Screen Reader Access                 A-  A  A+ 
ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನ, ಕಡೆಕಾರು, ಉಡುಪಿ - 576103, ಉಡುಪಿ .
Sri Jaya Durgaparameshwari Temple, Kadekaru, Udupi - 576103, Udupi District [TM000151]
×
Temple History

ಇತಿಹಾಸ

ಸ್ಥಳ ಪುರಾಣ

ನಮ್ಮ ಕರಾವಳಿ ಕರ್ನಾಟಕವು ಶಕ್ತಿದೇವಿಯ ದೇವಾಲಯಗಳಿಂದ ಸಂಪನ್ನವಾಗಿದೆ. ಅದರಲ್ಲಿಯೂ ವಿಶೇಷವಾಗಿ “ರಜತಪೀಠ” ಎಂದು ಪ್ರಸಿದ್ಧವಾಗಿರುವ ಈ ಉಡುಪಿ ನಗರದ ಪರಿಸರವು “ಶಕ್ತಿ” ಯ ಆರಾಧನಾ ಕೇಂದ್ರವಾಗಿ ವಿಜ್ರಂಭಿಸುತ್ತಿದೆ. ಉಡುಪಿಯಲ್ಲಿ ಪ್ರಾಚೀನದ ಶ್ರೀ ಮದನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಾಲಯಗಳ ನಾಲ್ಕು ದಿಕ್ಕಿನಲ್ಲಿಯೂ ನಾಲ್ಕು ದುರ್ಗಾಲಯಗಳೂ, ನಾಲ್ಕು ನಾಗಾಲಯಗಳೂ ಕಂಗೊಳಿಸುತ್ತಿವೆ. ಕಡಿಯಾಳಿಯ ಶ್ರೀ ಮಹಿಷಮರ್ದಿನಿ, ಬೈಲೂರಿನ ಶ್ರೀ ಮಹಿಷಮರ್ದಿನಿ, ಕನ್ನರಪಾಡಿಯ ಶ್ರೀ ಜಯದುರ್ಗಾಪರಮೇಶ್ವರೀ ಹಾಗೂ ಪುತ್ತೂರಿನ ಶ್ರೀ ದುರ್ಗಾಪರಮೇಶ್ವರಿ ದೇವಾಲಯಗಳು ಆ ನಾಲ್ಕು ದುರ್ಗಾಲಯಗಳಾಗಿದ್ದು, ತಾಂಗೋಡು, ಮಾಂಗೋಡು, ಅರಿತೋಡು ಮತ್ತು ಮುಚ್ಚಿಲಕೋಡು ಈ ಸ್ಥಳಗಳಲ್ಲಿರುವ ದೇವಾಲಯಗಳೇ ಆ ನಾಲ್ಕು ನಾಗಾಲಯಗಳು. ಈ ಎಂಟೂ ದೇವಾಲಯಗಳ ಉಪಸ್ಥಿತಿಯ ಬಗ್ಗೆ ಸ್ಕಾಂದಪುರಾಣದಲ್ಲಿಯೇ ಉಲ್ಲೇಖವಿರುವುದು. ಮಂಗಳೂರಿನಿಂದ ಕುಂದಾಪುರದ ಕಡೆಗೆ ಪ್ರಯಾಣಿಸುವಾಗ, ರಾಷ್ಟೀಯ ಹೆದ್ದಾರಿ ೬೬ ರಲ್ಲಿ, ರಸ್ತೆಯ ಪಡುಬದಿಯಲ್ಲಿ ಸುಮಾರು ೧೦೦-೧೫೦...