ಶ್ರೀ ಹರಿಹರೇಶ್ವರ ದೇವಸ್ಥಾನ, ಹರಿಹರ ಪಲ್ಲತ್ತಡ್ಕ, ದಕ್ಷಿಣ ಕನ್ನಡ - 574218, ದಕ್ಷಿಣ ಕನ್ನಡ .
Sri Harihareshwara Temple, Harihara, Dakshina Kannada - 574218, Dakshina Kannada District [TM000154]
×
Temple History
ಸ್ಥಳ ಪುರಾಣ
ಶ್ರೀ ಹರಿಹರೇಶ್ವರವು ಅನಾದಿ ಕಾಲದಿಂದಲೂ ಇದ್ದು ಋಷಿ ಶ್ರೇಷ್ಠರು ಈ ತೀರ್ಥಕ್ಷೇತ್ರದಲ್ಲಿ ತಪಸ್ಸನ್ನಾಚರಿಸಿ ಹರಿ ಮತ್ತು ಹರ ಇಬ್ಬರನ್ನು ಒಂದೇ ಮೂರ್ತಿಯಲ್ಲಿ ಸಂಕಲ್ಪಿಸಿ ಸ್ಥಾಪಿಸಿದ ಕ್ಷೇತ್ರವೇ ಶ್ರೀ ಹರಿಹರೇಶ್ವರ ದೇವಾಲಯ.
ದೇವಾಲಯದ ಪೂರ್ವದಿಕ್ಕಿನಲ್ಲಿರುವ ಸುಮಾರು ಐದು ಸಾವಿರ ವರುಷಗಳಿಗೂ ಹಿಂದೆ ರಾಕ್ಷಸರ ನಿಗ್ರಹಕ್ಕಾಗಿ ಮುನಿ ಶ್ರೇಷ್ಠರು ವಿಶಿಷ್ಠವಾದ ಯಾಗವನ್ನು ಮಾಡಿದ್ದರೆಂದೂ, ಆ ಯಾಗಕ್ಕೆ ಭರತ ಖಂಡದ ಸಹಸ್ರಾರು ಪುಣ್ಯ ಕ್ಷೇತ್ರಗಳಿಂದ ತೀರ್ಥವನ್ನು ತಂದು ಯಾಗಕ್ಕೆ ಬಳಸಿದ್ದರೆನ್ನಲಾಗುತ್ತಿದ್ದೆ. ಆ ರೀತಿಯಾಗಿ ರಾಕ್ಷಸರ ಸಂಹಾರವಾದ ಬಳಿಕ ಯಾಗವನ್ನು ನಡೆಸಿದ ಮುನಿಗಳು ತಮ್ಮ ಕಮಂಡಲದ ವೇದೋದಕಗಳನ್ನು ನದಿಗೆ ಎರೆದರೆನ್ನುವ ದಂತಕತೆಯಿದೆ. ಸಿದ್ದ ಪರ್ವತದಿಂದ ಹರಿದು ಬರುವ ನದಿಯು ”ಕೋಟಿ ತೀರ್ಥ”ವೆಂದು ಪ್ರಸಿದ್ದಿಯಾಗಿದೆ. ಈ ನದಿಯು ಸಂಗಮವಾಗುವ ಹರಿಹರೇಶ್ವರ ನೆಲೆಯಲ್ಲಿ ಪುಣ್ಯಸ್ನಾನ ಮಾಡಿ ಹರಿಹರೇಶ್ವರನ ದರುಶನ ಪಡೆಯುವುದರಿಂದ ಔಷಧಿ ರಹಿತವಾಗಿ...ಶ್ರೀ ಹರಿಹರೇಶ್ವರವು ಅನಾದಿ ಕಾಲದಿಂದಲೂ ಇದ್ದು ಋಷಿ ಶ್ರೇಷ್ಠರು ಈ ತೀರ್ಥಕ್ಷೇತ್ರದಲ್ಲಿ ತಪಸ್ಸನ್ನಾಚರಿಸಿ ಹರಿ ಮತ್ತು ಹರ ಇಬ್ಬರನ್ನು ಒಂದೇ ಮೂರ್ತಿಯಲ್ಲಿ ಸಂಕಲ್ಪಿಸಿ ಸ್ಥಾಪಿಸಿದ ಕ್ಷೇತ್ರವೇ ಶ್ರೀ ಹರಿಹರೇಶ್ವರ ದೇವಾಲಯ.
ದೇವಾಲಯದ ಪೂರ್ವದಿಕ್ಕಿನಲ್ಲಿರುವ ಸುಮಾರು ಐದು ಸಾವಿರ ವರುಷಗಳಿಗೂ ಹಿಂದೆ ರಾಕ್ಷಸರ ನಿಗ್ರಹಕ್ಕಾಗಿ ಮುನಿ ಶ್ರೇಷ್ಠರು ವಿಶಿಷ್ಠವಾದ ಯಾಗವನ್ನು ಮಾಡಿದ್ದರೆಂದೂ, ಆ ಯಾಗಕ್ಕೆ ಭರತ ಖಂಡದ ಸಹಸ್ರಾರು ಪುಣ್ಯ ಕ್ಷೇತ್ರಗಳಿಂದ ತೀರ್ಥವನ್ನು ತಂದು ಯಾಗಕ್ಕೆ ಬಳಸಿದ್ದರೆನ್ನಲಾಗುತ್ತಿದ್ದೆ. ಆ ರೀತಿಯಾಗಿ ರಾಕ್ಷಸರ ಸಂಹಾರವಾದ ಬಳಿಕ ಯಾಗವನ್ನು ನಡೆಸಿದ ಮುನಿಗಳು ತಮ್ಮ ಕಮಂಡಲದ ವೇದೋದಕಗಳನ್ನು ನದಿಗೆ ಎರೆದರೆನ್ನುವ ದಂತಕತೆಯಿದೆ. ಸಿದ್ದ ಪರ್ವತದಿಂದ ಹರಿದು ಬರುವ ನದಿಯು ”ಕೋಟಿ ತೀರ್ಥ”ವೆಂದು ಪ್ರಸಿದ್ದಿಯಾಗಿದೆ. ಈ ನದಿಯು ಸಂಗಮವಾಗುವ ಹರಿಹರೇಶ್ವರ ನೆಲೆಯಲ್ಲಿ ಪುಣ್ಯಸ್ನಾನ ಮಾಡಿ ಹರಿಹರೇಶ್ವರನ ದರುಶನ ಪಡೆಯುವುದರಿಂದ ಔಷಧಿ ರಹಿತವಾಗಿ ಕಾಯಿಲೆಗಳು, ಮನೋರೋಗ, ಚರ್ಮರೋಗಾಧಿಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಅಲ್ಲದೇ ಸಕಲ ಪಾಪ ನಿವಾರಣೆ ಆಗಿ ಮುಕ್ತಿಯನ್ನು ಕರುಣೆಸುವ ಕ್ಷೇತ್ರವಾಗಿ ಸಹಸ್ರಾರು ಭಕ್ತರನ್ನು ಆಕರ್ಷಿಸುವ ಕ್ಷೇತ್ರವೆಂದು ಇಲ್ಲಿನ ಭಕ್ತರ ಅಚಲವಾದ ನಂಬಿಕೆಯಾಗಿದೆ.
ಋಷಿ ಮುನಿಗಳು ತಪಸ್ಸುಗೈದ ಪಾವನ ಸ್ಥಳವು ಈ ಕೇತ್ರವಾಗಿದ್ದು ಇಲ್ಲಿ ಮಾಡಿಸಿದ ಶನಿಪೂಜೆಗೆ ವಿಶೇಷ ಶಕ್ತಿ ಇರುತ್ತದೆ. ಶ್ರೀ ಹರಿಹರೇಶ್ವರ ಸಂಗಮದಲ್ಲಿ ತುಲಾ ಸಂಕ್ರಮಣದ ದಿನ ತೀರ್ಥ ಉದ್ಭವವಾಗುತ್ತದೆ ಎಂಬ ನಂಬಿಕೆಯಿದೆ. ಆ ದಿನದಂದು ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ತೀರ್ಥಸ್ನಾನ ಮಾಡುತ್ತಾರೆ ಹಾಗೂ ಮೃತರಿಗೆ ಪಿಂಡ ಪ್ರಧಾನವನ್ನು ಮಾಡುತ್ತಾರೆ ಈಗಲೂ ತುಲಾ ಮಾಸಾರಂಭದ ದಿನ ಭಕ್ತಾಧಿಗಳು ಬಂದು ತೀರ್ಥಸ್ನಾನ ಮಾಡುವ ಪದ್ದತಿ ರೂಢಿಯಲ್ಲಿದೆ.
ಹರಿ ಮತ್ತು ಹರರು ಒಂದೇ ಬಿಂಬದಲ್ಲಿ(ಲಿಂಗರೂಪ) ಸಂಕಲ್ಪಿಸಲ್ಟಟ್ಟ ವಿರಳವಾದ ವಿಶಿಷ್ಠವಾದ ಕ್ಷೇತ್ರ ಇದಾಗಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಭಾರತದ ಕೆಲವೇ ಪುಣ್ಯಕ್ಷೇತ್ರಗಳಲ್ಲಿ ಇದು ಒಂದಾಗಿದೆ. ಭಕ್ತರ ಇಷ್ಟಾರ್ಥ ಸಿದ್ದಿಯಾಗಿ, ಪಾಪನಾಶಕವಾಗುತ್ತದೆ. ದೇವಾಲಯಕ್ಕೆ ಸ್ಥಳೀಕರಲ್ಲದೇ ದೂರದ ಊರುಗಳಿಂದಲೂ ಭಕ್ತಾದಿಗಳು ಬಂದು ಈ ಪುಣ್ಯ ಕೇತ್ರದಲ್ಲಿ ತೀರ್ಥಸ್ನಾನ ಮಾಡಿ ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಿರುತ್ತಾರೆ.
ಪ್ರಸ್ತುತ ಇರುವ ಶಿಲಾಮೂರ್ತಿಯು ಲಿಂಗಸ್ವರೂಪಿಯಾಗಿದ್ದು ಸುಮಾರು 800 ವರ್ಷಗಳ ಹಿಂದೆ ಉತ್ತರ ಕರ್ನಾಟಕದಿಂದ ಲಿಂಗಾಯತ ಅರಸರು ತಂದು ಸ್ಥಾಪಿಸಿದರು ಎಂದು ಪ್ರತೀತಿ. ಆ ನಂತರ ಬಲ್ಲಾಳರ ಆಡಳಿತವು ಕೊನೆಗೊಂಡ ನಂತರ ಕೊಡಗಿನ ಅರಸರ ಆಡಳಿತದಲ್ಲಿತ್ತು. ರಾಜ್ಯಾಡಳಿತದ ಕಾಲದಲ್ಲಿ ದೇವಾಲಯಕ್ಕೆ ಸಾಕಷ್ಟು ಕೃಷಿ ಭೂಮಿಯನ್ನು ಬಳುವಳಿ ನೀಡಲಾಗಿತ್ತು ಇದು ಈ ದೇವಾಲಯದ ಇತಿಹಾಸವನ್ನು ಸಾರುತ್ತದೆ.