ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೆಕೋಡಿ ಶಿರಾಲಿ, ಉತ್ತರಕನ್ನಡ - 581354, ಉತ್ತರ ಕನ್ನಡ .
Sri Durgaparameshwari Temple Alvekodi Shirali, Uttara Kannda - 581354, Uttara Kannada District [TM000159]
×
Temple History
ಸ್ಥಳ ಪುರಾಣ
ಸುಮಾರು ಮುನ್ನೂರು ವರ್ಷಗಳಿಗಿಂತಲೂ ಹಿಂದೆ ನಿರ್ಜನವಾದ ಕೆದಗೆ ಹಿಂಡಿನ ದಟ್ಟ ಪೊದೆಗಳಿಂದ ಆವೃತ್ತವಾದ ಕಡಲಂಚಿನ ಪ್ರದೇಶವೊಂದರಲ್ಲಿ ನಿತ್ಯ ಹಸುವೊಂದು ತಾನಾಗಿಯೇ ಹಾಲನೆರೆಯುವುದು ಕಂಡುಬರುತ್ತದೆ. ಪ್ರತಿ ನಿತ್ಯವು ಹಸುವು ಪೊದೆಯ ಹಿಂಡಿನಲ್ಲಿ ಹೋಗುವುದನ್ನು ಗಮನಿಸಿದ ಈ ಪರಿಸರದ ಹಿರಿಯರೊಬ್ಬರು ಹಸುವನ್ನು ಹಿಂಬಾಲಿಸುತ್ತಾರೆ. ಕೊನೆಗೂ ಅಲ್ಲಿ ಒಂದು ದೇವಿಯ ವಿಗ್ರಹವಿರುವುದು ಮತ್ತು ನಿತ್ಯವು ಆ ಹಸುವು ಅಲ್ಲಿನ ವಿಗೃಹಕ್ಕೆ ಹಾಲೆಯುವುದು ಗೋಚರವಾಗುತ್ತದೆ. ಇದರಿಂದ ಪ್ರೇರಣೆಗೊಂಡ ಊರ ಜನರು ಈ ದೇವರ ವಿಗೃಹಕ್ಕೆ ಚಿಕ್ಕ ಗುಡಿಯನ್ನು ಕಟ್ಟಿ ಪೂಜಿಸುವ ನಿರ್ಧಾರಕ್ಕೆ ಬರುತ್ತಾರೆ. ಎಲ್ಲರೂ ಒಂದಾಗಿ ಕೂಡಿಕೊಂಡು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಹಂಚಿನ ಮಾಡಿನ ಚಿಕ್ಕ ಗುಡಿಯನ್ನು ನಿರ್ಮಿಸುತ್ತಾರೆ. ಗೋಳಿಕೇರಿ ಎನ್ನುವ ಹವ್ಯಕ ಬ್ರಾಹ್ಮಣ ಕುಟುಂಬದವರನ್ನು ಅರ್ಚಕರನ್ನಾಗಿ ನೇಮಿಸಿ,...ಸುಮಾರು ಮುನ್ನೂರು ವರ್ಷಗಳಿಗಿಂತಲೂ ಹಿಂದೆ ನಿರ್ಜನವಾದ ಕೆದಗೆ ಹಿಂಡಿನ ದಟ್ಟ ಪೊದೆಗಳಿಂದ ಆವೃತ್ತವಾದ ಕಡಲಂಚಿನ ಪ್ರದೇಶವೊಂದರಲ್ಲಿ ನಿತ್ಯ ಹಸುವೊಂದು ತಾನಾಗಿಯೇ ಹಾಲನೆರೆಯುವುದು ಕಂಡುಬರುತ್ತದೆ. ಪ್ರತಿ ನಿತ್ಯವು ಹಸುವು ಪೊದೆಯ ಹಿಂಡಿನಲ್ಲಿ ಹೋಗುವುದನ್ನು ಗಮನಿಸಿದ ಈ ಪರಿಸರದ ಹಿರಿಯರೊಬ್ಬರು ಹಸುವನ್ನು ಹಿಂಬಾಲಿಸುತ್ತಾರೆ. ಕೊನೆಗೂ ಅಲ್ಲಿ ಒಂದು ದೇವಿಯ ವಿಗ್ರಹವಿರುವುದು ಮತ್ತು ನಿತ್ಯವು ಆ ಹಸುವು ಅಲ್ಲಿನ ವಿಗೃಹಕ್ಕೆ ಹಾಲೆಯುವುದು ಗೋಚರವಾಗುತ್ತದೆ. ಇದರಿಂದ ಪ್ರೇರಣೆಗೊಂಡ ಊರ ಜನರು ಈ ದೇವರ ವಿಗೃಹಕ್ಕೆ ಚಿಕ್ಕ ಗುಡಿಯನ್ನು ಕಟ್ಟಿ ಪೂಜಿಸುವ ನಿರ್ಧಾರಕ್ಕೆ ಬರುತ್ತಾರೆ. ಎಲ್ಲರೂ ಒಂದಾಗಿ ಕೂಡಿಕೊಂಡು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಹಂಚಿನ ಮಾಡಿನ ಚಿಕ್ಕ ಗುಡಿಯನ್ನು ನಿರ್ಮಿಸುತ್ತಾರೆ. ಗೋಳಿಕೇರಿ ಎನ್ನುವ ಹವ್ಯಕ ಬ್ರಾಹ್ಮಣ ಕುಟುಂಬದವರನ್ನು ಅರ್ಚಕರನ್ನಾಗಿ ನೇಮಿಸಿ, ಶೃದ್ಧೆಯಿಂದ ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಾರೆ. ಕಾಲಕ್ರಮೇಣ ಗೋಳಿಕೇರಿ ಭಟ್ಟರಿಗೆ ಅನಾನುಕೂಲವಾದ ಕಾರಣ ಮೂಡಭಟ್ಕಳದ ಪುರಾಣಿಕ ಕುಟುಂಬ ಇಲ್ಲಿನ ಪೂಜಾ ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತದೆ.
ಹೀಗೆ ಗ್ರಾಮದ ಎಲ್ಲ ಜನಾಂಗದ ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸುತ್ತಾ ದುರ್ಗಾಪರಮೇಶ್ವರಿಯಾಗಿ ಎಲ್ಲರ ಆರಾಧ್ಯ ದೈವವಾಗುತ್ತಾಳೆ. ಈ ದೇವಿಯಲ್ಲಿ ಅನೇಕ ವಿಶೇಷತೆಗಳನ್ನು ಪವಾಡಗಳನ್ನು ಕಂಡವರು ಇಂದಿಗೂ ಇದ್ದಾರೆ. ದೇವಾಲಯದ ಇತಿಹಾಸದ ಬಗ್ಗೆ ಯಾವುದೆ ಲಿಖಿತ ಮೂಲಗಳು ಇಲ್ಲದೇ ಇದ್ದರೂ ತುಂಬಾ ಹಿಂದಿನದು ಎಂದು ಹೇಳಬಹುದಾಗಿದೆ. ಸತತ ಹನ್ನೆರಡು ವರ್ಷಗಳ ನಂತರ ಅಂದರೆ ಎಪ್ರಿಲ್ 25, 1974 ರಂದು ಶ್ರೀ ಅಳ್ವೆಕೋಡಿ ದುರ್ಗಾಪರಮೇಶ್ವರಿ ಅಮ್ಮನವರ ಭವ್ಯ, ದಿವ್ಯವಾದ ದೇವಾಲಯ ಲೋಕಾರ್ಪಣೆಯಾಯಿತು. ಕಾಲಕ್ರಮೇಣ ಊರಿನ, ತಾಲೂಕಿನ, ಜಿಲ್ಲೆಯ ಎಲ್ಲರ ಮನೆ ಮಾತಾಯಿತು ಅಳ್ವೆಕೋಡಿ ಶ್ರೀ ದುರ್ಗಾಪರಮೆಶ್ವರಿ. ಇಂದಿಗೂ ನಾಡಿನ ಅಸಂಖ್ಯಾತ ಆಸ್ತಿಕ ಭಕ್ತರ ಆರಾಧ್ಯ ದೈವವಾಗಿದ್ದಾಳೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು. ದೇವಾಲಯ ಎದುರು ದ್ವಜಸ್ಥಂಭ, ನಾಗರ ವಿಗ್ರಹಗಳು ಮತ್ತು ಅಶ್ವತ ವೃಕ್ಷವಿರುವುದು ದೇವಾಲಯಕ್ಕೆ ಇನ್ನಷ್ಟು ಶೋಭೆ ತಂದಿದೆ. ದೆವಾಲಯ ಪುನರ್ ಪ್ರತಿಷ್ಠಾಪನೆಗೊಂಡ ನೆನಪಿಗಾಗಿ ಪ್ರತಿ ವರ್ಷ ವೈಶಾಖ ಶುಕ್ಲ ಅಕ್ಷಯ ತದಿಗೆ ದಿನದಂದು ಶ್ರೀ ದೇವಿಯ ಪ್ರತಿಷ್ಠಾ ವರ್ಧಂತಿ ಉತ್ಸವ ಅತ್ಯಂತ ಭಕ್ತಿ ಶೃದ್ಧೆಯಿಂದ ಇಂದಿಗೂ ನಡೆದುಕೊಂಡು ಬರಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಈ ದಿನದಂದು ಭಕ್ತರು ಅಮ್ಮನವರ ದರ್ಶನದಿಂದ ಪುಳಕಿತರಾಗುತ್ತಾರೆ.
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರದ ಸುತ್ತಲೂ ಕಂಡು ಬರುವ ಬೇಟೆ ವೀರ, ಗಡಿವೀರ ಮಹಾಸತಿ ಮತ್ತು ಹಿಂಡುಚರಿ ಮಹಾಸತಿ ಈ ಮೂರು ಪರಿವಾರ ದೇವರುಗಳ ಗುಡಿಗಳನ್ನು ಕಂಡಾಗ ತನ್ನ ಸುತ್ತಲಿನ ಗಡಿಯ ಪ್ರದೇಶದ ನಿರ್ವಹಣೆಗಾಗಿ ಶ್ರೀ ದೇವಿಯೇ ಈ ಪರಿವಾರ ದೇವರುಗಳನ್ನು ನೇಮೀಸಿಕೊಂಡಿರುವಳೊ ಏನೋ ಎನ್ನುವಂತೆ ಭಾಸವಾಗುತ್ತದೆ.
ಶಿಥಿಲಾವಸ್ಥೆಯಲ್ಲಿದ್ದ ದೇವಿಯ ಪರಿವಾರ ದೇವರುಗಳಲ್ಲಿ ಒಂದಾದ, ಶ್ರೀ ಬೇಟೆ ವೀರ ದೇವಾಲಯವನ್ನು ಶಿಲಾಮಯ ಕಂಬಗಳೊಂದಿಗೆ ಜಿರ್ಣೋದ್ದಾರ ಮಾಡಿ ಎಪ್ರಿಲ್ 24, 2000ರಂದು ಪುನರ್ ಪ್ರತಿಷ್ಠಾಪನೆ ಗೊಳಿಸಲಾಯಿತು. ಶಿಥಿಲಾವಸ್ಥೆಯಲ್ಲಿದ್ದ ದೇವಿಯ ಪರಿವಾರ ದೇವರುಗಳಲ್ಲಿ ಒಂದಾದ ಗಡಿವೀರ ಮಹಾಸತಿ ದೇವರ ದೇವಾಲಯವನ್ನು ಅಮ್ಮನ ಅಭಯ ಪ್ರಸಾದದೊಂದಿಗೆ ಜಿರ್ಣೋದ್ದಾರ ಮಾಡಲು ನಿರ್ಧರಿಸಿ ನೂತನ ದೇವಾಲಯ ನಿರ್ಮಿಸಿ ಪೇಬ್ರವರಿ 17, 2003 ರಂದು ಪರಮ ಪೂಜ್ಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾದೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೆರ್ ಸ್ವಾಮಿಜಿಯವರ ಅಮೃತ ಹಸ್ತದಲ್ಲಿ ಪುನರ್ ಪ್ರತಿಷ್ಠಾಪನೆಗೊಳಿಸಲಾಯಿತು. ಮಾರಿ ಜಾತ್ರಾ ಮಹೋತ್ಸವದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರ ದಂಡೆ ಇಲ್ಲಿ ನೆರೆಯುತ್ತದೆ. ಅಷ್ಟೋಂದು ಭಕ್ತಾದಿಗಳು ಬಂದರೂ ಯಾವುದೇ ಅಡಚಣೆ ತೊಂದರೆಗಳಿಲ್ಲದೆ
ಮಹಾಲಕ್ಷ್ಮೀ ಅಮ್ಮನವರಿಗೆ ಶ್ರಾವಣ ಮಾಸದಲ್ಲಿ ಎಲ್ಲಾ ಮುತ್ಯೆದೆಯರು ವೃತ, ಉಪವಾಸದಲ್ಲಿ ಅತ್ಯಂತ ಶೃದ್ಧೆಯಿಂದ ದೇವಿಯಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಬೇಡಿಕೊಳ್ಳುತ್ತಾರೆ. ಆ ಒಂದು ಮಾಸ ಪೂರ್ತಿ ಅವರಿಗೆ ಹಬ್ಬದಂತೆ. ಇಂತಹ ಸಂದರ್ಭದಲ್ಲಿ ಈ ಮಹಿಳೆಯರನ್ನು ಭಕ್ತಿಯಿಂದ ಗೌರವಿಸುವ ಕಾರ್ಯವಾಗಬೇಕು ದೇವಾಲಯದಲ್ಲಿಯೂ ಅದೊಂದು ಹಬ್ಬವಾಗಬೇಕು ಎನ್ನುವ ಮಹತ್ ಉದ್ದೇಶದಿಂದ ಅಮ್ಮನಲ್ಲಿ ಅಭಯ ಪ್ರಸಾದ ಪಡೆದು ದೇವಾಲಯದಲ್ಲಿ ಶ್ರಾವಣ ಮಾಸದಂದು ವರಮಹಾಲಕ್ಷ್ಮೀ ಕಾರ್ಯಕ್ರಮವನ್ನು 2011ರಂದು ಪ್ರಾರಂಭಿಸಲಾಗುತ್ತದೆ. ಈ ದಿನ ನಸುಕಿನಿಂದಲೇ ದೇವಾಲಯಕ್ಕೆ ಮಹಿಳೆಯರ ಆಗಮನವಾಗುತ್ತದೆ. ಪ್ರತಿಯೊಬ್ಬ ಮಹಿಳೆಯು ಅತ್ಯಂತ ಭಕ್ತಿಪೂರ್ವಕವಾಗಿ ತನ್ನನ್ನು ತಾನೆ ತೊಡಗಿಸಿಕೊಳ್ಳುತ್ತಾಳೆ. ತನ್ನ ಮುತ್ಯೆದೆ ಭಾಗ್ಯ ಸದಾ ಹಸಿರಾಗಿರುವಂತೆ ತಾಯಿಯಲ್ಲಿ ಅನನ್ಯವಾಗಿ ಬೇಡಿಕೊಳ್ಳುತ್ತಾಳೆ. ಸರ್ವಾಲಂಕೃತ ಭೂಷಿತಳಾದ ದೇವಿಯು ಅತ್ಯಂತ ತೇಜಸ್ಸಿನಿಂದ ಭಕ್ತರನ್ನು ಹರಸುತ್ತಾಳೆ.
ನವಜಾತ ಶಿಶುವನ್ನು ದೇವಿಯ ಸನ್ನಿದಿಯಲ್ಲಿ ಕರೆತಂದು ಅಮ್ಮನವರ ಬೆಳ್ಳಿಯ ತೊಟ್ಟಿಲಿನಲ್ಲಿ ತೂಗಿ ನಾಮಕರಣ ಮಾಡುವ ಸೇವೆಯೇ ನಾಮಕರಣ ಮತ್ತು ತೊಟ್ಟಿಲ ಸೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ತೊಟ್ಟಿಲ ಸೇವೆ ನಡೆಯುವ ಏಕೈಕ ಕ್ಷೇತ್ರ ಅಳ್ವೆಕೋಡಿ ದುರ್ಗಾಪರಮೇಶ್ವರಿ ಕ್ಷೇತ್ರ ಎಂಬ ಹೆಗ್ಗಳಿಕೆ ಕ್ಷೇತ್ರದ್ದು. ಮದುವೆಯಾಗಿ ಅನೇಕ ವರ್ಷಗಳಾದರೂ ಮಕ್ಕಳಾಗದೆ ನೊಂದ ದಂಪತಿಗಳು ದೇವಿಯಲ್ಲಿ ಈ ಹರಕೆಯನ್ನು ಹೊರುತ್ತಾರೆ. ದೇವಿಯ ಅನುಗ್ರಹ ದೊರೆತು ಮಗುವನ್ನು ಪಡೆದ ಇವರು ತಾಯಿಯ ಪಾದದಲ್ಲಿ ಮಗುವನ್ನು ಕ್ಷೇತ್ರದ ಬೆಳ್ಳಿಯ ತೊಟ್ಟಿಲಲ್ಲಿಟ್ಟು ನಾಮಕರಣ ಮಾಡುತ್ತಾರೆ. ತಾಯಿ ಮತ್ತು ಮಗುವಿನ ಜೀವಿತಾವದಿಯ ಒಂದು ಮಧುರವಾದ ಆಪ್ತವಾದ ಮರೆಯಲಾಗದ ಗಳಿಗೆ ಇದು ಎನ್ನುವುದು ಅಂತಹ ಅದೆಷ್ಟೋ ತಾಯಿಯ ಅಂಬೋಣವಾಗಿದೆ.