Sri Ananthapadmanabha Temple, Perdoor, Udupi, Udupi District [TM000162]
×
Temple History
ಇತಿಹಾಸ
ಬಾಳೆಹಣ್ಣಿನ ಸೇವೆ ವಿಶಿಷ್ಟವಾದದ್ದಾಗಿದೆ. ಇದಕ್ಕೆ ಒಂದು ಇತಿಹಾಸವೂ ಇದೆ. ಕೃಷ್ಣ ಶರ್ಮನೆಂಬ ಬ್ರಾಹ್ಮಣನು ದೇವರ ವಿಗ್ರಹ ಕೆತ್ತಿಸುವ ಸಲುವಾಗಿ ಅದಕ್ಕೆ ತಕ್ಕುದಾದ ಶಿಲೆಯನ್ನು ಶಿಷ್ಯರ ಸಹಾಯದಿಂದ ತರುತ್ತಿರುವಾಗ ಅದೇ ದಾರಿಯಲ್ಲಿ ಬಾಳೆಹಣ್ಣುಗಳನ್ನು ಮಾರಲು ವೈಷ್ಯನೊಬ್ಬ ವೇಗವಾಗಿ ಇವರನ್ನು ದಾಟಿ ಮುಂದೆ ನಡೆಯುತ್ತಾನೆ. ಆದರೆ ಹಣ್ಣಿನ ಬಾರ ಇದ್ದಕ್ಕಿದ್ದಂತೆ ಹೆಚ್ಚಾಗಿ ಆತ ಅಲ್ಲೇ ಕುಸಿದುಬೀಳುತ್ತಾನೆ. ಇದಕ್ಕೆ ಕಾರಣವೇನೆಂದು ಕೃಷ್ಣ ಶರ್ಮರನ್ನು ಕೇಳಿದಾಗ ಅದು ಶಿಲೆಯ ಮಹತ್ವವೇ ಇರಬೇಕೆಂದು ಹೇಳಿ ಅಷ್ಟು ಬಾಳೆಹಣ್ಣನ್ನು ಶಿಲೆಗೆ ಸಮರ್ಪಣೆ ಮಾಡಿ ನಮಸ್ಕರಿಸುವಂತೆ ತಿಳಿಸುತ್ತಾನೆ. ವೈಷ್ಯನು ಅದೇ ರೀತಿ ಮಾಡುತ್ತಾನೆ. ಹೀಗೆ ವಿಗ್ರಹವಾಗಿ ರೂಪಗೊಳ್ಳುವುದಕ್ಕೆ ಮೊದಲೇ ಶಿಲೆ ತನ್ನ ಪ್ರಭಾವವನ್ನು ಹಣ್ಣು ಸ್ವೀಕರಿಸುವ ಮೂಲಕ ಪ್ರಕಟಪಡಿಸಿರುವುದರಿಂದ ಈ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳಿಗಿಂತ ಬಾಳೆಹಣ್ಣು ಸಮರ್ಪಣಾ ಸೇವೆಯು ಪ್ರಾಧಾನ್ಯ ಪಡೆದಿದೆ.ಬಾಳೆಹಣ್ಣಿನ ಸೇವೆ ವಿಶಿಷ್ಟವಾದದ್ದಾಗಿದೆ. ಇದಕ್ಕೆ ಒಂದು ಇತಿಹಾಸವೂ ಇದೆ. ಕೃಷ್ಣ ಶರ್ಮನೆಂಬ ಬ್ರಾಹ್ಮಣನು ದೇವರ ವಿಗ್ರಹ ಕೆತ್ತಿಸುವ ಸಲುವಾಗಿ ಅದಕ್ಕೆ ತಕ್ಕುದಾದ ಶಿಲೆಯನ್ನು ಶಿಷ್ಯರ ಸಹಾಯದಿಂದ ತರುತ್ತಿರುವಾಗ ಅದೇ ದಾರಿಯಲ್ಲಿ ಬಾಳೆಹಣ್ಣುಗಳನ್ನು ಮಾರಲು ವೈಷ್ಯನೊಬ್ಬ ವೇಗವಾಗಿ ಇವರನ್ನು ದಾಟಿ ಮುಂದೆ ನಡೆಯುತ್ತಾನೆ. ಆದರೆ ಹಣ್ಣಿನ ಬಾರ ಇದ್ದಕ್ಕಿದ್ದಂತೆ ಹೆಚ್ಚಾಗಿ ಆತ ಅಲ್ಲೇ ಕುಸಿದುಬೀಳುತ್ತಾನೆ. ಇದಕ್ಕೆ ಕಾರಣವೇನೆಂದು ಕೃಷ್ಣ ಶರ್ಮರನ್ನು ಕೇಳಿದಾಗ ಅದು ಶಿಲೆಯ ಮಹತ್ವವೇ ಇರಬೇಕೆಂದು ಹೇಳಿ ಅಷ್ಟು ಬಾಳೆಹಣ್ಣನ್ನು ಶಿಲೆಗೆ ಸಮರ್ಪಣೆ ಮಾಡಿ ನಮಸ್ಕರಿಸುವಂತೆ ತಿಳಿಸುತ್ತಾನೆ. ವೈಷ್ಯನು ಅದೇ ರೀತಿ ಮಾಡುತ್ತಾನೆ. ಹೀಗೆ ವಿಗ್ರಹವಾಗಿ ರೂಪಗೊಳ್ಳುವುದಕ್ಕೆ ಮೊದಲೇ ಶಿಲೆ ತನ್ನ ಪ್ರಭಾವವನ್ನು ಹಣ್ಣು ಸ್ವೀಕರಿಸುವ ಮೂಲಕ ಪ್ರಕಟಪಡಿಸಿರುವುದರಿಂದ ಈ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳಿಗಿಂತ ಬಾಳೆಹಣ್ಣು ಸಮರ್ಪಣಾ ಸೇವೆಯು ಪ್ರಾಧಾನ್ಯ ಪಡೆದಿದೆ.
ಸ್ಥಳ ಪುರಾಣ
ಶ್ರೀ ಅನಂತಪದ್ಮನಾಭ ದೇವಸ್ಥಾನ ಪೆರ್ಡೂರು ಈ ದೇವಸ್ಥಾನವು 11ನೇ ಶತಮಾನದ್ದಾಗಿದ್ದು, ಸುಮಾರು 800 ವರ್ಷ ಪುರಾತನವಾದದ್ದಾಗಿದೆ. ಶ್ರೀ ದೇವಳವು ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ನಗರದ ವಿಶಾಲವಾದ ರಥಬೀದಿ ಮಧ್ಯದಲ್ಲಿ ಇದೆ.
ಶ್ರೀ ದೇವರಿಗೆ ಬಾಳೆಹಣ್ಣು ಸಮರ್ಪಣೆ ಎಲ್ಲಾ ಸೇವೆಗಳಿಗಿಂತ ಹೆಚ್ಚಿನ ಪ್ರಾಧಾನ್ಯವುಳ್ಳದ್ದಾಗಿದೆ ಏಂಬುದಕ್ಕೆ ಒಂದು ಐತಿಹ್ಯವಿದೆ. ಕೃಷ್ಣ ಶರ್ಮಾ ಎಂಬ ಬ್ರಾಹ್ಮಣ ನಿತ್ಯವೂ ಉಡುಪಿಯ ಅನಂತೇಶ್ವರ ದೇವರ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದನಂತೆ, ಮುಪ್ಪಿನ ಕಾಲದಲ್ಲಿ ಕಷ್ಟವಾದಾಗ, ಒಂದು ದಿನ ದೇವರು ಕನಸಿನಲ್ಲಿ ಬಂದು ಸೂಚನೆಯನ್ನು ಕೊಡುತ್ತಾನೆ. ʼಸಾಕ್ಷಾತ್ ಭಗವಂತನೇ ಆಜ್ಞೆಯನ್ನು ಮಾಡುತ್ತ, ತನ್ನ ವಿಗ್ರಹವನ್ನು ಪ್ರತಿಷ್ಠೆ ಮಾಡಲು ಸೂಚನೆಯನ್ನು ಕೊಟ್ಟʼ ಎಂದು ನಿದ್ರೆಯಿಎಂದ ಎದ್ದ ವಿಪ್ರನು ಭಗವಂತನನ್ನು ನೆನೆಯುತ್ತಾ ಕೃತಾರ್ಥನಾದೆ ಸ್ವಾಮಿ ಎಂದ. ಹೀಗೆ ಕನಸಿನ...ಶ್ರೀ ಅನಂತಪದ್ಮನಾಭ ದೇವಸ್ಥಾನ ಪೆರ್ಡೂರು ಈ ದೇವಸ್ಥಾನವು 11ನೇ ಶತಮಾನದ್ದಾಗಿದ್ದು, ಸುಮಾರು 800 ವರ್ಷ ಪುರಾತನವಾದದ್ದಾಗಿದೆ. ಶ್ರೀ ದೇವಳವು ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ನಗರದ ವಿಶಾಲವಾದ ರಥಬೀದಿ ಮಧ್ಯದಲ್ಲಿ ಇದೆ.
ಶ್ರೀ ದೇವರಿಗೆ ಬಾಳೆಹಣ್ಣು ಸಮರ್ಪಣೆ ಎಲ್ಲಾ ಸೇವೆಗಳಿಗಿಂತ ಹೆಚ್ಚಿನ ಪ್ರಾಧಾನ್ಯವುಳ್ಳದ್ದಾಗಿದೆ ಏಂಬುದಕ್ಕೆ ಒಂದು ಐತಿಹ್ಯವಿದೆ. ಕೃಷ್ಣ ಶರ್ಮಾ ಎಂಬ ಬ್ರಾಹ್ಮಣ ನಿತ್ಯವೂ ಉಡುಪಿಯ ಅನಂತೇಶ್ವರ ದೇವರ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದನಂತೆ, ಮುಪ್ಪಿನ ಕಾಲದಲ್ಲಿ ಕಷ್ಟವಾದಾಗ, ಒಂದು ದಿನ ದೇವರು ಕನಸಿನಲ್ಲಿ ಬಂದು ಸೂಚನೆಯನ್ನು ಕೊಡುತ್ತಾನೆ. ʼಸಾಕ್ಷಾತ್ ಭಗವಂತನೇ ಆಜ್ಞೆಯನ್ನು ಮಾಡುತ್ತ, ತನ್ನ ವಿಗ್ರಹವನ್ನು ಪ್ರತಿಷ್ಠೆ ಮಾಡಲು ಸೂಚನೆಯನ್ನು ಕೊಟ್ಟʼ ಎಂದು ನಿದ್ರೆಯಿಎಂದ ಎದ್ದ ವಿಪ್ರನು ಭಗವಂತನನ್ನು ನೆನೆಯುತ್ತಾ ಕೃತಾರ್ಥನಾದೆ ಸ್ವಾಮಿ ಎಂದ. ಹೀಗೆ ಕನಸಿನ ವಿಷಯವನ್ನು ತನ್ನ ಶಿಷ್ಯರಿಗೆ ತಿಳಿಸಿದ ವಿಪ್ರನು, ವಾಣಿಯ ದಾರಿಯಲ್ಲಿ ನಡೆದು ಹೋಗಿ ಸ್ವಾಮಿಯ ಶಿಲೆಯನ್ನು ಗುರುತಿಸುತ್ತಾನೆ. ಅದನ್ನು ಶಿಷ್ಯರ ಸಹಾಯದಿಂದ ಹೊತ್ತು ತರುವಾಗ, ಎಲ್ಲರಿಗೂ ಹಸಿವಾಗುತ್ತದೆ. ಅದೇ ಸಮಯಕ್ಕೆ ಅವರ ಎದುರು ಒಬ್ಬ ಬಾಳೆಹಣ್ಣಿನ ವ್ಯಾಪಾರಿ ಸಾಗುತ್ತಾನೆ. ಅವನನ್ನು ನಿಲ್ಲಿಸಿದ ವಿಪ್ರನು ಬಾಳೆಹಣ್ಣನ್ನು ಯಾಚಿಸುತ್ತಾನೆ. ಆದರೆ ವ್ಯಾಪಾರಿಯು ಇದು ನಾನು ಸಂತೆಗೆ ವ್ಯಾಪಾರಕ್ಕೆ ಕೊಂಡೊಯ್ಯುತ್ತಿರುವುದಾಗಿ ತಿಳಿಸಿ ಮುಂದಕ್ಕೆ ಸಾಗುತ್ತಾನೆ. ಆದರೆ ತಕ್ಷಣದಲ್ಲಿ ಕದಳಿ ಬುಟ್ಟಿಯು ಭಾರವಾಗಿ ವ್ಯಾಪಾರಿಯು ಅಲ್ಲೇ ಕುಸಿಯುತ್ತಾನೆ. ವ್ಯಾಪಾರಿಗೆ ತನ್ನ ತಪ್ಪಿನ ಅರಿವಾಗಿ, ಹಾಗೆಯೇ ವಿಪ್ರನ ಆಜ್ಞೆಯಂತೆ ಬಾಳೆಹಣ್ಣನ್ನು ಶಿಲೆಗೆ ನೈವೇದ್ಯ ಮಾಡಿ ಎಲ್ಲರೂ ಸ್ವೀಕರಿಸುತ್ತಾರೆ. ಹಾಗಾಗಿ ಶಿಲಾ ರೂಪದಲ್ಲಿದ್ದಾಗಲೇ ಅದರ ಶಕ್ತಿಯನ್ನು ತೋರಿದ್ದರಿಂದ ಕದಳಿಪ್ರಿಯ ಎಂಬ ಹೆಸರು ದೇವರಿಗೆ ಬರುತ್ತದೆ. ದೇವರಿಗೆ ಭಕ್ತಾದಿಗಳು ತಮ್ಮ ಮನೋಭೀಷ್ಟ ನೆರವೇರಿದ್ದಕ್ಕಾಗಿ 1000 ಬಾಳೆಹಣ್ಣು, 500, 365, ಗೊನೆಹಣ್ಣು/ಸಿಬ್ಲೆ ಹಣ್ಣು ಈ ರೀತಿಯಾಗಿ ಬಾಳೆಹಣ್ಣನ್ನು ಸಮರ್ಪಣೆ ಮಾಡುತ್ತಾರೆ.
ಪೆರ್ಡೂರು` ಈ ಹೆಸರು ಸ್ಥಳಕ್ಕೆ ಬರಲು ಕಾರಣವೇನೆಂದರೆ, ಒಬ್ಬ ದನ ಮೇಯಿಸುವ ಗೊಲ್ಲನಿದ್ದ. ಅವನು ತನ್ನ ದನಗಳನ್ನು ದಿನವೂ ಕಾಡಿಗೆ ಮೇಯಿಸಲು ಕರೆದುಕೊಂಡು ಹೋಗುತ್ತಿದ್ದ. ದನದ ಹಿಂಡಲ್ಲಿ ಒಂದು ದನ ಮಾತ್ರ ಗೊಲ್ಲನಿಗೆ ದಿನವೂ ಹಾಲು ಕೊಡುತ್ತಿರಲಿಲ್ಲ. ಇದರಿಂದ ಚಿಂತೆಗೀಡಾದ ಗೊಲ್ಲನು, ಮಾರನೆಯ ದಿನ ಮೇವಿಗೆ ದನದ ಹಿಂಡನ್ನು ಕಾಡಿಗೆ ಬಿಟ್ಟಾಗ ಆ ಹಸುವನ್ನೇ ಹಿಂಬಾಲಿಸಿದ. ಅದು ಹಿಂಡಿಂದ ಸರಿದು ದೂರ ನಡೆಯಿತು. ಒಂದು ಹುತ್ತಕ್ಕೆ ಹಾಲೆರೆಯುತ್ತ ನಿಂತುಕೊಂಡಿತು. ಅಲ್ಲೇ ಪಕ್ಕದಲ್ಲಿ ಹುಲಿಯೊಂದು ಕುಳಿತಿದ್ದರೂ ಆ ದನಕ್ಕೆ ಏನೂ ಮಾಡುತ್ತಿರಲಿಲ್ಲ. ಈ ವಿಚಿತ್ರ ಸನ್ನಿವೇಶವನ್ನು ನೋಡಿದ ಗೊಲ್ಲನು ಪೇರುಂಡು ಎಂದು ಉದ್ಗರಿಸಿದ. `ಪೇರು` ಎಂಬುದು ತುಳು ಬಾಷೆ ಆಗಿದ್ದು, ಹಾಗಂದರೆ ಹಾಲು ಎಂದು ಕನ್ನಡದಲ್ಲಿ ತಾತ್ಪರ್ಯವಾಗುತ್ತದೆ. `ಉಂಡು` ಎಂದರೆ ʼಇದೆʼ ಎಂದರ್ಥ. ʼಹಾಲು ಇದೆʼ ಎಂದಾಗುತ್ತದೆ. ಆ ಹುತ್ತ ಇರುವ ಜಾಗದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರಿಂದ, ಆ ಸ್ಥಳವನ್ನು ಪೇರುಂಡ ಊರು ಎಂದು ಕರೆಯಲಾಯಿತು. ಕಾಲಾಂತರದಲ್ಲಿ ಇದು ಪೆರ್ಡೂರು ಆಯಿತು. ಮೂಲ ವಿಗ್ರಹ ಲಕ್ಷ್ಮೀ ಜನಾರ್ಧನ ವಿಗ್ರಹದಂತೆ ಕಂಡರೂ, ವಿಗ್ರಹದ ಪ್ರಭಾವಳಿಯಲ್ಲಿರುವ ಐದು ಹೆಡೆಯ ನಾಗನಿಂದಲೋ ಅಥವಾ ಹುತ್ತದ ಮೇಲೆ ಪ್ರತಿಷ್ಠಾಪಿಸಿದ್ದರಿಂದಲೋ ಶ್ರೀ ದೇವರಿಗೆ ಲಕ್ಷ್ಮೀ ಅನಂತ ಪದ್ಮನಾಭ ಎಂದು ಕರೆಯಲಾಯಿತು. ಹೆಬ್ಬಾಗಿಲಿನ ಪ್ರವೇಶ ದ್ವಾರದ ಮೇಲೆ 1986ರಲ್ಲಿ ಚಿತ್ರಿಸಿದ ಹಸುವೊಂದು ಹುತ್ತಕ್ಕೆ ಹಾಲು ಎರೆಯುವ ಮತ್ತು ಅಲ್ಲೇ ಹುಲಿಯೊಂದು ಕುಳಿತಿರುವಂತೆ ಚಿತ್ರಿಸಿದ ಕಲಾಕೃತಿ ಇಂದಿಗೂ ನೋಡಸಿಗುತ್ತದೆ.
ವಾರ್ಷಿಕೋತ್ಸವ, ಪ್ರತಿ ತಿಂಗಳ ಸಂಕ್ರಮಣ ಪೂಜೆ, ರಾಮ ನವಮಿ, ನಾಗರಪಂಚಮಿ, ಗಣೇಶ ಚೌತಿ, ಸಿಂಹ ಮಾಸದಲ್ಲಿ ಸೋಣಾರತಿ, ವಿಶೇಷವಾದ ಸಿಂಹ ಸಂಕ್ರಮಣ ಆಚರಣೆ, ಕೃಷ್ಣಾಷ್ಠಮಿ, ವಿಜಯದಶಮಿಯಿಂದ ಉತ್ಥಾನ ದ್ವಾದಶಿವರೆಗೆ ಪಶ್ಚಿಮ ಜಾಗರ ಪೂಜೆ, ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ, ದೀಪೋತ್ಸವ, ಸುಬ್ರಹ್ಮಣ್ಯ ಷಷ್ಠಿ, ಧನುರ್ಮಾಸ ಪೂಜೆ, ಮಕರ ಸಂಕ್ರಮಣ, ಶಿವರಾತ್ರಿ, ಯುಗಾದಿ ಇತ್ಯಾದಿ ವಿಶೇಷ ಆಚರಣೆಗಳು ಅಥವಾ ಪೂಜೆಗಳು ವರ್ಷಂಪ್ರತಿ ನಡೆಯುತ್ತವೆ.
ಬೆಳಗ್ಗಿನ ಪಂಚಾಮೃತ ಅಭಿಷೇಕ ಪೂಜೆ-ಇದರ ಸೇವೆಯಿಂದ ಆರೋಗ್ಯ ಪ್ರಾಪ್ತಿ. “ಅಲಂಕಾರ ಪ್ರಿಯೋ ವಿಷ್ಣುಃ” ಎನ್ನುವ ಹಾಗೆ ದೇವರ ಹೂವಿನ ಪೂಜೆ ಸೇವೆಯಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ. ತುಲಾಭಾರ ಸೇವೆಯಿಂದ ದ್ರವ್ಯ ಸಮರ್ಪಣೆ ಮಾಡುವುದು, ಜನಪ್ರಿಯವಾದ ಪೆರ್ಡೂರು ಮೇಳದ ಯಕ್ಷಗಾನ ಸೇವೆಯು ಹಾಗೂ ದೊಡ್ಡ ರಂಗಪೂಜೆಯು ಉತ್ಸವದಂತೆ ನಡೆಯುವ ಒಂದು ದೊಡ್ಡ ಸೇವೆಯಾಗಿರುತ್ತದೆ.
ಸೂರಾಲು ಅರಸರಾದ ಬಸವಣ್ಣರಸರ ರಾಜ್ಯದೊಳಗಿದ್ದ ಸೀಮೆಯಾದ ಕಾರಣ ಭಕ್ತಾದಿಗಳ ಹಿತದೃಷ್ಠಿಯಿಂದ ಈ ದೇವಳಕ್ಕೆ ಅವರು ಭೂದಾನ ಕೊಟ್ಟರು ಹಾಗೂ ಈ ಕಾರಣದಿಂದ ದೇವಸ್ಥಾನವು ಅಭಿವೃದ್ಧಿ ಹೊಂದಿತು ಎಂಬ ಬಗ್ಗೆ ಉಲ್ಲೇಖವಿದೆ. ವರ್ಷಾವಧಿ ರಥೋತ್ಸವ ಸಮಯದಲ್ಲಿ ತೊಳಹ ಅರಸರು ಏಳು ದಿನಗಳ ಕಾಲ ಇಲ್ಲಿ ಬೀಡು ಬಿಡುತ್ತಿದ್ದರು. ಇದರ ಕುರುಹಾಗಿ ದೇವಾಲಯದ ಉತ್ತರ ಭಾಗದಲ್ಲಿ ಪದ್ಮ ಸರೋವರದ ಪಕ್ಕ ʼಅರಸರ ಚಾವಡಿʼ ಇರುವುದನ್ನು ಕಾಣಬಹುದು. ಇದನ್ನು ʼಬಣ್ಣದ ಚಾವಡಿʼ ಎಂದು ಕರೆಯುತ್ತಿದ್ದರಂತೆ. ಕಾರಣ ಇದು ಒಳ್ಳೆಯ ಬಣ್ಣದ ಚಿತ್ರಗಳಿಂದ ಶೋಭಿಸುತ್ತಿತ್ತಂತೆ. ಈಗ ಅವುಗಳ ಕುರುಹು ಇಲ್ಲದಂತಾಗಿದೆ.
ಶ್ರೀ ದೇವರಿಗೆ ಬಾಳೆಹಣ್ಣು ಸಮರ್ಪಣೆ ಎಲ್ಲಾ ಸೇವೆಗಳಿಗಿಂತ ಹೆಚ್ಚಿನ ಪ್ರಾಧಾನ್ಯವುಳ್ಳದ್ದಾಗಿದ್ದು, ಈ ಹರಕೆ ಯಿಂದ ಅವಿವಾಹಿತರಿಗೆ ವಿವಾಹ ಭಾಗ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ರೋಗದಿಂದ ಬಳಲುತ್ತಿರುವವರಿಗೆ ಆರೋಗ್ಯ, ಸಂತಾನ ಭಾಗ್ಯ ಹೀಗೆ ಹತ್ತು ಹಲವು ಫಲಗಳು ದೊರೆಯುತ್ತವೆ. ಇಲ್ಲಿ ಸಿಂಹ ಸಂಕ್ರಮಣವನ್ನು ಮಧು ಮಕ್ಕಳ ಸಂಕ್ರಮಣವೆಂದೇ ಕರೆಯುತ್ತಾರೆ. ಆ ದಿನ ನವ ವಿವಾಹಿತ ವಧು ವರರು ಬಂದು ದೇವರ ದರ್ಶನ ಮಾಡಿ ಬಾಳೆಹಣ್ಣು ಸಮರ್ಪಣೆ ಮಾಡುತ್ತಾರೆ. ಅಂತೆಯೇ, ಕೆಡು ರೋಗಕ್ಕೆ ಕುಡು(ಹುರಳಿ) ಕೊಡುವುದು, ಉಬ್ಬಸ ರೋಗಕ್ಕೆ ಬಾವಿಯ ಹುರಿ ಹಗ್ಗ ಕೊಡುವುದು, ಮಕ್ಕಳು ಮಣ್ಣು ತಿನ್ನುವುದನ್ನು ಬಿಡಲು ಬೆಲ್ಲ ಕೊಡುವುದು, ಬೆಳ್ಳಿಯ ಸರಿಗೆ, ಆಣೆ, ಮನುಷ್ಯ ಇವುಗಳನ್ನು ಹುಂಡಿಗೆ ಹಾಕುವುದು ಮತ್ತು ಚಿಕ್ಕ ಮಕ್ಕಳ ಅನಾರೋಗ್ಯದ ಸಂದರ್ಭದಲ್ಲಿ ʼಕಂಚಿಲ ಸೇವೆʼ(ಉತ್ಸವದಲ್ಲಿ ಮಾತ್ರ ನಡೆಯುವ) ಹರಕೆ ಹೇಳಿಕೊಳ್ಳುವುದು ಇಲ್ಲಿನ ಸೇವಾ ವಿಶೇಷತೆಯಾಗಿರುತ್ತದೆ. ದೇವಾಲಯದಲ್ಲಿ ಸುಂದರವಾದ ಪದ್ಮ ಸರೋವರ(ಪುಷ್ಕರಣಿ)ವಿದ್ದು, ಈ ಸರೋವರದ ಮೀನುಗಳಿಗೆ ಕೆಡು ರೋಗಕ್ಕೆ ಹರಕೆ ತಂದಿರುವ ಕುಡು(ಹುರಳಿ)ವನ್ನು ಸ್ವಲ್ಪ ಹಾಕುವ ಸಂಪ್ರದಾಯವಿರುತ್ತದೆ. ಶ್ರೀ ದೇವರ ತೀರ್ಥ, ಮೂಲ ಗಂಧವನ್ನು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ ಮತ್ತು ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ದೇವರನ್ನು ಕಾಯುವ ಪರಿವಾರ ದೈವ ʼಖಡ್ಗ ರಾವಣʼ ದೈವಕ್ಕೆ ಸಂಕ್ರಮಣ ವಿಶೇಷ ಪೂಜೆ ಸೇವೆ ಕೊಡುವುದರಿಂದ ಮಾಟ-ಮಂತ್ರದಂತ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಈ ದೇವಸ್ಥಾನದಲ್ಲಿ ಬೊಬ್ಬರ್ಯ, ಪಂಜುರ್ಲಿ ದೈವಸ್ಥಾನಗಳೂ ಇದ್ದಿರುತ್ತದೆ.
ಸಾಹಿತ್ಯದ ಹಿನ್ನೆಲೆ
ಪೆರುಂಡ ಊರ ಪದ್ಮನಾಭನ ಮಹಿಮೆಯನು
ಕೇಳಿರಯ್ಯ ಕೇಳಿರಯ್ಯ
ಕದಳಿಪ್ರಿಯನ ಕ್ಷೇತ್ರದ ಹಿರಿಮೆಯನು
ಪೊಗಳಿರಯ್ಯ ಪೊಗಳಿರಯ್ಯ |ಪ||
ಶಯನಸ್ಥ ವಿಪ್ರಂಗೆ ಬಿತ್ತೊಂದು ಕನಸು
ಸುಶಬ್ಧ ವಾಣಿಂದೆ ಮಾಡಂತು ನನಸು
ಕರ ಮುಗಿದು ನೆನೆದ ಆ ಕೃಷ್ಣ ಶರ್ಮಾ
ಸಾರ್ಥಕವು ಎಂದೆಂದ ಈ ನನ್ನ ಜನ್ಮ. ||1||
ಸ್ವಪ್ನದಲ್ಕಂಡಂತ ವಿಷಯವನ್ನರುಹಿ
ಶಿಷ್ಯರನ್ನೊಡಗೂಡಿ ವಿಗ್ರಹಕೆ ಅರಸಿ
ವಾಣಿಯಂದಾರಿಯಲಿ ಶಿಲೆಯೊಂದು ಸಿಗಲು
ಭಕ್ತಿಯಿಂದ್ ಬಂದವರು ಕೊಟ್ಟರು ಹೆಗಲು. ...ಪೆರುಂಡ ಊರ ಪದ್ಮನಾಭನ ಮಹಿಮೆಯನು
ಕೇಳಿರಯ್ಯ ಕೇಳಿರಯ್ಯ
ಕದಳಿಪ್ರಿಯನ ಕ್ಷೇತ್ರದ ಹಿರಿಮೆಯನು
ಪೊಗಳಿರಯ್ಯ ಪೊಗಳಿರಯ್ಯ |ಪ||
ಶಯನಸ್ಥ ವಿಪ್ರಂಗೆ ಬಿತ್ತೊಂದು ಕನಸು
ಸುಶಬ್ಧ ವಾಣಿಂದೆ ಮಾಡಂತು ನನಸು
ಕರ ಮುಗಿದು ನೆನೆದ ಆ ಕೃಷ್ಣ ಶರ್ಮಾ
ಸಾರ್ಥಕವು ಎಂದೆಂದ ಈ ನನ್ನ ಜನ್ಮ. ||1||
ಸ್ವಪ್ನದಲ್ಕಂಡಂತ ವಿಷಯವನ್ನರುಹಿ
ಶಿಷ್ಯರನ್ನೊಡಗೂಡಿ ವಿಗ್ರಹಕೆ ಅರಸಿ
ವಾಣಿಯಂದಾರಿಯಲಿ ಶಿಲೆಯೊಂದು ಸಿಗಲು
ಭಕ್ತಿಯಿಂದ್ ಬಂದವರು ಕೊಟ್ಟರು ಹೆಗಲು. ||2||
ಹೆಗಲಲ್ಲಿ ಶಿಲೆ ಹೊತ್ತು ದಡಬಡಿಸಿ ನಡೆದು
ಬರುವಲ್ಲಿ ಪಥ ಮಧ್ಯೆ ಶಿಷ್ಯಂದಿರೆದುರು
ದರ್ಪದೊಳು ಕದಳಿಯ ವ್ಯಾಪಾರಿ ಸಾಗಿ
ಭಾರವನು ಬರಿಸದೆ ಕುಸಿದನು ಕೂಗಿ. ||4||
ಶಿಲೆ ಹೊತ್ತ ಶಿಷ್ಯರು ಹಸಿವಲ್ಲಿ ಬಳಲಿ
ಕೇಳಲು ಕೊಡದಿರಲು ವ್ಯಾಪಾರಿ ಕದಳಿ
ಬಾರದಲಿ ಕುಸಿದಿದ್ದ ಕಾರಣವ ಅರಿತು
ಕ್ಷಮೆ ಕೋರಿ ಕೈಮುಗಿದ ಶಿಷ್ಯರನು ಕುರಿತು ||5||
ಶಿಲೆ ಶಕ್ತಿ ಅರಿತಂತ ವಿಪ್ರ ಉತ್ತಮನು
ಆಜ್ಞೆಯಂತಂದಿಟ್ಟ ಕದಳಿ ಗುಚ್ಚವನು
ನೈವೇದ್ಯವಿತ್ತರು ಸ್ವಾಮಿಯ ಶಿಲೆಗೆ
ಹರಿ ಓಂ ಎಂದರು ಕದಳಿಯ ಪ್ರಿಯಗೆ. ||6||
ಹಸುವೊಂದು ಅನುದಿನವು ಹಿಂಡಿಂದ ಸರಿದು
ಹುತ್ತಕ್ಕೆ ಕಪಿಲೆಯು ಹಾಲನ್ನು ಎರೆದು
ಬರುತಿರಲು ಮನೆಗೆ ಕಾದಿಪ್ಪ ಒಡೆಯ
ಚಿಂತಿಸಿದ ಹಾಲಿರದೆ ಹಿಂಡುತ್ತ ಮೊಲೆಯ. ||7||
ಮರುದಿನವು ಒಡೆಯ ಹಿಂಡನ್ನು ಕಳಿಸಿ
ಹಿಂದೆಯಲಿ ನಡೆದ ಹಸುವನ್ನು ಬಳಸಿ
ಹುಲಿಯಪ್ಪನೆದುರು ಹಾಲ್ ಹರಿಸಿ ನಿಂದ
ಹಸುವನ್ನು ಕಂಡು ಪೇರುಂಡು ಎಂದ. ||8||
ಇಂತಿದ್ದ ಒಬ್ಬ ಸೂರಾಲು ಅರಸ
ಆಳುತ್ತಲಿರಳು ಊರೆಲ್ಲ ಹರುಷ
ಬಸವಣ್ಣರಸನು ಭೂದಾನಗೈದ
ಪೆರಡೂರು ಸಿರಿಯನ್ನು ಶಿಖರಕ್ಕೆ ವೈದ ||9||
ಸ್ವಾಮಿಯ ಮಹಿಮೆಯನು ಅನುಡಿನವು ಪಾಡಿ
ಪಾಡುತ ಭಕ್ತಿಯಲಿ ಪೂಜೆಯನು ಮಾಡಿ
ಕಳೆಯುವುದು ಕೋಟಿ ಕೃತ ಜನ್ಮ ಪಾಪ
ಬೆಳಗುವುದು ಜ್ಞಾನ ಚಿರ ಭಕ್ತಿ ದೀಪ. ||10||
ಸಾಹಿತ್ಯ : ತಿರುಮಲೇಶ್ವರ ಹೆಗಡೆ