಿದೆ.
ಕಾಲಾನುಕ್ರಮದಲ್ಲಿ ಆಶ್ರಮ ಎಲ್ಲವೂ ಬಿದ್ದು ಭೂಮಿಯಲ್ಲಿ ವಿಗ್ರಹವು ಮುಚ್ಚಿ ಹೋಗಿರುತ್ತದೆ. ಈ ಪ್ರಾಂತ್ಯವನ್ನು ಆಳುತ್ತಿದ್ದ ಚಿತ್ರದುರ್ಗದ ಅರಸ ಅಥವಾ ಪಾಳೇಗಾರನಾದ ಶ್ರೀ ತಿಮ್ಮಪ್ಪನಾಯಕನು ತನ್ನ ಮನೆ ದೇವರಾದ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನವಾದ ದೊಡ್ಡ ತಿರುಪತಿ ಅಂದರೆ ಈಗ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನೆಲೆಸಿರುವ ತಿರುಪತಿಗೆ ಪ್ರತಿ ವರ್ಷ ಯಾತ್ರೆ ಹೋಗುತ್ತಿದ್ದು, ಹೀಗಿರುವಾಗ ಕಾರಣಾಂತರಗಳಿಂದ ಯಾತ್ರೆಗೆ ಹೋಗಲು ಸಾಧ್ಯವಾಗದಿದ್ದು, ಚಿಂತೆಗೀಡಾದನು. ಒಂದು ದಿನ ರಾತ್ರಿ ತಿಮ್ಮಪ್ಪನಾಯಕನಿಗೆ ಕನಸಿನಲ್ಲಿ ಸ್ವಾಮಿಯು...ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಮಾಲೇಕಲ್ಲು ತಿರುಪತಿ ಬೆಟ್ಟದ ಮೇಲೆ ದೇವಾಲಯವನ್ನು ಪೂರ್ವಕಾಲದಲ್ಲಿ ವಶಿಷ್ಠ ಮಹರ್ಷಿಗಳು ತಪಸ್ಸು ಮಾಡಿದ ನಂತರ ಶಾಲಿವಾಹನ ಶಕೆ (14ನೇ ಶತಮಾನದಲ್ಲಿ) ಅಂಕುಶ ಮಹಾರಾಜನಿಂದ ಕಟ್ಟಿಸಲ್ಪಟ್ಟಿರುವುದಾಗಿ ತಿಳಿದುಬರುತ್ತದೆ. ಸುಮಾರು 700 ವರ್ಷಗಳಷ್ಟು ಪ್ರಾಚೀನ ಇತಿಹಾಸವಿದೆ.
ಕಾಲಾನುಕ್ರಮದಲ್ಲಿ ಆಶ್ರಮ ಎಲ್ಲವೂ ಬಿದ್ದು ಭೂಮಿಯಲ್ಲಿ ವಿಗ್ರಹವು ಮುಚ್ಚಿ ಹೋಗಿರುತ್ತದೆ. ಈ ಪ್ರಾಂತ್ಯವನ್ನು ಆಳುತ್ತಿದ್ದ ಚಿತ್ರದುರ್ಗದ ಅರಸ ಅಥವಾ ಪಾಳೇಗಾರನಾದ ಶ್ರೀ ತಿಮ್ಮಪ್ಪನಾಯಕನು ತನ್ನ ಮನೆ ದೇವರಾದ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನವಾದ ದೊಡ್ಡ ತಿರುಪತಿ ಅಂದರೆ ಈಗ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನೆಲೆಸಿರುವ ತಿರುಪತಿಗೆ ಪ್ರತಿ ವರ್ಷ ಯಾತ್ರೆ ಹೋಗುತ್ತಿದ್ದು, ಹೀಗಿರುವಾಗ ಕಾರಣಾಂತರಗಳಿಂದ ಯಾತ್ರೆಗೆ ಹೋಗಲು ಸಾಧ್ಯವಾಗದಿದ್ದು, ಚಿಂತೆಗೀಡಾದನು. ಒಂದು ದಿನ ರಾತ್ರಿ ತಿಮ್ಮಪ್ಪನಾಯಕನಿಗೆ ಕನಸಿನಲ್ಲಿ ಸ್ವಾಮಿಯು ಕಾಣಿಸಿಕೊಂಡು ಇದೇ ಬೆಟ್ಟದಲ್ಲಿ ನಾನು ಇರುವುದಾಗಿಯೂ ಅಲ್ಲಿ ನನ್ನನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸು ಎಂದು ಕನಸಿನಲ್ಲಿ ಹೇಳಲಾಗಿ ಮತ್ತೆ ಚಿಂತೆಗೀಡಾಗಿ ಮತ್ತೊಂದು ದಿನ ಕನಸಿನಲ್ಲಿ ಬಂದು ತಾನು ತುಳಸಿ ಮಾಲೆಯನ್ನು ಬೆಟ್ಟದಲ್ಲಿ ಬಿಟ್ಟುಕೊಂಡು ಬೆಟ್ಟಕ್ಕೆ ಹೋಗಿರುವ ಜಾಗದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸು ಎಂದು ಆಜ್ಞಾಪಿಸಲಾಗಿ, ಮಾಲೆಯು ಅಂತ್ಯಗೊಂಡ ಜಾಗದಲ್ಲಿ ನನ್ನನ್ನು ಪ್ರತಿಷ್ಠಾಪಿಸು ಎಂದು ಹೇಳಲಾಗಿ ಅದರಂತೆ ಶ್ರೀಯವರ ಆಜ್ಞಾನುಸಾರ ಅರಸನು ದೇವಾಲಯ ನಿರ್ಮಿಸಿದನಂತೆ. ಇದಕ್ಕೆ ಮಾಲೇಕಲ್ಲು ತಿರುಪತಿ ಎಂದು ಪ್ರಸಿದ್ಧಿಗೊಂಡಿದೆ.
ವಿಜಯನಗರದ ಅರಸರು 13ನೇ ಶತಮಾನದಿಂದ 16ನೇ ಶತಮಾನದವರೆಗೆ ಆಳುತ್ತಿದ್ದರು. ಕ್ರಿ.ಶ. 1564ನೇ ಇಸವಿ ತಾಳಿಕೋಟೆ ಯುದ್ಧವಾದ ನಂತರ ವಿಜಯನಗರ ಸಂಸ್ಥಾನವು ಕ್ಷೀಣದೆಸೆಯುಂಟಾಗಿ ಪಾಳೇಗಾರರು ಸ್ವತಂತ್ರವಾಗಿ ಅಧಿಕಾರ ಮಾಡಲು ಆರಂಭಿಸಿದರು. ಆ ಕಾಲದಲ್ಲಿ ಅಮರಗಿರಿಯು ತರೀಕೆರೆ ಪಾಳೇಗಾರರರಿಗೆ ಸೇರಿದ್ದೆಂತಲೂ ಇಲ್ಲಿ ಪಾಳೇಗಾರರಾದ ತಿಮ್ಮನಾಯಕ, ಹನುಮಪ್ಪನಾಯಕ, ಸರ್ಜಾ ಹನುಮಪ್ಪನಾಯಕ, ಸೀತಾನಾಯಕ ಮುಂತಾದವರು ಆಳಿದರು ಎಂದು ಕಂಡುಬರುತ್ತದೆ.
ಪಾಳೇಗಾರರಾದ ಶ್ರೀ ತಿಮ್ಮಪ್ಪನಾಯಕರ ಆಳ್ವಿಯಕೆಯಲ್ಲಿ ಪಟ್ಟಣದ ಸುತ್ತಮುತ್ತಲಿನ ಜನರುಗಳಿಗೆ ನೀರಿಗೆ ಬರ ಬಂದಿದ್ದು, ಆ ಸಮಯದಲ್ಲಿ ಒಂದು ಕೆರೆಯನ್ನು ನಿರ್ಮಿಸಲು ಪ್ರಾರಂಭಿಸಿದಾಗ ಕೆರೆಯ ತಳಪಾಯದಲ್ಲಿ ಸಾಲಿಗ್ರಾಮ ಶಿಲೆಯುಳ್ಳ ಶ್ರೀ ಗೋವಿಂದರಾಜಸ್ವಾಮಿ ವಿಗ್ರಹ ದೊರೆತಿದ್ದು, ಬೆಟ್ಟದ ಕೆಳಗೆ ದೊರಕಿದ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಅಲ್ಲಿಯೇ ಗರ್ಭಗುಡಿಯನ್ನು ಕಟ್ಟಿಸಿದ್ದು ಇದು ಮಾನುಷ ಪ್ರತಿಷ್ಠೆಯಾಗಿರುತ್ತದೆ.
ದೇವಸ್ಥಾನಕ್ಕೆ ಈ ಕೆರೆಯು ಪಶ್ಚಿಮ ದಿಕ್ಕಿನಲ್ಲಿದ್ದು, ಈ ಕೆರೆಯನ್ನು ತಿಮ್ಮಪ್ಪನಾಯಕನೇ ಕಟ್ಟಿಸಿದ್ದರಿಂದ ಈ ಕೆರೆಯ ಹೆಸರು ತಿಮ್ಮಪ್ಪನಾಯಕನ ಕೆರೆ ಎಂದು ಈಗಲೂ ಪ್ರಸಿದ್ದಿ ಪಡೆದಿದೆ. ಈ ಬೆಟ್ಟದ ಕೆಳಭಾಗದಲ್ಲಿ ಶ್ರೀ ಗೋವಿಂದರಾಜಸ್ವಾಮಿ ಮತ್ತು ಶ್ರೀ ಲಕ್ಷ್ಮೀಅಮ್ಮನ ದೇವಾಲಯವನ್ನು ನಿರ್ಮಿಸಿದ್ದರಿಂದ ಈ ತಪ್ಪಲಿನ ಪ್ರದೇಶವನ್ನು ಗೋವಿಂದರಾಜಪಟ್ಟಣ ಎಂದು ಕರೆಯಲಾರಂಭಿಸಿದರು. ಈ ಬಗ್ಗೆ ಯಾವುದೇ ರೀತಿಯ ಗ್ರಂಥಗಳಾಗಲೀ, ಲೇಖನಗಳಾಗಲೀ, ಶಾಸನಗಳಾಗಲೀ ಆಧಾರವಾಗಿ ದೊರಕಿರುವುದಿಲ್ಲ.
ಬೆಟ್ಟದ ಮೇಲೆ ಶ್ರೀ ಶ್ರೀನಿವಾಸ ಮತ್ತು ಪದ್ಮಾವತಿ ದೇವಾಲಯವಿದ್ದು, ಇದಕ್ಕೆ ಚಿಕ್ಕ ತಿರುಪತಿ, ಈ ಬೆಟ್ಟವನ್ನು ಮಾಲೇಕಲ್ಲು ತಿರುಪತಿ ಎಂಬುದಾಗಿ ಪ್ರಸಿದ್ಧಿಗೊಂಡಿದೆ ಹಾಗೂ ಮತ್ತೊಂದು ಹೆಸರು ಅಮರವಾದಿ ದೇವತೆಗಳು ಧನುರ್ಮಾಸದಲ್ಲಿ ಶ್ರೀ ಶ್ರೀನಿವಾಸನ ಪೂಜೆಗೈದು ಸೇವೆ ಸಲ್ಲಿಸಿದ್ದರಿಂದ ಅಮರಗಿರಿ ತಿರುಪತಿ ಎಂದು ಕರೆಯಲಾರಂಭಿಸಿದರು.
ಪ್ರತಿ ವರ್ಷ ಭಕ್ತಾಧಿಗಳು ಆಷಾಡ ಶುದ್ಧ ದ್ವಾದಶಿ ದಿನದಂದು ಏತಕ್ಕಾಗಿ ಮಾಡಿದರು ಅಂದರೆ ತಿಮ್ಮಪ್ಪನಾಯಕನಿಗೆ ಕನಸಿನಲ್ಲಿ ಬಂದು ಕಾಣಿಸಿದ ದಿನ ದ್ವಾದಶಿ ದಿನವಾದ್ದರಿಂದ ಅಂದಿನಿಂದಲೂ ಶ್ರೀಯವರ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುತ್ತಾರೆ. ಈ ದಿವಸ ಭಕ್ತಾಧಿಗಳು ಸಂಕಲ್ಪ ಮಾಡಿದಂತೆ ಗರುಡಪಿಂಡ ಸೇವೆ ಮಾಡಿಸಿದವರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂದು ಪ್ರತೀತಿ ಇದೆ.
ದೇವಾಯದ ಬೆಟ್ಟದ ಒಂದೊಂದು ಮೆಟ್ಟಲಿಗೂ ತೆಂಗಿನ ಕಾಯ ಸೇವೆ ಸಲ್ಲಿಸಿ ಹರಕೆ ತೀರಿಸಿಕೊಳ್ಳುವುದು ಹಾಗೂ ದೇವಾಲಯದಲ್ಲಿ ದೇವರಿಗೆ ಅಭಿಷೇಕ, ಶ್ರೀನಿವಾಸ ಕಲ್ಯಾಣೋತ್ಸವ ಸೇವೆ ಮಾಡಿಸಿದ ಭಕ್ತರಿಗೆ ವಿವಾಹವು ಇನ್ನಿತರೆ ಮನೋಭೀಷ್ಠಗಳು ನೆರವೇರುತ್ತದೆಂದು ನಂಬಿಕೆ ಬಂದಿದೆ.
ಪ್ರತಿ ವರ್ಷದ ರಥೋತ್ಸವಾದಿ ದಿನಗಳಲ್ಲಿ ಭಕ್ತರುಗಳಿಂದ ವಿವಿಧ ಸೇವೆ ನಡೆದು ಅಂದರೆ ದೇವತಾ ಪ್ರಾರ್ಥನೆ, ಅಂಕುರಾರ್ಪಣೆ, ರಕ್ಷಾ ಬಂಧನ, ಧ್ವಜಾರೋಹಣ, ಗಣಪತಿ ಪೂಜೆ, ದೇವತಾ ಆಹ್ವಾನದೊಂದಿಗೆ ಪ್ರಾರಂಭವಾಗಿ, ಹಂಸವಾಹನೋತ್ಸವ, ಪುಷ್ಪಮಂಟಪೋತ್ಸವ, ಶೇಷವಾಹನ, ಪ್ರಹ್ಲಾದ ಪರಿಪಾಲನೋತ್ಸವ, ಗಜವಾಹನೋತ್ಸವ, ಆಂಜನೇಯ ಉತ್ಸವ, ಗರುಡೋತ್ಸವ, ಸಿಂಹೋತ್ಸವ, ತೆಪ್ಪೋತ್ಸವ, ಪುಷ್ಪಯಾಗೋತ್ಸವ, ಶಯನೋತ್ಸವ ಹಾಗೂ ವಿಜಯೋತ್ಸವ ಉತ್ಸವಗಳನ್ನು ಬಹಳ ವೈಭವಗಳಿಂದ ಭಕ್ತಾಧಿಗಳು ಸೇರಿಕೊಂಡು ಆಚರಿಸುತ್ತಾ ಬರುತ್ತಿರುತ್ತಾರೆ.
ದೇವಾಲಯದಲ್ಲಿ ಭಕ್ತರು ತಮ್ಮ ಸಂಕಲ್ಪ ನೆರವೇರಲೆಂದು, ಮಡಿನೀರು ದೇವಾಲಯದ ಸಮೀಪವಿರುವ ಕಲ್ಯಾಣಿಯಲ್ಲಿ ಭಕ್ತರು ಗಂಗಾಪೂಜೆ, ಗಂಗಾಸ್ನಾನ ಮಾಡುವುದರಿಂದ ರೋಗ ರುಜಿನಗಳು, ಚರ್ಮವ್ಯಾದಿಗಳು ಪರಿಹಾರವಾಗುವುದು ಎಂದು ಭಕ್ತರು ಈಗಲೂ ನಂಬಿ ಆಚರಣೆ ಮಾಡುತ್ತಿರುತ್ತಾರೆ.
ದೇವಾಲಯದಲ್ಲಿ ಭಕ್ತಾಧಿಗಳು ಈಗಲೂ ತಮ್ಮ ಕಷ್ಟಕಾರ್ಪಣ್ಯಗಳು ಪರಿಹಾರವಾಗಲೆಂದು ದೇವರ ಮೂಲ ಸನ್ನಿಧಿಯಲ್ಲಿ ತೀರ್ಥಕಾಯಿ, ಯಂತ್ರಗಳನ್ನು ಪೂಜಿಸಿಕೊಂಡು ಹೋಗಿ ಮನೆಯಲ್ಲಿಟ್ಟುಕೊಂಡು ಪ್ರತಿದಿನ ಮನೆಯಲ್ಲಿ ಪೂಜಿಸುವ ವಾಡಿಕೆ ಇರುತ್ತದೆ.