Screen Reader Access     A-AA+
ಶ್ರೀ ನಾಗಾವಿ ಯಲ್ಲಮ್ಮ ದೇವಿ ದೇವಾಲಯ, ಚಿತ್ತಾಪೂರ, ಕಲಬುರಗಿ - 585211, ಕಲಬುರಗಿ .
Sri Nagavi Yallamma Devi Temple, Chittapur, Kalaburagi - 585211, Kalaburagi District [TM000153]
×
Temple History

ಸ್ಥಳ ಪುರಾಣ

ಕರ್ನಾಟಕ ಸಾಂಸ್ಕೃತಿಕವಾಗಿ ಸಂಪದ್ಭರಿತವಾದ ಪ್ರದೇಶ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವುಗಳಿಂದಲ್ಲೂ ಈ ಪ್ರದೇಶ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ, ಚಾರಿತ್ರಿಕ ದೃಷ್ಟಿಯಿಂದಲ್ಲೂ ಈ ನೆಲ ಅತ್ಯಂತ ಹಿರಿಮೆಯನ್ನು ಹೊಂದಿದೆ. ಕಾಲಕಾಲಕ್ಕೆ ಈ ನಾಡನ್ನಾಳಿದ ಅರಸರು/ರಾಜರುಗಳು, ರಾಣಿಯರು, ಸಾಮಂತರು, ಕಲೆ ಸಾಹಿತ್ಯ, ಮತ್ತು ಸಂಸ್ಕೃತಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತ ಬಂದಿದ್ದಾರೆ. ಅಂದು ಈ ನಾಡಿನಲ್ಲಿ ರಾಜ್ಯದ ರಕ್ಷಣೆಯ ಹಿತದೃಷ್ಟಿಯಿಂದ ಸಣ್ಣಪುಟ್ಟ ಆಡಳಿತ ಕೇಂದ್ರಗಳಿದ್ದವು. ಇವುಗಳನ್ನು ನೋಡಿಕೋಳ್ಳಲಿಕ್ಕೆ ವಿವಿಧ ವರ್ಗಗಳ ಆಡಳಿತಾಧಿಕಾರಿಗಳೂ ಇರುತ್ತಿದ್ದರು. ಇವರು ನಾಡನ್ನಾಳುವ ಪ್ರಭುಗಳಿಗೆ ಸಾಮಂತರಾಗಿರುತ್ತಿದ್ದರು. ಇವರನ್ನು ದಂಡನಾಯಕರು, ಮಹಾಮಂಡಳೇಶ್ವರರು ಎಂತೆಲ್ಲ ಕರೆಯಲಾಗುತ್ತದೆ. ನಾಗಾವಿ ಕರ್ನಾಟಕ ಪ್ರಾಚೀನ ಅಗ್ರಹಾರಗಳಲ್ಲೊಂದು, ಇದು ಗುಲಬರ್ಗಾ ಜಿಲ್ಲೆಯ ತಾಲ್ಲೂಕ್ ಕೇಂದ್ರ ಚಿತ್ತಾಪೂರದ ಪೂರ್ವ ದಿಕ್ಕಿನಲ್ಲಿದೆ. ಚಿತ್ತಾಪೂರ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ ಅಂತರದಲ್ಲಿದೆ. ಚಿತ್ತಾಪೂರದಿಂದ ಸಾತನೂರು...