ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯ, ಮಾರಣಕಟ್ಟೆ, ಉಡುಪಿ - 576233, ಉಡುಪಿ .
Sri Bhramhalingeshwara Temple, Maranakatte, Udupi - 576233, Udupi District [TM000142]
×
Temple History
ಇತಿಹಾಸ
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯವು, ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಮಾರಣಕಟ್ಟೆ ಗ್ರಾಮದಲ್ಲಿದ್ದು, ಜಿಲ್ಲಾಡಳಿತ ಕೇಂದ್ರವಾದ ಉಡುಪಿಯಿಂದ ಸುಮಾರು 64 ಕಿ.ಮೀ ದೂರವಿರುತ್ತದೆ.
ಪುರಾಣ ಕಥೆಯ ಪ್ರಕಾರ ಶ್ರೀ ಕ್ಷೇತ್ರವು ಮೂಕಾಸುರನು ಶ್ರೀ ದೇವಿಯಿಂದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಸ್ಥಳವೇ ಮಾರಣಕಟ್ಟೆ. ಶ್ರೀ ದೇವಿಯು ಮೂಕಾಸುರನ ಅಚಲವಾದ ಭಕ್ತಿಗೆ ಮೆಚ್ಚಿ “ ನೀನು ಇಲ್ಲಿಯೇ ಮರಣ ಪಟ್ಟವನಾದ್ದರಿಂದ ಭೂತ ಗಣಗಳಿಗೆಲ್ಲ ಮಾರಣಕಟ್ಟೆ ಬ್ರಹ್ಮನೆಂದು ಪ್ರಸಿದ್ಧಿ ಉಳ್ಳವನಾಗು ಮತ್ತು ನಿನ್ನ ಪರಿವಾರದವರು ಕೂಡ ಮಾರಣಕಟ್ಟೆ ಗಣಗಳು ಎಂದು ಪ್ರಸಿದ್ಧರಾಗಲಿ, ನಿನ್ನ ಮರಣವಾದ ಸ್ಥಳವು ಎತ್ತರವಾಗಿಯೂ ಕಟ್ಟೆಯಂತೆ ಇರುವುದರಿಂದ ಮಾರಣಕಟ್ಟೆ ಎಂದು ಈ ಕಲಿಯುಗದಲ್ಲಿ ಪ್ರಸಿದ್ದಿಯಾಗಲಿ, ಮುಂದೆ ಈ ಕ್ಷೇತ್ರಕ್ಕೆ ಯತಿಯರೊಬ್ಬರ ಪ್ರವೇಶದಿಂದ ಪ್ರಸಿದ್ಧವಾಗುತ್ತೆಂದು” ಶ್ರೀ ದೇವಿಯು ಮೂಕ ದೈತ್ಯನನ್ನು ಕುರಿತು ಈ ಪ್ರಕಾರ...ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯವು, ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಮಾರಣಕಟ್ಟೆ ಗ್ರಾಮದಲ್ಲಿದ್ದು, ಜಿಲ್ಲಾಡಳಿತ ಕೇಂದ್ರವಾದ ಉಡುಪಿಯಿಂದ ಸುಮಾರು 64 ಕಿ.ಮೀ ದೂರವಿರುತ್ತದೆ.
ಪುರಾಣ ಕಥೆಯ ಪ್ರಕಾರ ಶ್ರೀ ಕ್ಷೇತ್ರವು ಮೂಕಾಸುರನು ಶ್ರೀ ದೇವಿಯಿಂದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಸ್ಥಳವೇ ಮಾರಣಕಟ್ಟೆ. ಶ್ರೀ ದೇವಿಯು ಮೂಕಾಸುರನ ಅಚಲವಾದ ಭಕ್ತಿಗೆ ಮೆಚ್ಚಿ “ ನೀನು ಇಲ್ಲಿಯೇ ಮರಣ ಪಟ್ಟವನಾದ್ದರಿಂದ ಭೂತ ಗಣಗಳಿಗೆಲ್ಲ ಮಾರಣಕಟ್ಟೆ ಬ್ರಹ್ಮನೆಂದು ಪ್ರಸಿದ್ಧಿ ಉಳ್ಳವನಾಗು ಮತ್ತು ನಿನ್ನ ಪರಿವಾರದವರು ಕೂಡ ಮಾರಣಕಟ್ಟೆ ಗಣಗಳು ಎಂದು ಪ್ರಸಿದ್ಧರಾಗಲಿ, ನಿನ್ನ ಮರಣವಾದ ಸ್ಥಳವು ಎತ್ತರವಾಗಿಯೂ ಕಟ್ಟೆಯಂತೆ ಇರುವುದರಿಂದ ಮಾರಣಕಟ್ಟೆ ಎಂದು ಈ ಕಲಿಯುಗದಲ್ಲಿ ಪ್ರಸಿದ್ದಿಯಾಗಲಿ, ಮುಂದೆ ಈ ಕ್ಷೇತ್ರಕ್ಕೆ ಯತಿಯರೊಬ್ಬರ ಪ್ರವೇಶದಿಂದ ಪ್ರಸಿದ್ಧವಾಗುತ್ತೆಂದು” ಶ್ರೀ ದೇವಿಯು ಮೂಕ ದೈತ್ಯನನ್ನು ಕುರಿತು ಈ ಪ್ರಕಾರ ಅಜ್ಞೆ ಮಾಡಿದವಳಾಗಿ ನಿಸರ್ಗವಾದ ಮೂಕಾಸುರ ಇತ್ಯಾದಿ ವರ್ಗದ ಮುಂಭಾಗದಲ್ಲಿಯೇ ಶಿವನಿಂದ ಕೂಡಿದವಳಾಗಿ ಕೋಲಾಪುರದ ಸರ್ವಾತ್ಮ ಸ್ವರೂಪವಾದ ದಿವ್ಯ ಲಿಂಗದಲ್ಲಿ ಐಕ್ಯಳಾದಳು.
ಈ ಕ್ಷೇತ್ರದಲ್ಲಿ ಯಕ್ಷೇ, ಚಿಕ್ಕಮ್ಮ ದೇವರ ಮೊದಲಾದ ದೇವತೆಗಳ ಬಳಗವು ಕಂಡು ಬರುತ್ತದೆ. ಶ್ರೀ ಕ್ಷೇತ್ರವು ಧರ್ಮಸ್ಥಳದಂತೆ ವಾಕ್ಯ ಪ್ರಮಾಣದ ತೀರ್ಪು ಸಿಗುತ್ತದೆ. ಅದ್ದರಿಂದ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿ ತೆಂಕಿನ ದೇವರದಂತೆ ಈ ಕ್ಷೇತ್ರವು ಬಡಗಿನ ದೇವರೆಂದು ಕರೆಯಲ್ಪಡುತ್ತದೆ. ಮಕರ ಸಂಕ್ರಾಂತಿಯ ಉತ್ಸವವು ಈ ದೇವಾಲಯದ ವಿಶೇಷ ಉತ್ಸವವಾಗಿರುತ್ತದೆ. ಇಲ್ಲಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಶ್ರೀ ಚಕ್ರ ಕಲ್ಲಿನ ಶಿಲೆಯ ಮೇಲೆ ರುದ್ರಾಭಿಷೇಕ ನಡೆಯುವುದು ವಿಶೇಷ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಶಿರದ ಮೇಲೆ ಸಿಂಗಾರದ ಹೂವು ಏರಿಸಿ ಮಹಾ ಮಂಗಳಾರತಿ ಮಾಡುವಾಗ ಬೀಳುವ ಪ್ರಸಾದವೇ ಶ್ರೀ ಕ್ಷೇತ್ರದ ಪ್ರಮುಖ ವಿಶೇಷತೆ. ಏಕೆಂದರೆ ಭಕ್ತಾಧಿಗಳು ಯಾವುದೇ ಹರಕೆ ಹೊತ್ತು ಈ ಸೇವೆಯನ್ನು ಮಾಡಿದಾಗ ಪ್ರಸಾದ ಶಿರದಿಂದ ಕೆಳಗೆ ಬಿದ್ದಲ್ಲಿ ಅತ ಎಣಿಸಿದ ಕೆಲಸವಾಗುತ್ತೆಂದು ಭಾವಿಸುತ್ತಾರೆ. ಉದಾ: ಮನೆ ಕಟ್ಟುವುದು, ಮದುವೆ ಸಂಬಂಧ ಏರ್ಪಾಡಿಸುವುದು, ಮಕ್ಕಳ ಬಗ್ಗೆ ಹರಕೆ ಹೊರುವುದು ಮತ್ತು ಭೂ ವಿವಾದ ಇತ್ಯರ್ಥ ಅಲ್ಲದೇ ರಂಗ ಪೂಜೆಯನ್ನು ಮಾಡಲು ಸಹ ಹರಕೆಯನ್ನು ಹೊರುತ್ತಾರೆ.
ಮಕರ ಸಂಕ್ರಾಂತಿಯಿಂದ ಕುಂಬ ಸಂಕ್ರಮಣ (ಕಿರುಜಾತ್ರೆ) ಒಂದು ತಿಂಗಳ ಕಾಲ ಈ ಕ್ಷೇತ್ರದಲ್ಲಿ ಜಾತ್ರೆಗೆ ಬರದೇ ಇರುವವರು ಈ ಸಮಯದಲ್ಲಿ ಒಂದು ಹೂವು ಒಪ್ಪಿಸಿ ಪೂಜೆ ಮಾಡಿಸುವುದು ಮತ್ತು ಇಲ್ಲಿಯ ಪ್ರಸಾದ ತೆಗೆದುಕೊಂಡು ಹೋಗಿ ಮನೆಯಲ್ಲಿ ಕೊಡುವುದು ವಿಶೇಷತೆ. ಸೌರಮಾನ ಯುಗಾದಿ ಮೇಷ ಸಂಕ್ರಮಣದ ಮರುದಿನ ಜರುಗುತ್ತದೆ. ದೀಪೋತ್ಸವವು ಕಾರ್ತಿಕ ಮಾಸ ಕೃಷ್ಣ ಚರ್ತುದರ್ಶಿಯಂದು ಜರುಗುತ್ತದೆ.
ಈ ಕ್ಷೇತ್ರದ ಮುಖ್ಯ ವಿಶೇಷವೆಂದರೆ ಪ್ರತಿ ವರ್ಷ ದೇವರ ಮರದ ವಿಗ್ರಹಗಳನ್ನು ಮಕರ ಸಂಕ್ರಮಣ ಉತ್ಸವಕ್ಕೆ ಎರಡು ವಾರ ಇರುವಾಗ ಕಲೆ ವಿಸರ್ಜನೆ ಮಾಡಿ ಸ್ಥಳ ಪದ್ದತಿಯಂತೆ ಗುಡಿಗಾರ ಕುಟುಂಬದವರಿಂದ ವಿಗ್ರಹಗಳಿಗೆ ಬಣ್ಣ ಲೇಪಿಸಿ ಮಕರ ಸಂಕ್ರಮಣದ ದಿನ ಸೂರ್ಯೋದಯಕ್ಕೆ ಮುಂಚೆ ಪುನರ್ ಪ್ರತಿಷ್ಠಾಪನೆ ಮಾಡಲಾಗುವುದು. ಇದು ಈ ದೇವಾಲಯದ ವಿಶೇಷವಾಗಿರುತ್ತದೆ.
ಸ್ಥಳ ಪುರಾಣ
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸ್ಥಳ ಪುರಾಣದ ಕುರಿತು ಟಿಪ್ಪಣಿ
ಶ್ರೀ ಕ್ಷೇತ್ರವು ಮೂಕಾಸುರನು ಶ್ರೀ ದೇವಿಯಿಂದ ಯುದ್ದದಲ್ಲಿ ಕೊಲ್ಲಲ್ಪಟ್ಟ ಸ್ಥಳವೇ ಮಾರಣಕಟ್ಟೆ. ಶ್ರೀ ದೇವಿಯು ಮೂಕಾಸುರನ ಅಚಲವಾದ ಭಕ್ತಿಗೆ ಮೆಚ್ಚಿದವಳಾಗಿ ಅವನ ಮೇಲೆ ಸಂತೋಷ ಉಳ್ಳವಳಾಗಿ ಈ ಪ್ರಕಾರ ಹೇಳುವಳಾದಳು. ದಾನವೇಂದ್ರನಾದ ಏಲೈ ಮೂಕಾಸುರನೇ ನೀನು ತಪೋಗುಣದಿಂದ ಕೂಡಿದವನಾದ್ದರಿಂದ ಈ ಹೊತ್ತಿನಿಂದ ನನ್ನ ಸಮೀಪದಲ್ಲಿಯೇ ಭೂತಗಳಿಗೆಲ್ಲ ಒಡೆಯನಾಗಿ ವಾಸ ಮಾಡುವವನಾಗು. ನೀನು ಇಲ್ಲಿಯೇ ಮರಣ ಪಟ್ಟವನಾದ್ದರಿಂದ ಭೂತ ಗಣಗಳಿಗೆಲ್ಲ ಮಾರಣಕಟ್ಟೆ ಬ್ರಹ್ಮನೆಂದು ಪ್ರಸಿದ್ದಿ ಉಳ್ಳವನಾಗು. ಮತ್ತು ನಿನ್ನ ಪರಿವಾರದವರು ಕೂಡಾ ಮಾರಣಕಟ್ಟೆ ಗಣಗಳು ಎಂದು ಪ್ರಸಿದ್ದರಾಗಲಿ. ಶ್ರೀ ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಶ್ರೀ ಬ್ರಹ್ಮಲಿಂಗೇಶ್ವರ ಎಂಬ ನಾಮವನ್ನಿಟ್ಟು ಭಕ್ತ ಪೋಷಕನಾಗಿ ಅಭಯದಾತನಾಗುವಂತೆ ಹರಸಿದಳು. ಮತ್ತು ನಿನ್ನ...ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸ್ಥಳ ಪುರಾಣದ ಕುರಿತು ಟಿಪ್ಪಣಿ
ಶ್ರೀ ಕ್ಷೇತ್ರವು ಮೂಕಾಸುರನು ಶ್ರೀ ದೇವಿಯಿಂದ ಯುದ್ದದಲ್ಲಿ ಕೊಲ್ಲಲ್ಪಟ್ಟ ಸ್ಥಳವೇ ಮಾರಣಕಟ್ಟೆ. ಶ್ರೀ ದೇವಿಯು ಮೂಕಾಸುರನ ಅಚಲವಾದ ಭಕ್ತಿಗೆ ಮೆಚ್ಚಿದವಳಾಗಿ ಅವನ ಮೇಲೆ ಸಂತೋಷ ಉಳ್ಳವಳಾಗಿ ಈ ಪ್ರಕಾರ ಹೇಳುವಳಾದಳು. ದಾನವೇಂದ್ರನಾದ ಏಲೈ ಮೂಕಾಸುರನೇ ನೀನು ತಪೋಗುಣದಿಂದ ಕೂಡಿದವನಾದ್ದರಿಂದ ಈ ಹೊತ್ತಿನಿಂದ ನನ್ನ ಸಮೀಪದಲ್ಲಿಯೇ ಭೂತಗಳಿಗೆಲ್ಲ ಒಡೆಯನಾಗಿ ವಾಸ ಮಾಡುವವನಾಗು. ನೀನು ಇಲ್ಲಿಯೇ ಮರಣ ಪಟ್ಟವನಾದ್ದರಿಂದ ಭೂತ ಗಣಗಳಿಗೆಲ್ಲ ಮಾರಣಕಟ್ಟೆ ಬ್ರಹ್ಮನೆಂದು ಪ್ರಸಿದ್ದಿ ಉಳ್ಳವನಾಗು. ಮತ್ತು ನಿನ್ನ ಪರಿವಾರದವರು ಕೂಡಾ ಮಾರಣಕಟ್ಟೆ ಗಣಗಳು ಎಂದು ಪ್ರಸಿದ್ದರಾಗಲಿ. ಶ್ರೀ ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಶ್ರೀ ಬ್ರಹ್ಮಲಿಂಗೇಶ್ವರ ಎಂಬ ನಾಮವನ್ನಿಟ್ಟು ಭಕ್ತ ಪೋಷಕನಾಗಿ ಅಭಯದಾತನಾಗುವಂತೆ ಹರಸಿದಳು. ಮತ್ತು ನಿನ್ನ ಮರಣವಾದ ಸ್ಥಳವು ಎತ್ತರವಾಗಿಯೂ ಕಟ್ಟೆಯಂತೆ ಇರುವುದರಿಂದ ಮಾರಣಕಟ್ಟೆ ಎಂದು ಈ ಕಲಿಯುಗದಲ್ಲಿ ಪ್ರಸಿದ್ದಿಯಾಗಲ್ಪಡಲಿ. ಮತ್ತು ಮುಂದೆ ಈ ಕ್ಷೇತ್ರಕ್ಕೆ ಯತೀಯರನೋಬ್ಬ ಬಂದ ನಂತರ ಈ ಕ್ಷೇತ್ರ ಪ್ರಸಿದ್ದಿವಾಗುತ್ತದೆಂದು ಶ್ರೀ ದೇವಿಯೂ ಮೂಕದೈತ್ಯನನ್ನು ಕುರಿತು ಈ ಪ್ರಕಾರ ಆಜ್ಞೆಮಾಡಿದವಳಾಗಿ ನಿಸರ್ಗವಾದ ಮೂಕಾಸುರ ಇತ್ಯಾದಿ ವರ್ಗದ ಮುಂಭಾಗದಲ್ಲಿಯೇ ಶಿವನಿಂದ ಕೂಡಿದವಳಾಗಿ ಕೋಲಾಪುರದ ಸರ್ವಾತ್ಮ ಸ್ವರೂಪವಾದ ದಿವ್ಯ ಲಿಂಗದಲ್ಲಿ ಐಕ್ಯಲಾದಳು.
ಶ್ರೀ ಕ್ಷೇತ್ರದಲ್ಲಿ ಮುಂದೆ ಕೊಲ್ಲೂರಿಗೆ ಬಂದ ಶಂಕಾರಾಚಾರ್ಯರು ಈ ಕ್ಷೇತ್ರಕ್ಕೆ ಬಂದರು. ಮಹಾಪುರುಷರ ಪಾದದುಳಿಯಿಂದಾಗಿಯೂ, ಪೂಜ್ಯರಿಂದ ಬರೆಯಲ್ಪಟ್ಟ ಶ್ರೀ ಚಕ್ರದಿಂದಾಗಿಯೂ ಮಹಾನ್ ಶಕ್ತಿಯೊಂದಿಗೆ ಪುಣ್ಯ ಕ್ಷೇತ್ರವಾಗಿ ಭಕ್ತರ ಯಾತ್ರಾ ಸ್ಥಳವಾಯಿತು. ಅಲ್ಲದೇ ಜನಪದಗಳಿದ್ದಂತೆ ಬಾಯಿಂದ ಬಾಯಿಗೆ ಬಂದ ಜನರ ಮಾತಿನಂತೆ ಚಿತ್ತೂರು ಗುಡಿಕೇರಿಮನೆಯ ಸಂಸ್ಥಾನ ಚಂದಯ್ಯ ಶೆಟ್ಟಿ ಯವರು ಈ ಕ್ಷೇತ್ರಕ್ಕೆ ಗುಡಿಯನ್ನು ನಿರ್ಮಿಸಿ, ಮಂಜರ ಅರ್ಚಕ ಕುಟುಂಬದವರ ಮೂಲಕ ಪೂಜೆ ನಡೆಸುತ್ತಾ ಆಡಳಿತ ನಡೆಸಿಕೊಂಡು ಬಂದಿರುವುದು ಪ್ರತೀತಿ ಇದೆ. ಅಲ್ಲದೇ ಇದು ಸೆಕ್ಷನ್ ೩೮ ರಿಜಿಸ್ರಿö್ತಯಲ್ಲಿ ನಮೂದಿರುತ್ತದೆ.
ಈ ಕ್ಷೇತ್ರದಲ್ಲಿ ಯಕ್ಷೇ ಚಿಕ್ಕಮ್ಮ ಹಾÊಗುಳಿ ದೇವರ ಮೊದಲಾದ ದೇವತೆಗಳ ಬಳಗವು ಕಂಡುಬರುತ್ತದೆ. ಶ್ರೀ ಕ್ಷೇತ್ರವು ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ವಾಕ್ಯ ಪ್ರಮಾಣದ ತೀರ್ಪು ಸಿಗುತ್ತದೆ. ಆದ್ದರಿಂದ ಧರ್ಮಸ್ಥಳ ಮಂಜುನಾಥನ ಸನ್ನಿಧಿ ತೆಂಕಿನ ದೇವರಾದಂತೆ ಈ ಕ್ಷೇತ್ರವು ಬಡಗಿನ ದೇವರೆಂದೇ ಕರೆಯಲ್ಪಡುತ್ತದೆ.
ಮಕರ ಸಂಕ್ರಾAತಿಯ ಉತ್ಸವವು ಈ ಕ್ಷೇತ್ರದ ವಿಶೇಷ ಉತ್ಸವವಾಗಿರುತ್ತದೆ. ಇಲ್ಲಿ ಶಂಕರಾಚಾರ್ಯರ ಸ್ಥಾಪಿತವಾದ ಶ್ರೀ ಚಕ್ರ ಕಲ್ಲಿನ ಶಿಲೆಯ ಮೇಲೆ ರುದ್ರಾಭಿಷೇಕ ನಡೆಯುವುದು ವಿಶೇಷ. ಶ್ರೀ ಬ್ರಹ್ಮಲಿಂಗೇಶ್ವರ ದೇವರ ಶಿರದ ಮೇಲೆ ಸಿಂಗಾರದ ಹೂವು ಏರಿಸಿ ಮಹಾ ಮಂಗಳಾರತಿ ಎತ್ತಿದಾಗ ಬೀಳುವ ಪ್ರಸಾದವೇ ಶ್ರೀ ಕ್ಷೇತ್ರದ ಪ್ರಮುಖ ವಿಶೇಷತೆ. ಏಕೆಂದರೆ ಭಕ್ತಾಧಿಯೂ ಯಾವುದೇ ಹರಕೆ ಹೊತ್ತು ಈ ಸೇವೆಯನ್ನು ಮಾಡಿದಾಗ ಪ್ರಸಾದ ಶಿರದಿಂದ ಕೆಳಗೆ ಬಿದ್ದಲ್ಲಿ ಆತ ಎಣಿಸಿದ ಕೆಲಸ ಆಗುತ್ತದೆಯೇ ಎಂದು ಭಾವಿಸುತ್ತಾರೆ. ಉದಾ: ಮನೆ ಕಟ್ಟುವುದು, ಮದುವೆ ಸಂಬAಧ ಏರ್ಪಡಿಸುವುದು, ಮಕ್ಕಳ ಬಗ್ಗೆ ಹರಕೆ ಹೊರುವುದು ಮತ್ತು ಭೂ ವಿವಾದ ಇತ್ಯರ್ಥ. ಅಲ್ಲದೇ ರಂಗಪೂಜೆ ಸೇವೆಯನ್ನು ಮಾಡಲೂ ಸಹ ಹರಕೆಯನ್ನು ಹೊರುತ್ತಾರೆ.
ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಉದಾ: ಮನೆ ಕಟ್ಟುವುದು, ಜಾಗ ಖರೀದಿ, ಮಕ್ಕಳ ಬೇಡಿಕೆ, ಇವುಗಳ ಬಗ್ಗೆ ಯಕ್ಷಗಾನ ಹರಕೆಯನ್ನು ಹೊರುವುದು ಈ ಕ್ಷೇತ್ರದ ಪ್ರತೀತಿ. ಮತ್ತು ಮಕರ ಸಂಕ್ರಾAತಿಯ ದಿನದಂದು ರಾತ್ರಿ ಗೆಂಡ ಸೇವೆಯಲ್ಲಿ ಮಹಿಳೆಯರು ಮಕ್ಕಳ ಸಂತಾನಕ್ಕಾಗಿ ಹರಕೆ ಹೊರುವುದು ಇಲ್ಲಿಯ ವಿಶೇಷತೆ. ಮಕರ ಸಂಕ್ರಮಣದAದು ಈ ಕ್ಷೇತ್ರಕ್ಕೆ ಭಕ್ತಾಧಿಗಳು ತಲೆಯ ಮೇಲೆ ಸೇವಂತಿಗೆ ಹೂವು, ಸಿಂಗಾರ ಹೂವು ಹೊತ್ತು ಬರುವುದು ತುಳುನಾಡಿನವರ ವಿಶೇಷತೆ. ಮಕರ ಸಂಕ್ರಮಣದ ನಂತರದ ಎರಡು ದಿನ ಇಲ್ಲಿಯ ಯಕ್ಷೇ ಚಿಕ್ಕು ಮತ್ತು ಪರಿವಾರ ಹಾಗೂ ಹಾÊಗುಳಿ ಮತ್ತು ಪರಿವಾರ ದೈವಗಳಿಗೆ ಮಂಡಲೋತ್ಸವ ಜರುಗುತ್ತದೆ. ಅದಕ್ಕೆ ಭಕ್ತಾಧಿಗಳು ಸೇವಂತಿಗೆ ಹೂವು ಒಪ್ಪಿಸುವುದು ಇಲ್ಲಿಯ ವಿಶೇಷತೆ.
ಮಕರ ಸಂಕ್ರಾAತಿಯಿAದ ಕುಂಭ ಸಂಕ್ರಮಣ ( ಕಿರು ಜಾತ್ರೆ) ಒಂದು ತಿಂಗಳ ಕಾಲ ಈ ಕ್ಷೇತ್ರದಲ್ಲಿ ಜಾತ್ರೆಗೆ ಬಾರದೇ ಇರುವವರು ಈ ಸಮಯದಲ್ಲಿ ಬಂದು ಹೂವು ಒಪ್ಪಿಸಿ ಪೂಜೆ ಮಾಡಿಸುವುದು ಮತ್ತು ಇಲ್ಲಿಯ ಪ್ರಸಾದ ತಗೆದುಕೊಂಡು ಹೋಗಿ ಮನೆಯಲ್ಲಿ ಗಡಿಯಾರ ಕೊಡುವುದು ವಿಶೇಷತೆ.
ವರ್ಷದ ಮೂರು ಕಾಲದಲ್ಲಿ ಚರುವಿನ ಪೂಜೆ ( ವೃಶ್ಚಿಕ ಮಾಸ , ಮೇಷ ಮಾಸ, ಸಿಂಹ ಮಾಸ ) ಈ ಪೂಜೆಗೆ ಒಂದು ರಾತ್ರಿ ಒಬ್ಬರಿಗೆ ಮಾತ್ರ ಅವಕಾಶ ಇದ್ದು ಹತ್ತು ವರ್ಷದ ವರೆಗೂ ಬುಕ್ಕಿಂಗ್ ಆಗಿರುತ್ತದೆ.
ಸೌರಮಾನಯುಗಾದಿ ಮೇಷ ಸಂಕ್ರಮಣದ ಮರುದಿನ ಜರುಗುತ್ತದೆ.
ದೀಪೋತ್ಸವವು ಕಾರ್ತಿಕ ಮಾಸ ಕೃಷ್ಣ ಚತುದರ್ಶಿಯಂದು ಜರುಗುತ್ತದೆ.
ಈ ಕ್ಷೇತ್ರದ ವಿಶೇಷತೆ ಏನೆಂದರೆ ಪ್ರತಿ ವರ್ಷ ದೇವರ ಮರದ ವಿಗ್ರಹಗಳನ್ನು ಮಕರ ಸಂಕ್ರಮಣ ಉತ್ಸವಕ್ಕೆ ಎರಡು ವಾರ ಇರುವಾಗ ಕಲೆ ವಿಸರ್ಜನೆ ಮಾಡಿ ಸ್ಥಳ ಪದ್ದತಿಯಂತೆ ಗುಡಿಗಾರ ಕುಟುಂಬದಿAದ ವಿಗ್ರಹಗಳಿಗೆ ಬಣ್ಣ ಲೇಪಿಸಿ ಮಕರ ಸಂಕ್ರಮಣದ ದಿನ ಸೂರ್ಯೋದಯಕ್ಕೆ ಮುಂಚೆ ಪುನರ್ ಪ್ರತಿಷ್ಟಾಪನೆ ಮಾಡಲಾಗುವುದು.