ಹಿಂದೂ ಧರ್ಮದಲ್ಲಿ, ಸಮುದ್ರ ಮಂಥನ ಅಥವಾ ಕ್ಷೀರಸಮುದ್ರವನ್ನು ಕಡೆಯುವ ಘಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ. ಈ ಕಥೆಯು ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಬೂದಿಹಾಳು ಕೋಟೆಯ ಶ್ರೀರಾಂಪುರ ಹೋಬಳಿ ಗವಿರಂಗಾಪುರ ಗ್ರಾಮದ ಶ್ರೀ ಗವಿರಂಗನಾಥಸ್ವಾಮಿ ದೇವಾಲಯವು ಗವಿಯಲ್ಲಿ ನೆಲೆಸಿರುವ ವಿಗ್ರಹ ಒಂದು ಗುಡ್ಡದಲ್ಲಿ ಇದೆ. ಕೂರ್ಮಾವತಾರಿ ವಿಗ್ರಹ ಕರ್ನಾಟಕದ ಏಕೈಕ ಕೂರ್ಮಾವತಾರಿ ಮಹಾವಿಷ್ಣುವಿನ ದಶವತಾರದಲ್ಲಿ ಖ್ಯಾತಿಯನ್ನು ಪಡೆದಿದೆ. ಅದರಲ್ಲಿ ಎರಡನೇ ಅವತಾರ ಕೂರ್ಮಾವತಾರ ಅಂದರೆ ಆಮೆಯ ಅವತಾರ ಗುಹಾಂತ ದೇವಾಲಯವಾಗಿದೆ. ಇಲ್ಲಿ ವಿಷ್ಣುವಿನ ಕೂರ್ಮಾವತಾರ ವಿರುವುದು ಇನ್ನೊಂದು ವಿಶೇಷತೆ ಶಿಲಾಮೂರ್ತಿ ಇರುವುದನ್ನು ಕಂಡುಹಿಡಿದವನು ಒಬ್ಬ ದನಗಾಹಿ 15ನೇ ಶತಮಾನ ಒಬ್ಬ ದನಗಾಹಿ ತನ್ನ ಹಸುಗಳನ್ನು ಹುಲ್ಲು ಮೇಹಿಸಲು...