ಶ್ರೀ ನಾಗೇಶ್ವರಸ್ವಾಮಿ ದೇವಸ್ಥಾನವು ಸುಮಾರು 12ನೇ ಶತಮಾನದ್ದು ಇರಬಹುದೆಂದು ತಿಳಿದುಬಂದಿದ್ದು, ದೇವಾಲಯದ ಶಿಲಾಸ್ತಂಭದಲ್ಲಿ ಕಂಡುಬಂದಿರುತ್ತದೆ. ಈ ದೇವಾಲಯವನ್ನು ಹೊಯ್ಸಳ ದೊರೆ ವಿಷ್ಣುವರ್ಧನನ್ನು ನಿರ್ಮಿಸಿದ್ದನೆಂಬುದು ಇತಿಹಾಸದಲ್ಲಿ ತಿಳಿದುಬಂದಿರುತ್ತದೆ. ಶ್ರೀ ನಾಗೇಶ್ವರಸ್ವಾಮಿ ದೇವಾಲಯದ ಮೂರ್ತಿಯು ಉದ್ಬವ ಮೂರ್ತಿಯಾಗಿರುತ್ತದೆ. ಸ್ವಾಮಿಯವರ ಎಡ ಭಾಗದಲ್ಲಿ ಶ್ರೀ ಪಾರ್ವತಿ ಅಮ್ಮನವರ ಸನ್ನಿಧಿ ಇದ್ದು, ಅಮ್ಮನವರ ಪಕ್ಕದಲ್ಲಿ ಮತ್ತೊಂದು ಸನ್ನಿದಿಯಲ್ಲಿ ಶ್ರೀ ಸೋಮೇಶ್ವರ ಸನ್ನಿದಿ ಇದ್ದು, ದೇವಾಲಯದ ಹಿಂಬದಿಯಲ್ಲಿ ಶ್ರೀ ಬಹ್ಮ ಲಿಂಗೇಶ್ವರ ಸನ್ನಿಧಿಯು ಕೆರೆಯ ಒಳಗೆ ಶ್ರೀ ಸಿದ್ದೇಶ್ವರಸ್ವಾಮಿ ಗುಡಿಯು ಅದರ ಪಕ್ಕದಲ್ಲಿ ಶ್ರೀ ಮಲ್ಲೇಶ್ವರ ಗುಡಿಯು ಇದ್ದು, ಒಟ್ಟು 5 ಲಿಂಗಗಳನ್ನು ಹೊಂದಿರುವುದು ಇಲ್ಲಿನ ವಿಶೇಷತೆಯಾಗಿರುತ್ತದೆ. ಈ ದೇವಾಲಯವು ಸುಂದರವಾದ ಕೆರೆಯ ತಟದ ಹಿಂಭಾಗವಿದ್ದು, ಕೆರೆಯ ನೀರಿನ ಪ್ರಕೃತಿಯ ಸೂಬಗಿನಲ್ಲಿ ಶೋಭಾಯಾಮಾನವಾಗಿರುತ್ತದೆ. ಹೊಯ್ಸಳರ ನಂತರ ಗಂಗರು ಈ ದೇವಾಲಯದ ಆಡಳಿತವನ್ನು...