Screen Reader Access                 A-  A  A+ 
ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಮುಳಬಾಗಿಲು, ಕೋಲಾರ - 563131, ಕೋಲಾರ .
Sri Anjaneya Swamy Temple, Mulabagilu, Kolar - 563131, Kolar District [TM000157]
×
Temple History

ಇತಿಹಾಸ

ಈ ದೇವಾಲಯವು 15 ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು, ವಿಜಯನಗರ ಸಾಮಾಜ್ಯದ ಮಹೋನ್ನತ ಅರಸರಾದ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ದೇವಾಲಯವು ಜೀರ್ಣೋದ್ದಾರಗೊಂಡಿದೆ.

ಸ್ಥಳ ಪುರಾಣ

ದ್ವಾಪರ ಯುಗಾಂತ್ಯದಲ್ಲಿ ನಡೆದ ಮಹಾಭಾರತದ ಕುರುಕ್ಷೇತ್ರ ಯುದ್ದ ಮುಗಿದ ನಂತರ ಶ್ರೀ ಕೃಷ್ಣನು ರಥದ ಮೇಲಿದ್ದ ಕಪಿದ್ವಜವನ್ನು ತೆಗೆದುಕೊಂಡು ರಥದಿಂದ ಇಳಿಯುವಂತೆ ಅರ್ಜುನನಿಗೆ ಹೇಳಿದನು. ಅರ್ಜುನನು ಕಪಿದ್ವಜದೊಂದಿಗೆ ಕೆಳಗೆ ಇಳಿದ ಮೇಲೆ ಶ್ರೀ ಕೃಷ್ಣನು ಕೆಳಗೆ ಇಳಿದ ತಕ್ಷಣ ಆ ದಿವ್ಯ ರಥವು ಭಸ್ಮವಾಯಿತು. ಈ ದಿವ್ಯರಥವು ಭಸ್ಮವಾಗಲು ಕಾರಣವೇನೆಂದು ಅರ್ಜುನನು ಶ್ರೀ ಕೃಷ್ಣನನಿಗೆ ಕೇಳಿದಾಗ ಶ್ರೀ ಕೃಷ್ಣನು ಹೀಗೆ ಹೇಳಿದನು”ಹನುಮಂತನು ಈ ದ್ವಜದಲ್ಲಿ ಸನ್ನಿಹಿತನಾಗಿದ್ದರಿಂದ ಭೀಷ್ಮದ್ರೋಣಾಧಿ ಕರ್ಣ ಇನ್ನು ಮುಂತಾದ ಮಹಾವೀರರು ನಿನ್ನ ಮೇಲೆ ಪ್ರಯೋಗಿಸಿದ್ದ ಬ್ರಹ್ಮಾಸ್ತ್ರ ಮುಂತಾದ ದಿವ್ಯಾಸ್ತ್ರಗಳು ಹನುಮಂತನ ಪ್ರಭಾವದಿಂದ ನಿರರ್ಥಕವಾಗಿ ರಥದಲ್ಲಿ ಅಡಗಿದ್ದವು. ಈಗ ಕಪಿದ್ವಜವನ್ನು ಬೇರ್ಪಡಿಸಿದ್ದರಿಂದ ರಥವು ಭಸ್ಮವಾಯಿತು. ಈ ದ್ವಜದಲ್ಲಿ ಸನ್ನಿಹಿತವಾಗಿರುವ ಶ್ರೀ ಆಂಜನೇಯನನ್ನು ಅವನಿಗೆ ಅತ್ಯಂತ ಪ್ರಿಯವಾದ, ತಾನು ಹುಟ್ಟಿದ ಅಂಜನಾದ್ರಿಯ ಹತ್ತಿರವಿರುವ...