ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ನಾಲ್ಕುನೂರು ವರ್ಷಗಳ ಹಿಂದೆಯೇ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಗೊಂಡಾರಣ್ಯ ಗುಡ್ಡದ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದರೆಂದು ಪ್ರತೀತಿ ಇದೆ. 1901ರಲ್ಲಿ ಮುಖ್ಯನ್ಯಾಯಾಧೀಶರಾದ ಶ್ರೀ ಟಿ. ನರಹರಿರಾಯರು ಮುಂಭಾಗದ ಮಂಟಪವನ್ನು ಮತ್ತು ಗೋಪುರವೊಂದನ್ನು ನಿರ್ಮಿಸಿರುತ್ತಾರೆ. ಇದಕ್ಕೆ ನರಹರಿರಾಯರ ಗುಡ್ಡವೆಂದು ಕರೆಯಲಾಗುತ್ತಿತ್ತು. ಮೈಸೂರಿನ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಆಸ್ಥಾನ ವಿದ್ವಾಂಸರಾದ ಮಹಾಮಹೋಧ್ಯಯ ವಿದ್ಯಾನಿಧಿ ಸಿದ್ದಾಂತಿ ಶ್ರೀ ಎಸ್. ಶಿವಶಂಕರ ಶಾಸ್ತ್ರೀಗಳು 1924ರಲ್ಲಿ ಸಾಲಿಗ್ರಾಮ ಶಿಲೆಯ ಶ್ರೀ ಪಂಚಮುಖಿ ಗಣಪತಿ (ಸಿಂಹಾರೂಢ ಪಂಚಾಸ್ಯ ವಕ್ರತುಂಡ ಮೂರ್ತಿ) ಮತ್ತು ಉಮಾ ಮಹೇಶ್ವರ-ಗಂಗಾ-ಗಾಯಿತ್ರಿ-ನವಶಕ್ತಿ ಸ್ವರೂಪವಾದ ತಾಮ್ರದ ಫಲಕವನ್ನು ಷಟ್ ಕೋಣದಲ್ಲಿ ಸ್ಥಾಪಿಸಿ ಕಾವಡಿಗಳು ಪ್ರಾರಂಭವಾಯಿತು. 1954ರಲ್ಲಿ ಶ್ರೀ ಶಿವಶಂಕರ ಶಾಸ್ತ್ರಿಗಳ ಮಕ್ಕಳಾದ ವೇII ಬ್ರII ಶ್ರೀ ಸಿದ್ದಾಂತಿ ಸುಬ್ರಮಣ್ಯ ಶಾಸ್ತ್ರಿಗಳಿಂದ ನವಾಂಶ ಸಂಭೂತನಾದ ನವಲೋಹದಿಂದ...