ಶ್ರೀ ನಾಗೇಶ್ವರಸ್ವಾಮಿ ದೇವಾಲಯ, ನವಿಲೆ, ಹಾಸನ - 573131, ಹಾಸನ .
Sri Nageshwara Swamy Temple, Navile, Hassan - 573131, Hassan District [TM000137]
×
Temple History
ಸ್ಥಳ ಪುರಾಣ
ಶ್ರೀ ನಾಗೇಶ್ವರಸ್ವಾಮಿ ದೇವಸ್ಥಾನವು ಸುಮಾರು 12ನೇ ಶತಮಾನದ್ದು ಇರಬಹುದೆಂದು ತಿಳಿದುಬಂದಿದ್ದು, ದೇವಾಲಯದ ಶಿಲಾಸ್ತಂಭದಲ್ಲಿ ಕಂಡುಬಂದಿರುತ್ತದೆ. ಈ ದೇವಾಲಯವನ್ನು ಹೊಯ್ಸಳ ದೊರೆ ವಿಷ್ಣುವರ್ಧನನ್ನು ನಿರ್ಮಿಸಿದ್ದನೆಂಬುದು ಇತಿಹಾಸದಲ್ಲಿ ತಿಳಿದುಬಂದಿರುತ್ತದೆ. ಶ್ರೀ ನಾಗೇಶ್ವರಸ್ವಾಮಿ ದೇವಾಲಯದ ಮೂರ್ತಿಯು ಉದ್ಬವ ಮೂರ್ತಿಯಾಗಿರುತ್ತದೆ. ಸ್ವಾಮಿಯವರ ಎಡ ಭಾಗದಲ್ಲಿ ಶ್ರೀ ಪಾರ್ವತಿ ಅಮ್ಮನವರ ಸನ್ನಿಧಿ ಇದ್ದು, ಅಮ್ಮನವರ ಪಕ್ಕದಲ್ಲಿ ಮತ್ತೊಂದು ಸನ್ನಿದಿಯಲ್ಲಿ ಶ್ರೀ ಸೋಮೇಶ್ವರ ಸನ್ನಿದಿ ಇದ್ದು, ದೇವಾಲಯದ ಹಿಂಬದಿಯಲ್ಲಿ ಶ್ರೀ ಬಹ್ಮ ಲಿಂಗೇಶ್ವರ ಸನ್ನಿಧಿಯು ಕೆರೆಯ ಒಳಗೆ ಶ್ರೀ ಸಿದ್ದೇಶ್ವರಸ್ವಾಮಿ ಗುಡಿಯು ಅದರ ಪಕ್ಕದಲ್ಲಿ ಶ್ರೀ ಮಲ್ಲೇಶ್ವರ ಗುಡಿಯು ಇದ್ದು, ಒಟ್ಟು 5 ಲಿಂಗಗಳನ್ನು ಹೊಂದಿರುವುದು ಇಲ್ಲಿನ ವಿಶೇಷತೆಯಾಗಿರುತ್ತದೆ.
ಈ ದೇವಾಲಯವು ಸುಂದರವಾದ ಕೆರೆಯ ತಟದ ಹಿಂಭಾಗವಿದ್ದು, ಕೆರೆಯ ನೀರಿನ ಪ್ರಕೃತಿಯ ಸೂಬಗಿನಲ್ಲಿ ಶೋಭಾಯಾಮಾನವಾಗಿರುತ್ತದೆ. ಹೊಯ್ಸಳರ ನಂತರ ಗಂಗರು ಈ ದೇವಾಲಯದ ಆಡಳಿತವನ್ನು...ಶ್ರೀ ನಾಗೇಶ್ವರಸ್ವಾಮಿ ದೇವಸ್ಥಾನವು ಸುಮಾರು 12ನೇ ಶತಮಾನದ್ದು ಇರಬಹುದೆಂದು ತಿಳಿದುಬಂದಿದ್ದು, ದೇವಾಲಯದ ಶಿಲಾಸ್ತಂಭದಲ್ಲಿ ಕಂಡುಬಂದಿರುತ್ತದೆ. ಈ ದೇವಾಲಯವನ್ನು ಹೊಯ್ಸಳ ದೊರೆ ವಿಷ್ಣುವರ್ಧನನ್ನು ನಿರ್ಮಿಸಿದ್ದನೆಂಬುದು ಇತಿಹಾಸದಲ್ಲಿ ತಿಳಿದುಬಂದಿರುತ್ತದೆ. ಶ್ರೀ ನಾಗೇಶ್ವರಸ್ವಾಮಿ ದೇವಾಲಯದ ಮೂರ್ತಿಯು ಉದ್ಬವ ಮೂರ್ತಿಯಾಗಿರುತ್ತದೆ. ಸ್ವಾಮಿಯವರ ಎಡ ಭಾಗದಲ್ಲಿ ಶ್ರೀ ಪಾರ್ವತಿ ಅಮ್ಮನವರ ಸನ್ನಿಧಿ ಇದ್ದು, ಅಮ್ಮನವರ ಪಕ್ಕದಲ್ಲಿ ಮತ್ತೊಂದು ಸನ್ನಿದಿಯಲ್ಲಿ ಶ್ರೀ ಸೋಮೇಶ್ವರ ಸನ್ನಿದಿ ಇದ್ದು, ದೇವಾಲಯದ ಹಿಂಬದಿಯಲ್ಲಿ ಶ್ರೀ ಬಹ್ಮ ಲಿಂಗೇಶ್ವರ ಸನ್ನಿಧಿಯು ಕೆರೆಯ ಒಳಗೆ ಶ್ರೀ ಸಿದ್ದೇಶ್ವರಸ್ವಾಮಿ ಗುಡಿಯು ಅದರ ಪಕ್ಕದಲ್ಲಿ ಶ್ರೀ ಮಲ್ಲೇಶ್ವರ ಗುಡಿಯು ಇದ್ದು, ಒಟ್ಟು 5 ಲಿಂಗಗಳನ್ನು ಹೊಂದಿರುವುದು ಇಲ್ಲಿನ ವಿಶೇಷತೆಯಾಗಿರುತ್ತದೆ.
ಈ ದೇವಾಲಯವು ಸುಂದರವಾದ ಕೆರೆಯ ತಟದ ಹಿಂಭಾಗವಿದ್ದು, ಕೆರೆಯ ನೀರಿನ ಪ್ರಕೃತಿಯ ಸೂಬಗಿನಲ್ಲಿ ಶೋಭಾಯಾಮಾನವಾಗಿರುತ್ತದೆ. ಹೊಯ್ಸಳರ ನಂತರ ಗಂಗರು ಈ ದೇವಾಲಯದ ಆಡಳಿತವನ್ನು ನೋಡುತ್ತಿದ್ದರೆಂದು ಇದರ ಮೇಲ್ವಿಚಾರಣೆಯನ್ನು ನೋಡಲು ಗಂಗರ ಅರಸರು ನಾಗಾರ್ಜುನನೆಂಬ ಪಾಳೇಗಾರನನ್ನು ನೇಮಿಸಿದ್ದರು. ಈ ದೇವಾಲಯದ ಶಾಸನವು ದೇವಾಲಯದ ಮುಂಭಾಗದ ಶಿಲಾ ಶಾಸನದಲ್ಲಿ ಕಂಡುಬಂದಿರುತ್ತದೆ. ಈ ದೇವಾಲಯದ ಮೂಲ ಮೂರ್ತಿಯು ಉದ್ಬವ ಲಿಂಗವಾಗಿರುತ್ತದೆ. ಈ ದೇವಾಲಯದಲ್ಲಿನ ಚಿತ್ರ ಕಲೆಗಳು ನಾಗದೇವತೆಗಳನ್ನು ಹಾಗೂ ಗೋವುಗಳ ವಿಶೇಷತೆಗಳನ್ನು ಹಾಗೂ ಆಮೆ ಚಿತ್ರ ಕಲೆಗಳನ್ನು ನಾಗರ್ಜುನನ ಭಾವಚಿತ್ರವನ್ನು ಶಿಲೆಯಿಂದಲೇ ದೇವಾಲಯದ ಕಂಬಗಳ ಮೇಲೆ ಕೆತ್ತಲಾಗಿರುತ್ತದೆ. ಈ ದೇವಾಲಯದ ಬಲಭಾಗದಲ್ಲಿ ದೊಡ್ಡ ಕೆರೆ, ಎಡ ಭಾಗದಲ್ಲಿ ಕಲ್ಯಾಣಿ ಇರುತ್ತದೆ. ಇಲ್ಲಿರುವ ಮಜ್ಜನ ಬಾವಿಯಿಂದಲೇ ದೇವರಿಗೆ ನಿತ್ಯ ಅಭಿಷೇಕ ಮಾಡಲಾಗುತ್ತದೆ. ಈ ತೀರ್ಥವನ್ನು ಪ್ರೋಕ್ಷಿಸಿ ಕೊಳ್ಳುವುದರಿಂದ/ಸ್ನಾನ ಮಾಡುವುದರಿಂದ ಭಕ್ತನ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತವೆ. ವಿಶೇಷವಾಗಿ ನಾಗದೋಷವು ಪರಿಹಾರವಾಗುತ್ತದೆ. ಅಲ್ಲದೇ ತುಂಬೆಯ ಹೂವನ್ನು ದೇವರ ಮೇಲೆ ಇರಿಸಿ ಭಕ್ತರು ಪ್ರಾರ್ಥನೆ ಸಲ್ಲಿಸಿ ಆ ಹೂವುಗಳನ್ನು ಮೇಲೆ ತೆಗೆದುಕೊಂಡು ಅರ್ಚಕರು ಕೊಟ್ಟ ಹೂವುಗಳು ಬೆಸ ಸಂಖ್ಯೆಯಲ್ಲಿದ್ದರೆ. ಭಕ್ತರ ಸಂಕಲ್ಪವು ನೆರವೇರುತ್ತದೆ. ಸಮವಾಗಿದ್ದರೆ ಸಂಕಲ್ಪವು ನೆರವೇರುವುದಿಲ್ಲವೆಂಬುದು ಈ ದೇವಾಲಯದ ರೂಢೀ ಸಂಪ್ರದಾಯ ಪದ್ದತಿಯಾಗಿರುತ್ತದೆ. ಪುರಾತನ ಕಾಲದಿಂದಲೂ ಮತ್ತು ಪುರಾಣಗಳಿಂದಲೂ ನಮ್ಮ ನಾಡು ಪವಿತ್ರವಾದ್ದುದೆಂದು ಹೆಸರುವಾಸಿ ಪಡೆದಿದೆ. ಕೃತ ಯುಗದಲ್ಲಿ ಪ್ರಹ್ಲಾದನು ತೀರ್ಥಯಾತ್ರೆಗೆ ಬಂದು ಕಾವೇರಿಯ ತೀರದಲ್ಲಿ ಅಜಗರನೆಂಬ ಮುನಿಯನ್ನು ಕಂಡನಂತೆ. ತ್ರೇತ್ರಾಯುಗದಲ್ಲಿ ಶ್ರೀ ರಾಮನು ಇಲ್ಲಿಗೆ ಬಂದು ಹೋಗಿದ್ದಕ್ಕೆ ಸಾಕ್ಷಿಗಳು ಇವೆ. ದ್ವಾಪರಯುಗದಲ್ಲಿ ಪಾಂಡವರು ಅಜ್ಞಾತವಾಸ ಮಾಡಿದ ವಿರಾಟ ನಗರವು ಈಗಲೂ ಬೇರೆ ಹೆಸರಿನಿಂದ ಉತ್ತರ ಕರ್ನಾಟಕದಲ್ಲಿದೆ ಎಂದು ಹೇಳುತ್ತಾರೆ. ವಿಷ್ಣು ಭಕ್ತನಾದ ಚಂದ್ರಹಾಸನು ಸಹ ಈ ನಾಡಿನಲ್ಲಿಯೇ ಇದ್ದನೆಂದು ಪ್ರಸಿದ್ದಿಯಾಗಿದೆ. ಹಿಂದೆ ಋಷಿಗಳು ಸಹ ಇದ್ದರೆಂಬ ಜನಜನಿತವಾದ ಕಥೆಗಳಿವೆ . ಈ ದೇವಸ್ಥಾನದಲ್ಲಿ ದೇವರ ಮೂಲ ವಿಗ್ರಹವು ಋಷಿಗಳ ಆರಾಧನೆಯಲ್ಲಿದ್ದವೆಂದು ಆನೇಕ ಸ್ಥಳ ಪುರಾಣಗಳಿಂದ ತಿಳಿದುಬಂದಿರುತ್ತದೆ. ಉರಗ ಮಯೂರಪುರದಲ್ಲಿ ನೆಲೆಸಿರುವ ಶ್ರೀ ನಾಗೇಶ್ವರ ಜ್ಯೋರ್ತಿಲಿಂಗವು ಸಹ ಋಷಿಗಳ ಆರಾಧನೆಯಲ್ಲಿತ್ತು. ಬಹಳ ಹಿಂದೆ ಸಪ್ತ ಋಷಿಗಳಲ್ಲಿ ಒಬ್ಬರಾದ ಜಮದಗ್ನಿ ಮುನಿಯು ತಮ್ಮ ಪತ್ನಿಯಾದ ರೇಣುಕೆಯೊಡನೇ, ಕುಮಾರನಾದ ಪರುಶುರಾಮನೊಡನೇ ಈ ಉರಗ ಮಯೂರಪುರದಲ್ಲಿ ಆಶ್ರಮ ವಾಸಿಗಳಾಗಿದ್ದರೆಂದು ಪೂರ್ವಿಕರು ಹೇಳುತ್ತಿದ್ದಾರೆಂದು ಪ್ರತೀತಿ ಇದೆ.
ಈ ಪವಿತ್ರ ಲಿಂಗೋದ್ಬವ ಸ್ಥಳದಲ್ಲಿ ಜಮದಗ್ನಿ ಋಷಿಗಳು ವಾಸಿಸುತಿದ್ದರೆಂಬುದಕ್ಕೆ ಈ ನಾಗೇಶ್ವರಸ್ವಾಮಿ ದೇವಸ್ಥಾನಕ್ಕೆ ಸ್ವಲ್ಪ ದೂರದಲ್ಲಿರುವ ರೇಣುಕಾ ಪರಂಜ್ಯೋತಿ ದೇವಾಲಯವು ಸಾಕ್ಷಿಯಾಗಿದೆ. ಈ ರೇಣುಕಾ ದೇವಾಲಯವು ನಮ್ಮ ನಾಡಿನ ಯಾವ ಸ್ಥಳದಲ್ಲಿಯೂ ಇಲ್ಲವೆಂಬುದಾಗಿ ಹೇಳಬಹುದು. ಉರಗಮಯೂರಪುರವೆಂಬುದು ಬಹು ಹಿಂದಿನ ಕಾಲದ ಊರು, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿದೆ. ಇದೊಂದು ಯಾತ್ರ ಸ್ಥಳವಾಗಿದೆ. ಈ ಊರಿಗೆ ಪಕ್ಕದಲ್ಲಿರುವ ಕೆರೆಯ ಹಿಂಭಾದಲ್ಲಿಯೇ ಶ್ರೀ ನಾಗೇಶ್ವರಸ್ವಾಮಿ ಲಿಂಗ ಮೂರ್ತಿಯು ಆವಿರ್ಭವಿಸಿರುತ್ತಾನೆ. ಲಿಂಗೋದ್ಬವ ಸ್ಥಳದಲ್ಲಿ ಒಂದು ಘೋರ ಸರ್ಪವು ಇದೆ. ಜಮದಗ್ನಿ ಋಷಿಗಳ ಆಶ್ರಮವು ಅದೇ ಸ್ಥಳದಲ್ಲಿತ್ತೆಂದು ಅಲ್ಲದೇ ಅಲ್ಲಿ ಇದ್ದ ಮರಗಳ ತೋಪಿನಲ್ಲಿ ನವಿಲುಗಳು ಸಹ ಸೇರಿಕೊಂಡಿತ್ತೆಂದು ಹಿಂದಿನ ಮಾತಾಗಿದೆ. ಘೋರ ಸರ್ಪವು ವಾಸವಾಗಿದ್ದನ್ನು ಮಯೂರ ಪಕ್ಷಿಯು ಕಂಡು ಸಹಜ ವೈರದಿಂದ ಆಗಾಗ್ಗೆ ಹಿಂಸಿಸುತ್ತಿದ್ದುದನ್ನು ಮಹರ್ಷಿಯಾದ ಜಮದಗ್ನಿ ನೀಡಿ ಕೋಪದಿಂದ ಮಯೂರ ಪಕ್ಷಿಯು ಈ ಸ್ಥಳದಲ್ಲಿ ಸಂಚರಿಸಕೂಡದೆಂದು ಶಾಪವಿತ್ತರು. ಇದರಿಂದ ಮಯೂರಗಳು ಈಗಲೂ ಈ ಸ್ಥಳದಲ್ಲಿ ಬರದಿರುವುದೇ ಈ ಸ್ಥಳದ ವಿಶೇಷತೆಯಾಗಿದೆ.
ಶ್ರೀ ನಾಗೇಶ್ವರ ಲಿಂಗ ಮಹಾತ್ಮೆ:
ಶ್ರೀ ನಾಗೇಶ್ವರಸ್ವಾಮಿಯವರ ಅನಂತಾನಂತವಾಗಿ ವರ್ಷಕ್ಕೆ ಒಂದು ಸಾರಿ ಈ ಸ್ವಾಮಿಯ ರಥೋತ್ಸವವು ನಡೆಯುತ್ತದೆ, ಹಾಗೇನಾದರೂ ರಥೋತ್ಸವವನ್ನು ನಡೆಸದೇ ಹೋದರೆ ಈ ಮೂರ್ತಿಯು ಆನೇಕಾನೇಕವಾಗಿ ಉತ್ಪಾತಗಳನ್ನು ತೋರಿಸಿ ಪುರಜನರಿಗೆ ಮಹಾನರ್ಥಗಳನ್ನುಂಟು ಮಾಡುತ್ತಾನೆ. ಇದು ಸರ್ವರೂ ಕಂಡು ಕೇಳಿದ ಮಾತಾಗಿದೆ. ಸರ್ಪ ಚೇಳುಗಳಿಂದ ಕಚ್ಚಿಸಿಕೊಂಡವರು ಶ್ರೀ ಸ್ವಾಮಿಯ ಸನ್ನಿಧಿಗೆ ಒಂದು ಮಂಗಳಾರತಿ ಮಾಡಿಸಿ ತೀರ್ಥವನ್ನು ಸೇವನೆ ಮಾಡಿದ್ದಲ್ಲಿ ಗುಣಮುಖರಾಗುತ್ತಾರೆ. ಹೀಗೆ ಶ್ರೀ ನಾಗೇಶ್ವರಸ್ವಾಮಿಯ ಮೂರ್ತಿಯು ಮಹತ್ವ ಪಡೆದಿದೆ. ನಾಗರನವಿಲೆ ಗ್ರಾಮಕ್ಕೆ ಮತ್ತೊಂದು ಹೆಸರು “ಉರಗಮಯೂರಪುರ” ಈ ಹೆಸರಿಗೆ ಕಾರಣ ಹಾಗೂ ಮತ್ತು ನವಿಲೆ ಅನ್ಯೂನ್ಯತೆಯಿಂದ ಜೀವಿಸುತ್ತಿದ್ದು, ನವಿಲಿಗೆ ಹಾಗೂ ಶ್ರೀರಕ್ಷೆ ನೀಡಿದ್ದ ಕಾರಣ ಉರಗಮಯೂರಪುರ ಎಂಬ ಹೆಸರು ಬಂದಿತು.
ಶ್ರೀ ನಾಗೇಶ್ವರಸ್ವಾಮಿ ಉದ್ಭವಲಿಂಗ ಇವರು ಕಾರಣ “ನಾಗೇಶ್ವರ ನಗರ ನವಿಲೆ” ಎಂದು ಪ್ರಸಿದ್ದಿ ಹೊಂದಿದೆ. ನಾಗರನವಿಲೆ, ಕೆಂಪಮ್ಮನ ಗುಡಿ, ಸುಂದರ ಕೆರೆ, ನಾಗರ ಹುತ್ತ, ಕಲ್ಯಾಣಿ, ಉದ್ಯಾನವನ, ನವಗ್ರಹ ದೇವಾಲಯ, ನಾಗೇಶ್ವರ ದೇವಾಲಯ, ಗುಹೆ, ನಾಗ ಪ್ರತಿಮೆ, ಅಮ್ಮನವರಗುಡಿ, ಸಿದ್ದೇಶ್ವರ, ಮಲ್ಲೇಶ್ವರ, ಬ್ರಹ್ಮಲಿಂಗೇಶ್ವರ, ಸೋಮೇಶ್ವರ, ಹಾಗೂ ರೇಣುಕಾ ದೇವಾಲಯ ಪ್ರಮುಖವಾದದ್ದು, ಇತ್ತೀಚೆಗೆ ಕೆಂಪಮ್ಮನಗುಡಿಯ ಜೀರ್ಣೋದ್ದಾರವಾಗಿದೆ. ಶ್ರೀ ನಾಗೇಶ್ವರ ಗುಡಿಯ ಪ್ರವೇಶದ್ವಾರ ಪೂರ್ವ ದಿಕ್ಕಿನಲ್ಲಿದ್ದು, ಸುತ್ತಲೂ ನಾಗಪ್ರತಿಮೆಗಳಿಂದ ಸುತ್ತುವರೆದಿದೆ. ಇದು ಉದ್ಭವ ಲಿಂಗವಾಗಿದ್ದು, ಅತ್ಯಂತ ನಯನ ಮನೋಹರ ಬಣ್ಣದಿಂದ ಮೋಡಲು ಸುಂದರವಾಗಿದೆ. ನಾಗರ ಪಂಚಮಿ, ಹುಣ್ಣಿಮೆ, ಅಮಾವಾಸೆ, ಕಾರ್ತೀಕಮಾಸ, ಧನುರ್ಮಾಸ ಇನ್ನಿತರ ಹಬ್ಬ ಹರಿದಿನಗಳಲ್ಲಿ ಸ್ವಾಮಿಗೆ ವಿಶೇಷಪೂಜೆ ನಡೆಯುತ್ತದೆ. ದೇವಾಲಯದ ಎದುರಿಗೆ ನಂದ ಕಂಬ ಬಲಬದಿಯಲ್ಲಿ ನಾಗ ಪ್ರತಿಮೆ ಇದ್ದು, ಅತ್ಯಂತ ಸುಮಧುರ ಏಳು ಹೆಡೆಯ ಸರ್ಪದ ಮೂರ್ತಿ ಇರುತ್ತದೆ. ತುಂಬಾ ಶಕ್ತಿಶಾಲಿ ಲಿಂಗವಾದ ನಾಗೇಶ್ವರಸ್ವಾಮಿಯು ದಿನದಿಂದ ದಿನಕ್ಕೆ ಉತ್ತರ ದಿಕ್ಕಿಗೆ ವಾಲುತ್ತಿದ್ದು ಇಲ್ಲಿನ ಗೌಪ್ಯತೆ ಅರಿಯುವುದು ಕಷ್ಟಕರವಾಗಿದೆ. ಶಿವನ ದೇವಾಲಯಗಳಲ್ಲಿ ಬಸವ ಲಿಂಗಕ್ಕೆ ನೇರ ರೇಖೆಯಲ್ಲಿದ್ದರೆ ಇಲ್ಲಿ ಲಿಂಗದ ಎದುರಿಗೂ ಬಸವನ ಮೂರ್ತಿಗೂ ಒಂದು ಅಡಿಗೂ ಹೆಚ್ಚು ಉತ್ತರಕ್ಕಿದೆ. ಲಿಂಗ ವಾಲಿ ಬಸವನ ನೇರಕ್ಕೆ ಬಂದಾಗ ಜಗತ್ತಿನ ಅಂತ್ಯವಾಗುವುದೆಂದು ಜನಜನಿತ ಕಥೆಯಾಗಿದೆ.