ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯವು, ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಮಾರಣಕಟ್ಟೆ ಗ್ರಾಮದಲ್ಲಿದ್ದು, ಜಿಲ್ಲಾಡಳಿತ ಕೇಂದ್ರವಾದ ಉಡುಪಿಯಿಂದ ಸುಮಾರು 64 ಕಿ.ಮೀ ದೂರವಿರುತ್ತದೆ. ಪುರಾಣ ಕಥೆಯ ಪ್ರಕಾರ ಶ್ರೀ ಕ್ಷೇತ್ರವು ಮೂಕಾಸುರನು ಶ್ರೀ ದೇವಿಯಿಂದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಸ್ಥಳವೇ ಮಾರಣಕಟ್ಟೆ. ಶ್ರೀ ದೇವಿಯು ಮೂಕಾಸುರನ ಅಚಲವಾದ ಭಕ್ತಿಗೆ ಮೆಚ್ಚಿ “ ನೀನು ಇಲ್ಲಿಯೇ ಮರಣ ಪಟ್ಟವನಾದ್ದರಿಂದ ಭೂತ ಗಣಗಳಿಗೆಲ್ಲ ಮಾರಣಕಟ್ಟೆ ಬ್ರಹ್ಮನೆಂದು ಪ್ರಸಿದ್ಧಿ ಉಳ್ಳವನಾಗು ಮತ್ತು ನಿನ್ನ ಪರಿವಾರದವರು ಕೂಡ ಮಾರಣಕಟ್ಟೆ ಗಣಗಳು ಎಂದು ಪ್ರಸಿದ್ಧರಾಗಲಿ, ನಿನ್ನ ಮರಣವಾದ ಸ್ಥಳವು ಎತ್ತರವಾಗಿಯೂ ಕಟ್ಟೆಯಂತೆ ಇರುವುದರಿಂದ ಮಾರಣಕಟ್ಟೆ ಎಂದು ಈ ಕಲಿಯುಗದಲ್ಲಿ ಪ್ರಸಿದ್ದಿಯಾಗಲಿ, ಮುಂದೆ ಈ ಕ್ಷೇತ್ರಕ್ಕೆ ಯತಿಯರೊಬ್ಬರ ಪ್ರವೇಶದಿಂದ ಪ್ರಸಿದ್ಧವಾಗುತ್ತೆಂದು” ಶ್ರೀ ದೇವಿಯು ಮೂಕ ದೈತ್ಯನನ್ನು ಕುರಿತು ಈ ಪ್ರಕಾರ...