ಶ್ರೀ ಮಹಿಷ ಮರ್ದಿನಿ ದೇವಸ್ಥಾನ, ಕಡಿಯಾಳಿ, ಉಡುಪಿ - 576102, ಉಡುಪಿ .
Sri Mahisha Mardhini Temple, Kadiyali, Udupi - 576102, Udupi District [TM000146]
×
Temple History
ಇತಿಹಾಸ
ಉಡುಪಿಯಲ್ಲಿ ಬೋಜರಾಜನೆಂಬ ರಾಜನ ಕಾಲದಲ್ಲಿ ಪುರಾಣ ಪ್ರಸಿದ್ದವಾದ ರಜತ ಪೀಠಾದಿ ಸಪ್ತ ಕ್ಷೇತ್ರಗಳಲ್ಲಿ ಪ್ರಮುಖವಾದ ಉಡುಪಿಯಲ್ಲಿ ಸ್ಥಾಪಿಸಲ್ಪಟ್ಟ ಅನಂತೇಶ್ವರ ದೇವಸ್ಥಾನದಲ್ಲಿ ಹೋಮದ ತಯಾರಿ ಸಮಯ ಸತ್ತ ಸರ್ಪವೊಂದು ದೊರಕಿದ್ದು, ಇದರ ಪ್ರಾಯಕ್ಚಿತ್ತಕ್ಕೆಂದು ನಾಲ್ಕು ದೇವಿ ಆಲಯ ಹಾಗೂ ನಾಲ್ಕು ನಾಗಾಲಯವನ್ನು ಸ್ತಾಪಿಸಿರುತ್ತಾರೆ.
ಆ ನಾಲ್ಕು ದೇವಿಯ ಆಲಯಗಳಲ್ಲಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನವು ಒಂದು. ಹಾಗೆಯೇ ಶ್ರೀ ದೇವಸ್ಥಾನವನ್ನು ಸ್ತಾಪಿಸುವ ಸಮಯದಲ್ಲಿ ಕುಂಜಿಬೆಟ್ಟು ಗ್ರಾಮದಲ್ಲಿ ವಾಸಿಸುತ್ತಿದ್ದ ಕುಂಜಿತ್ತಾಯ ಮನೆತನದ ದೇವರನ್ನು ರಾಜನ ಉಪಸ್ತಿತಿಯಲ್ಲಿ ಪ್ರತಿಷ್ಠಾಪಿಸಿರುತ್ತಾರೆ.
ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ಶ್ರೀದೇವಸ್ಥಾನಕ್ಕೆ ಅವಿನಾಭಾವ ಸಂಭಂದವಿದೆ . ಪರ್ಯಾಯದ ಪೂರ್ವಬಾವಿಯಾಗಿ ಶ್ರೀಪಾದರು ಶ್ರೀದೇವಿಯ ದರ್ಶನ ಮಾಡಿ ನಂತರ ಸರ್ವಜ್ಞ ಪೀಠವೇರುತ್ತಾರೆ . ಅಲ್ಲದೆ ಹೋಳಿ ಹುಣ್ಣಿಮೆ ಮತ್ತು ವಿಜಯದಶಮಿ...ಉಡುಪಿಯಲ್ಲಿ ಬೋಜರಾಜನೆಂಬ ರಾಜನ ಕಾಲದಲ್ಲಿ ಪುರಾಣ ಪ್ರಸಿದ್ದವಾದ ರಜತ ಪೀಠಾದಿ ಸಪ್ತ ಕ್ಷೇತ್ರಗಳಲ್ಲಿ ಪ್ರಮುಖವಾದ ಉಡುಪಿಯಲ್ಲಿ ಸ್ಥಾಪಿಸಲ್ಪಟ್ಟ ಅನಂತೇಶ್ವರ ದೇವಸ್ಥಾನದಲ್ಲಿ ಹೋಮದ ತಯಾರಿ ಸಮಯ ಸತ್ತ ಸರ್ಪವೊಂದು ದೊರಕಿದ್ದು, ಇದರ ಪ್ರಾಯಕ್ಚಿತ್ತಕ್ಕೆಂದು ನಾಲ್ಕು ದೇವಿ ಆಲಯ ಹಾಗೂ ನಾಲ್ಕು ನಾಗಾಲಯವನ್ನು ಸ್ತಾಪಿಸಿರುತ್ತಾರೆ.
ಆ ನಾಲ್ಕು ದೇವಿಯ ಆಲಯಗಳಲ್ಲಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನವು ಒಂದು. ಹಾಗೆಯೇ ಶ್ರೀ ದೇವಸ್ಥಾನವನ್ನು ಸ್ತಾಪಿಸುವ ಸಮಯದಲ್ಲಿ ಕುಂಜಿಬೆಟ್ಟು ಗ್ರಾಮದಲ್ಲಿ ವಾಸಿಸುತ್ತಿದ್ದ ಕುಂಜಿತ್ತಾಯ ಮನೆತನದ ದೇವರನ್ನು ರಾಜನ ಉಪಸ್ತಿತಿಯಲ್ಲಿ ಪ್ರತಿಷ್ಠಾಪಿಸಿರುತ್ತಾರೆ.
ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ಶ್ರೀದೇವಸ್ಥಾನಕ್ಕೆ ಅವಿನಾಭಾವ ಸಂಭಂದವಿದೆ . ಪರ್ಯಾಯದ ಪೂರ್ವಬಾವಿಯಾಗಿ ಶ್ರೀಪಾದರು ಶ್ರೀದೇವಿಯ ದರ್ಶನ ಮಾಡಿ ನಂತರ ಸರ್ವಜ್ಞ ಪೀಠವೇರುತ್ತಾರೆ . ಅಲ್ಲದೆ ಹೋಳಿ ಹುಣ್ಣಿಮೆ ಮತ್ತು ವಿಜಯದಶಮಿ ದಿನ ಶ್ರೀಮಠದಿಂದ ಶ್ರೀದೇವಿಯ ಸನ್ನಿದಿಗೆ ಶ್ರೀ ಮಠದ ದಿವಾನರು ಶಿಷ್ಯವೃಂದದೊಂದಿಗೆ ಆಗಮಿಸಿ ಶ್ರೀದೇವಿಯ ಪ್ರಸಾದವನ್ನು ಮಠಕ್ಕೆ ತೆಗೆದು ಕೊಂಡು ಹೋಗಿ ಶ್ರೀಪಾದರಿಗೆ ಒಪ್ಪಿಸುವ ಪದ್ದತಿ ಇದೆ.
ಕುಂಜಿತ್ತಾಯ ಮನೆತನಕ್ಕೂ ಹಾಗು ಶ್ರೀ ಕೃಷ್ಣ ಮಠಕ್ಕೂ ನಡೆದ ಒಪ್ಪಂದದಂತೆ ಪ್ರತೀ ಶುಕ್ರವಾರ ಹನ್ನೆರಡು ಜನರ ಆರಾಧನೆಗೆ ಬೇಕಾದ ಸಾಹಿತ್ಯವನ್ನು ಇಂದಿಗೂ ಕಳುಹಿಸಿಕೊಡುತ್ತಾ ಬರುತ್ತಿರುತ್ತಾರೆ.