ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಮಾಲೇಕಲ್ಲು ತಿರುಪತಿ ಬೆಟ್ಟದ ಮೇಲೆ ದೇವಾಲಯವನ್ನು ಪೂರ್ವಕಾಲದಲ್ಲಿ ವಶಿಷ್ಠ ಮಹರ್ಷಿಗಳು ತಪಸ್ಸು ಮಾಡಿದ ನಂತರ ಶಾಲಿವಾಹನ ಶಕೆ (14ನೇ ಶತಮಾನದಲ್ಲಿ) ಅಂಕುಶ ಮಹಾರಾಜನಿಂದ ಕಟ್ಟಿಸಲ್ಪಟ್ಟಿರುವುದಾಗಿ ತಿಳಿದುಬರುತ್ತದೆ. ಸುಮಾರು 700 ವರ್ಷಗಳಷ್ಟು ಪ್ರಾಚೀನ ಇತಿಹಾಸವಿದೆ. ಕಾಲಾನುಕ್ರಮದಲ್ಲಿ ಆಶ್ರಮ ಎಲ್ಲವೂ ಬಿದ್ದು ಭೂಮಿಯಲ್ಲಿ ವಿಗ್ರಹವು ಮುಚ್ಚಿ ಹೋಗಿರುತ್ತದೆ. ಈ ಪ್ರಾಂತ್ಯವನ್ನು ಆಳುತ್ತಿದ್ದ ಚಿತ್ರದುರ್ಗದ ಅರಸ ಅಥವಾ ಪಾಳೇಗಾರನಾದ ಶ್ರೀ ತಿಮ್ಮಪ್ಪನಾಯಕನು ತನ್ನ ಮನೆ ದೇವರಾದ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನವಾದ ದೊಡ್ಡ ತಿರುಪತಿ ಅಂದರೆ ಈಗ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನೆಲೆಸಿರುವ ತಿರುಪತಿಗೆ ಪ್ರತಿ ವರ್ಷ ಯಾತ್ರೆ ಹೋಗುತ್ತಿದ್ದು, ಹೀಗಿರುವಾಗ ಕಾರಣಾಂತರಗಳಿಂದ ಯಾತ್ರೆಗೆ ಹೋಗಲು ಸಾಧ್ಯವಾಗದಿದ್ದು, ಚಿಂತೆಗೀಡಾದನು. ಒಂದು ದಿನ ರಾತ್ರಿ ತಿಮ್ಮಪ್ಪನಾಯಕನಿಗೆ ಕನಸಿನಲ್ಲಿ ಸ್ವಾಮಿಯು...