ಸುಮಾರು ಮುನ್ನೂರು ವರ್ಷಗಳಿಗಿಂತಲೂ ಹಿಂದೆ ನಿರ್ಜನವಾದ ಕೆದಗೆ ಹಿಂಡಿನ ದಟ್ಟ ಪೊದೆಗಳಿಂದ ಆವೃತ್ತವಾದ ಕಡಲಂಚಿನ ಪ್ರದೇಶವೊಂದರಲ್ಲಿ ನಿತ್ಯ ಹಸುವೊಂದು ತಾನಾಗಿಯೇ ಹಾಲನೆರೆಯುವುದು ಕಂಡುಬರುತ್ತದೆ. ಪ್ರತಿ ನಿತ್ಯವು ಹಸುವು ಪೊದೆಯ ಹಿಂಡಿನಲ್ಲಿ ಹೋಗುವುದನ್ನು ಗಮನಿಸಿದ ಈ ಪರಿಸರದ ಹಿರಿಯರೊಬ್ಬರು ಹಸುವನ್ನು ಹಿಂಬಾಲಿಸುತ್ತಾರೆ. ಕೊನೆಗೂ ಅಲ್ಲಿ ಒಂದು ದೇವಿಯ ವಿಗ್ರಹವಿರುವುದು ಮತ್ತು ನಿತ್ಯವು ಆ ಹಸುವು ಅಲ್ಲಿನ ವಿಗೃಹಕ್ಕೆ ಹಾಲೆಯುವುದು ಗೋಚರವಾಗುತ್ತದೆ. ಇದರಿಂದ ಪ್ರೇರಣೆಗೊಂಡ ಊರ ಜನರು ಈ ದೇವರ ವಿಗೃಹಕ್ಕೆ ಚಿಕ್ಕ ಗುಡಿಯನ್ನು ಕಟ್ಟಿ ಪೂಜಿಸುವ ನಿರ್ಧಾರಕ್ಕೆ ಬರುತ್ತಾರೆ. ಎಲ್ಲರೂ ಒಂದಾಗಿ ಕೂಡಿಕೊಂಡು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಹಂಚಿನ ಮಾಡಿನ ಚಿಕ್ಕ ಗುಡಿಯನ್ನು ನಿರ್ಮಿಸುತ್ತಾರೆ. ಗೋಳಿಕೇರಿ ಎನ್ನುವ ಹವ್ಯಕ ಬ್ರಾಹ್ಮಣ ಕುಟುಂಬದವರನ್ನು ಅರ್ಚಕರನ್ನಾಗಿ ನೇಮಿಸಿ,...