ಶ್ರೀ ಗವಿರಂಗನಾಥಸ್ವಾಮಿ ದೇವಾಲಯ, ಗವಿರಂಗಾಪುರ, ಚಿತ್ರದುರ್ಗ - 577542, ಚಿತ್ರದುರ್ಗ .
Sri Gaviranganatha Swamy Temple, Gavirangapura, Chitradurga - 577542, Chitradurga District [TM000136]
×
Temple History
ಇತಿಹಾಸ
ಹಿಂದೂ ಧರ್ಮದಲ್ಲಿ, ಸಮುದ್ರ ಮಂಥನ ಅಥವಾ ಕ್ಷೀರಸಮುದ್ರವನ್ನು ಕಡೆಯುವ ಘಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ. ಈ ಕಥೆಯು ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲಿ ಕಂಡುಬರುತ್ತದೆ.
ಕರ್ನಾಟಕದಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಬೂದಿಹಾಳು ಕೋಟೆಯ ಶ್ರೀರಾಂಪುರ ಹೋಬಳಿ ಗವಿರಂಗಾಪುರ ಗ್ರಾಮದ ಶ್ರೀ ಗವಿರಂಗನಾಥಸ್ವಾಮಿ ದೇವಾಲಯವು ಗವಿಯಲ್ಲಿ ನೆಲೆಸಿರುವ ವಿಗ್ರಹ ಒಂದು ಗುಡ್ಡದಲ್ಲಿ ಇದೆ. ಕೂರ್ಮಾವತಾರಿ ವಿಗ್ರಹ ಕರ್ನಾಟಕದ ಏಕೈಕ ಕೂರ್ಮಾವತಾರಿ ಮಹಾವಿಷ್ಣುವಿನ ದಶವತಾರದಲ್ಲಿ ಖ್ಯಾತಿಯನ್ನು ಪಡೆದಿದೆ. ಅದರಲ್ಲಿ ಎರಡನೇ ಅವತಾರ ಕೂರ್ಮಾವತಾರ ಅಂದರೆ ಆಮೆಯ ಅವತಾರ ಗುಹಾಂತ ದೇವಾಲಯವಾಗಿದೆ. ಇಲ್ಲಿ ವಿಷ್ಣುವಿನ ಕೂರ್ಮಾವತಾರ ವಿರುವುದು ಇನ್ನೊಂದು ವಿಶೇಷತೆ ಶಿಲಾಮೂರ್ತಿ ಇರುವುದನ್ನು ಕಂಡುಹಿಡಿದವನು ಒಬ್ಬ ದನಗಾಹಿ 15ನೇ ಶತಮಾನ ಒಬ್ಬ ದನಗಾಹಿ ತನ್ನ ಹಸುಗಳನ್ನು ಹುಲ್ಲು ಮೇಹಿಸಲು...ಹಿಂದೂ ಧರ್ಮದಲ್ಲಿ, ಸಮುದ್ರ ಮಂಥನ ಅಥವಾ ಕ್ಷೀರಸಮುದ್ರವನ್ನು ಕಡೆಯುವ ಘಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ. ಈ ಕಥೆಯು ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲಿ ಕಂಡುಬರುತ್ತದೆ.
ಕರ್ನಾಟಕದಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಬೂದಿಹಾಳು ಕೋಟೆಯ ಶ್ರೀರಾಂಪುರ ಹೋಬಳಿ ಗವಿರಂಗಾಪುರ ಗ್ರಾಮದ ಶ್ರೀ ಗವಿರಂಗನಾಥಸ್ವಾಮಿ ದೇವಾಲಯವು ಗವಿಯಲ್ಲಿ ನೆಲೆಸಿರುವ ವಿಗ್ರಹ ಒಂದು ಗುಡ್ಡದಲ್ಲಿ ಇದೆ. ಕೂರ್ಮಾವತಾರಿ ವಿಗ್ರಹ ಕರ್ನಾಟಕದ ಏಕೈಕ ಕೂರ್ಮಾವತಾರಿ ಮಹಾವಿಷ್ಣುವಿನ ದಶವತಾರದಲ್ಲಿ ಖ್ಯಾತಿಯನ್ನು ಪಡೆದಿದೆ. ಅದರಲ್ಲಿ ಎರಡನೇ ಅವತಾರ ಕೂರ್ಮಾವತಾರ ಅಂದರೆ ಆಮೆಯ ಅವತಾರ ಗುಹಾಂತ ದೇವಾಲಯವಾಗಿದೆ. ಇಲ್ಲಿ ವಿಷ್ಣುವಿನ ಕೂರ್ಮಾವತಾರ ವಿರುವುದು ಇನ್ನೊಂದು ವಿಶೇಷತೆ ಶಿಲಾಮೂರ್ತಿ ಇರುವುದನ್ನು ಕಂಡುಹಿಡಿದವನು ಒಬ್ಬ ದನಗಾಹಿ 15ನೇ ಶತಮಾನ ಒಬ್ಬ ದನಗಾಹಿ ತನ್ನ ಹಸುಗಳನ್ನು ಹುಲ್ಲು ಮೇಹಿಸಲು ಈ ಪ್ರದೇಶಕ್ಕೆ ಕರೆತರುತ್ತೀದ್ದು. ಆ ಸಂದರ್ಭದಲ್ಲಿ ಹಸು ಬಂದು ಪ್ರತಿ ದಿನ ಹುತ್ತಕ್ಕೆ ಹಾಲು ಕರೆಯುತ್ತಿತ್ತು. ನೋಡಿದ ದನಗಾಹಿಯು ಆ ಊರಿನ ಗೌಡರಿಗೆ ವಿಷಯ ಮುಟ್ಟಿಸಿದನು.
ಆ ತಕ್ಷಣವೇ ಗೌಡರು ಬೂದಿಹಾಳು ಕೋಟೆಯ ಪಾಳೇಗಾರರನ್ನು ಬೇಟೆಯಾಗಿ ಅವರನ್ನು ಕರೆದು ಕೊಂಡು ಹೋಗಿ ಹುತ್ತದಲ್ಲಿ ನೋಡಿದಾಗ ಕೂರ್ಮಾವತಾರಿ ಮಹಾವಿಷ್ಣುವಿನ ಶಿಲಾಮೂರ್ತಿಯು ಅವರಿಗೆ ದೊರಕುತ್ತದೆ. ನಂತರ ಬೂದಿಹಾಳು ಕೋಟೆಯ ಪಾಳೇಗಾರರು ಈ ದೇವರಿಗೆ ದೇವಾಲಯ ಒಂದನ್ನು ನಿರ್ಮಿಸಿರುತ್ತಾರೆ. ಬೆಟ್ಟದ ಮೇಲಿರುವ ಗುಹೆಯಲ್ಲಿ ರಂಗನಾಥಸ್ವಾಮಿ ಮೂರ್ತಿ ಇರುವುದರಿಂದ ಈ ಹಳ್ಳಿಗೆ ಗವಿರಂಗಪುರ ಎಂಬ ಹೆಸರು ಬಂದಿದೆ. ವರ್ಷದಿಂದ ವರ್ಷಕ್ಕೆ ಇದು ಬೆಳೆಯಲಾರಂಭಿಸಿತ್ತು. ಇಲ್ಲಿನ ಮೂರ್ತಿಯ ವಿಶೇಷತೆ ಎಂದರೆ ದೇವರು ಭಕ್ತರಿಗೆ ಹೂ ಪ್ರಸಾದವನ್ನು ಕರುಣಿಸುವುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭ ಮಾಡವ ಮೊದಲು ಈ ಭಾಗದ ಭಕ್ತಾಧಿಗಳು ಇಲ್ಲಿಗೆ ಬಂದು ದೇವರ ಮುಂದೆ ಆ ಕೆಲಸ ಸಫಲವಾಗುವುದೋ ಅಥವಾ ಇಲ್ಲವೋ ಎಂದು ಕೇಳಿಕೋಳ್ಳುತ್ತಾರೆ. ನಂತರ ಸುಮಾರು ಸಮಯ ದೇವರು ಕರುಣಿಸುವ ಹೂವಿಗಾಗಿಯೇ ಕಾಯುತ್ತಾರೆ. ದೇವರು ಬಲಗಡೆಯಿಂದ ಹೂವನ್ನು ಕರುಣಿಸಿದರೆ ಆ ಕೆಲಸವಾಗುತ್ತದೆ ಹಾಗೂ ಎಡಗಡೆಯಿಂದ ಹೂವನ್ನು ಕರುಣಿಸಿದರೆ ಆ ಕೆಲಸವಾಗುವುದಿಲ್ಲ ಎಂಬುದು ಭಕ್ತರ ಅಚಲ ದೃಢವಾದ ನಂಬಿಕೆ. ಹೀಗೆ ಭಕ್ತಾಧಿಗಳು ಹೂವು ಕೇಳುವುದನ್ನು ನೋಡುವುದೇ ಒಂದು ರೋಚಕ ಅನುಭವವನ್ನು ನೀಡುತ್ತದೆ.
ಈ ದೇವರ ಉತ್ಸವ ಮೂರ್ತಿಗಾಗಿ ಈ ಗ್ರಾಮದಲ್ಲಿ ಪ್ರತ್ಯೇಕ ದೇವಾಲಯ ಇರುವುದು ಮತ್ತೋಂದು ವಿಶೇಷತೆ ಯಾಗಿದೆ. ದೇವರ ಉತ್ಸವ ಕಾಲದಲ್ಲಿ ಮಾತ್ರ ದೇವಸ್ಥಾನಕ್ಕೆ ಈ ಉತ್ಸವಮೂರ್ತಿಯನ್ನು ಕರೆತರಲಾಗುತ್ತದೆ. ಉತ್ಸವ ಮುಗಿದ ನಂತರ ಮತ್ತೊಂದು ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಿತ್ಯ ಪೂಜಾ ಕಾರ್ಯಗಳನ್ನು ಅಲ್ಲಿ ನೇರವೇರಿಸಲಾಗುತ್ತದೆ. ಈ ದೇವಸ್ಥಾನದಲ್ಲಿ ಗವಿರಂಗನಾಥಸ್ವಾಮಿ ಅಲ್ಲದೇ ಶ್ರೀ ಅನಂತಪದ್ಮನಾಭಸ್ವಾಮಿ, ಶ್ರೀ ಲಕ್ಷೀದೇವಿ, ಶ್ರೀ ಆಂಜನೇಯಸ್ವಾಮಿ, ಶ್ರೀ ಮಲ್ಲೇಶ್ವರಸ್ವಾಮಿ, ಇರುತ್ತದೆ. ಶ್ರೀ ಲಕ್ಷೀರಂಗನಾಥ, ಶ್ರೀ ಗವಿರಂಗನಾಥಸ್ವಾಮಿ, ಎಂದೆನಿಸಿಕೊಳ್ಳುವ ಕೂರ್ಮಾರೂಪಿ, ರಂಗನಾಥಸ್ವಾಮಿಗೆ ಎಲ್ಲಾ ಧರ್ಮದ ಜನರು ನಡೆದುಕೊಳ್ಳುವುದು ಇಲ್ಲಿನ ಮತ್ತೊಂದು ವಿಶೇಷತೆ.