Screen Reader Access                 A-  A  A+ 
ಶ್ರೀ ಅಹಲ್ಯಾದೇವಿ ಮಾರಮ್ಮ ದೇವಸ್ಥಾನ, ಆರತಿ ಉಕ್ಕಡ, ಮಂಡ್ಯ - 571427, ಮಂಡ್ಯ .
Sri Ahalyadevi Maramma Temple, Arathi Ukkada, Mandya - 571427, Mandya District [TM000143]
×
Temple History

ಸ್ಥಳ ಪುರಾಣ

ಅಹಲ್ಯಾದೇವಿಗೆ ಸ್ಥಳೀಯವಾಗಿ ತನ್ನದೇ ಆದ ಇತಿಹಾಸವಿದೆ. ಆರತಿ ಉಕ್ಕಡ ಗ್ರಾಮದ 11 ಜನ ಬೆಸ್ತ ಜನರು ಮೀನಿನ ಬೇಟೆಗೆಂದು ಹೊರಟರು, ಹೊಳೆಯ ಬಳಿ ಬಂದು ಬಲೆ ಬೀಸಿದ ಕೆಲವೇ ಕ್ಷಣದಲ್ಲಿ ಬೃಹತ್ ಗಾತ್ರದ ಮೀನೊಂದು ಸಿಲುಕಿದೆಯೆಂದು ಬಲೆಯನ್ನು ಬಿಚ್ಚಿದಾಗ ಕೈಗೆ ಸಿಕ್ಕಿದ್ದು ಮರದ ಕೊರಡು, ಅಪಶಕುನವೆಂದು ಬೇಸರ ಮಾಡಿಕೊಂಡು ಆ ಕೊರಡನ್ನು ಹೊಳೆಗೆ ಎಸೆದು ಮತ್ತೆ ಬಲೆ ಬೀಸಿದರು. ಆ ಬಲೆಯನ್ನು ಬಿಚ್ಚಿ ನೋಡಿದಾಗ ಮೊದಲು ಸಿಕ್ಕಿದ ಕೊರಡೇ ಮತ್ತೊಮ್ಮೆ ಬಲೆಗೆ ಸಿಕ್ಕಿರುತ್ತದೆ. ಹೀಗೆ ಒಂದಲ್ಲ ಎರಡಲ್ಲ ಐದಾರು ಬಾರಿ ಬಲೆ ಹಾಕಿದರೂ ಮರದ ಕೊರಡು, ಅದೂ! ಹೆಣ್ಣಿನ ರೂಪವಿರುವ ಮೂರ್ತಿ ಮತ್ತೆ ಮತ್ತೆ ಸಿಕ್ಕಿದಾಗ ಅದನ್ನು ಭೂತ ಇರಬಹುದೆಂದು ಹೆದರಿ ಮನೆಗೆ ಹೋಗಲು ಸಿದ್ಧರಾದರು. ಆಗ ಅಶರೀರವಾಣಿ ನುಡಿದು “ಎಲೈ ಮಕ್ಕಳೆ...

ಪೌರಾಣಿಕ ಹಿನ್ನೆಲೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಆರತಿ ಉಕ್ಕಡವೂ ಸಹ ಒಂದು. ಶ್ರೀರಂಗಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿ ಪ್ರಶಾಂತ ಹಚ್ಚ ಹಸುರಿನ ನಡುವೆ ನೆಲೆಸಿರುವಳು ತಾಯಿ ಶ್ರೀ ಅಹಲ್ಯಾದೇವಿ. ಎಲ್ಲಾ ವರ್ಗದವರಿಂದ ಪೂಜಿಸಲ್ಪಡುವ ಉಕ್ಕಡದ ಮಾರಮ್ಮನ ದರ್ಶನಕ್ಕಾಗಿ ಇಂದು ಲಕ್ಷಾಂತರ ಜನರು ಮುಂಜಾನೆಯಿಂದ ಸಂಜೆಯವರೆಗೂ ಕಾಯುವುದು ಈ ದೇವಸ್ಥಾನದ ವಿಶೇಷ. ಅದು ಮಹಾ ಮುನಿ ಗೌತಮರ ಆಶ್ರಮ. ದೇವಲೋಕದಿಂದ ಧರೆಗಿಳಿದು ಬಂದ ದೇವೇಂದ್ರ ಗೌತಮ ಮಹರ್ಷಿಗಳ ಪರ್ಣಕುಟೀರದ ಪ್ರಶಾಂತ ಪರಿಸರಕ್ಕೆ ಮಾರುಹೋದ. ದೇವೇಂದ್ರನಿಗೆ ತುಂಬಾ ದಾಹವಾಗತೊಡಗಿತ್ತು. ನೀರನ್ನು ಕುಡಿದರೂ ಅವನಿಗೆ ದಾಹ ತಣಿಯಲಿಲ್ಲ, ಕಾರಣ ಅವನ ಮನಸ್ಸು ಆಶ್ರಮದಲ್ಲಿದ್ದ ಒಂದು ಹೆಣ್ಣನ್ನು ನೋಡಿ ಚಂಚಲವಾಯಿತು. ಗೌತಮರ ಆಶ್ರಮದಲ್ಲಿ ಸೌಂದರ್ಯದ ಗಣಿ! ದೇವೇಂದ್ರನಿಗೆ ಕುತೂಹಲ ಹೆಚ್ಚಾಯಿತು. ಇವಳ ಚಲುವಿಗೆ ಮಾರುಹೋದ...