ಶ್ರೀ ಕುಮಾರಸ್ವಾಮಿ ದೇವಾಲಯ, 50ಅಡಿ ರಸ್ತೆ, ಬೆಂಗಳೂರು ದಕ್ಷಿಣ - 560019, ಬೆಂಗಳೂರು .
Sri Kumaraswamy temple, 50feet Road, Bengaluru South - 560019, Bengaluru Urban District [TM000014]
×
Temple History
ಇತಿಹಾಸ
ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ನಾಲ್ಕುನೂರು ವರ್ಷಗಳ ಹಿಂದೆಯೇ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಗೊಂಡಾರಣ್ಯ ಗುಡ್ಡದ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದರೆಂದು ಪ್ರತೀತಿ ಇದೆ.
1901ರಲ್ಲಿ ಮುಖ್ಯನ್ಯಾಯಾಧೀಶರಾದ ಶ್ರೀ ಟಿ. ನರಹರಿರಾಯರು ಮುಂಭಾಗದ ಮಂಟಪವನ್ನು ಮತ್ತು ಗೋಪುರವೊಂದನ್ನು ನಿರ್ಮಿಸಿರುತ್ತಾರೆ. ಇದಕ್ಕೆ ನರಹರಿರಾಯರ ಗುಡ್ಡವೆಂದು ಕರೆಯಲಾಗುತ್ತಿತ್ತು.
ಮೈಸೂರಿನ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಆಸ್ಥಾನ ವಿದ್ವಾಂಸರಾದ ಮಹಾಮಹೋಧ್ಯಯ ವಿದ್ಯಾನಿಧಿ ಸಿದ್ದಾಂತಿ ಶ್ರೀ ಎಸ್. ಶಿವಶಂಕರ ಶಾಸ್ತ್ರೀಗಳು 1924ರಲ್ಲಿ ಸಾಲಿಗ್ರಾಮ ಶಿಲೆಯ ಶ್ರೀ ಪಂಚಮುಖಿ ಗಣಪತಿ (ಸಿಂಹಾರೂಢ ಪಂಚಾಸ್ಯ ವಕ್ರತುಂಡ ಮೂರ್ತಿ) ಮತ್ತು ಉಮಾ ಮಹೇಶ್ವರ-ಗಂಗಾ-ಗಾಯಿತ್ರಿ-ನವಶಕ್ತಿ ಸ್ವರೂಪವಾದ ತಾಮ್ರದ ಫಲಕವನ್ನು ಷಟ್ ಕೋಣದಲ್ಲಿ ಸ್ಥಾಪಿಸಿ ಕಾವಡಿಗಳು ಪ್ರಾರಂಭವಾಯಿತು.
1954ರಲ್ಲಿ ಶ್ರೀ ಶಿವಶಂಕರ ಶಾಸ್ತ್ರಿಗಳ ಮಕ್ಕಳಾದ ವೇII ಬ್ರII ಶ್ರೀ ಸಿದ್ದಾಂತಿ ಸುಬ್ರಮಣ್ಯ ಶಾಸ್ತ್ರಿಗಳಿಂದ ನವಾಂಶ ಸಂಭೂತನಾದ ನವಲೋಹದಿಂದ...ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ನಾಲ್ಕುನೂರು ವರ್ಷಗಳ ಹಿಂದೆಯೇ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಗೊಂಡಾರಣ್ಯ ಗುಡ್ಡದ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದರೆಂದು ಪ್ರತೀತಿ ಇದೆ.
1901ರಲ್ಲಿ ಮುಖ್ಯನ್ಯಾಯಾಧೀಶರಾದ ಶ್ರೀ ಟಿ. ನರಹರಿರಾಯರು ಮುಂಭಾಗದ ಮಂಟಪವನ್ನು ಮತ್ತು ಗೋಪುರವೊಂದನ್ನು ನಿರ್ಮಿಸಿರುತ್ತಾರೆ. ಇದಕ್ಕೆ ನರಹರಿರಾಯರ ಗುಡ್ಡವೆಂದು ಕರೆಯಲಾಗುತ್ತಿತ್ತು.
ಮೈಸೂರಿನ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಆಸ್ಥಾನ ವಿದ್ವಾಂಸರಾದ ಮಹಾಮಹೋಧ್ಯಯ ವಿದ್ಯಾನಿಧಿ ಸಿದ್ದಾಂತಿ ಶ್ರೀ ಎಸ್. ಶಿವಶಂಕರ ಶಾಸ್ತ್ರೀಗಳು 1924ರಲ್ಲಿ ಸಾಲಿಗ್ರಾಮ ಶಿಲೆಯ ಶ್ರೀ ಪಂಚಮುಖಿ ಗಣಪತಿ (ಸಿಂಹಾರೂಢ ಪಂಚಾಸ್ಯ ವಕ್ರತುಂಡ ಮೂರ್ತಿ) ಮತ್ತು ಉಮಾ ಮಹೇಶ್ವರ-ಗಂಗಾ-ಗಾಯಿತ್ರಿ-ನವಶಕ್ತಿ ಸ್ವರೂಪವಾದ ತಾಮ್ರದ ಫಲಕವನ್ನು ಷಟ್ ಕೋಣದಲ್ಲಿ ಸ್ಥಾಪಿಸಿ ಕಾವಡಿಗಳು ಪ್ರಾರಂಭವಾಯಿತು.
1954ರಲ್ಲಿ ಶ್ರೀ ಶಿವಶಂಕರ ಶಾಸ್ತ್ರಿಗಳ ಮಕ್ಕಳಾದ ವೇII ಬ್ರII ಶ್ರೀ ಸಿದ್ದಾಂತಿ ಸುಬ್ರಮಣ್ಯ ಶಾಸ್ತ್ರಿಗಳಿಂದ ನವಾಂಶ ಸಂಭೂತನಾದ ನವಲೋಹದಿಂದ ಕೂಡಿದ ಶ್ರೀ ಕುಮಾರಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ದೈವ ಭಕ್ತರಾದ ಶ್ರೀಮತಿ ಪದ್ಮಮ್ಮ ಎಂಬುವವರು 1975ರಲ್ಲಿ ಶ್ರೀ ಉದ್ಬವ ಆದಿಶೇಷ ಸನ್ನಿಧಿಗೆ ಸಂಪೂರ್ಣ ಆಲಯವನ್ನು ಕಟ್ಟಿಸಿದ್ದು. 1991ರಲ್ಲಿ ವಿಮಾನ ಗೋಪುರವನ್ನು ನಿರ್ಮಿಸಲಾಯಿತು. ನಂತರ 2006ರಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಭಕ್ತಾಧಿಗಳಿಂದ ಹಾಗೂ ಇಲಾಖಾ ವತಿಯಿಂದ 108 ಅಡಿ ರಾಜಗೋಪುರದ ನಿರ್ಮಾಣಗೊಂಡ ಕುಂಭಾಭಿಷೇಕವನ್ನು ನಡೆಸಲಾಯಿತು.
ಅನಂತರ ಶಿಥಿಲಗೊಂಡಿದ್ದ ದೇವಸ್ಥಾನವನ್ನು ಇಲಾಖಾ ಮತ್ತು ವ್ಯವಸ್ಥಾಪನಾ ಸಮಿತಿಯ ವತಿಯಿಂದ ದಿನಾಂಕ:18-06-2009ರಲ್ಲಿ ಸಂಪೂರ್ಣ ಜೀರ್ಣೋದ್ದಾರ ಗೊಳಿಸಲಾಯಿತು.
ದೇವಾಲಯದಲ್ಲಿ ವಾರ್ಷಿಕ ಆಡಿಕೃತಿಕೆ, ತಿರುಪ್ಪಡಿ ಉತ್ಸವ, ಕಾರ್ತಿಕ ದೀಪೋತ್ಸವ, ಶಿವರಾತ್ರಿ, ನವರಾತ್ರಿ, ಸಂಕಷ್ಟಹರ ಚತುರ್ಥಿ, ಷಷ್ಠಿ ಪೂಜಾಧಿಗಳು ಪ್ರಮುಖವಾಗಿ ನಡೆಯುತ್ತಿದ್ದು ಭಕ್ತಾಧಿಗಳಿಗೆ ಅಭೀಷ್ಠದಾಯಕವಾಗಿರುತ್ತದೆ.