ಶ್ರೀ ದಂಡಿನ ಮಾರಮ್ಮ ದೇವಸ್ಥಾನ, ಮೇಕೆಬಂಡೆ, ತುಮಕೂರು - 572132, ತುಮಕೂರು .
Sri Dandina Maramma Temple, Mekebande, Tumakuru - 572132, Tumakuru District [TM000169]
×
Temple History
ಇತಿಹಾಸ
ಮಧುಗಿರಿ ಶ್ರೀ ದಂಡಿನಮಾಮ್ಮನ ದೇವಸ್ಥಾನವು 16 ನೇ ಶತಮಾನಕ್ಕೆ ಸೇರಿದ್ದು, ಈಗ ಸುಮಾರು 500 ವರ್ಷಗಳಷ್ಟು ಹಳೆಯದಾಗಿದೆ. ಮದ್ದಗಿರಿ ಅಂದರೆ ಈಗಿನ ಮಧುಗಿರಿಯಲ್ಲಿ ಸಿದ್ದನಾಯಕನೆಂಬ ಪಾಳೆಗಾರನಿದ್ದು ಮಧುಗಿರಿ ಕೋಟೆಯನ್ನು ರಕ್ಷಿಸುವಲ್ಲಿ ಆತನದ್ದು ಫ್ರಧಾನ ಪಾತ್ರ. ಒಮ್ಮೆ ಮ್ಯಸೂರಿನಲ್ಲಿ ಕಧನ ಪ್ರಾರಂಭವಾದಾಗ ಮೈಸೂರಿನ ಅರಸರು ಸೈನ್ಯವನ್ನು ತೆಗೆದುಕೊಂಡು ಬರುವಂತೆ ಸಿದ್ದನಾಯಕನಿಗೆ ಆದೇಶ ಕಳುಹಿಸಿದರು. ಅರಸರ ಆದೇಶವನ್ನು ಮನ್ನಿಸಿ ಅದರಂತೆ ಸಿದ್ದನಾಯಕನು ತನ್ನ ಸೈನ್ಯವನ್ನು ತೆಗೆದುಕೊಂಡು ಮೈಸೂರು ಅರಸರ ನೆರವಿಗೆ ಹೋದನು. ಕದನದ ಮೊದಲನೆ ದಿನವು ಇವರಿಗೆ ಸೋಲುಂಟಾಯಿತು. ಸೋಲನ್ನೆ ಕಂಡರಿಯದ ಸಾಹಸಿ ಸಿದ್ದನಾಯಕನಿಗೆ ಇದರಿಂದ ಬಾರಿ ನೋವುಂಟಾಯಿತು. ಅದನ್ನೇ ಚಿಂತಿಸುತ್ತಾ ಅಂದು ರಾತ್ರಿ ಸಿದ್ದನಾಯಕನು ಬಿಡಾರದಲ್ಲಿ ಮಲಗಿರಲು ಸಿದ್ದನಾಯಕನಿಗೆ ಕನಸಿನಲ್ಲಿ ಒಂದು ಅಗೋಚರ ಶಕ್ತಿ ಗೋಚರಿಸಿತು. ಸ್ವಪ್ನದಲ್ಲಿ ಅಶರೀರ ವಾಣಿ ಕೇಳಿಸಿತು “ನೀನು ಎದೆಗುಂದದೆ...ಮಧುಗಿರಿ ಶ್ರೀ ದಂಡಿನಮಾಮ್ಮನ ದೇವಸ್ಥಾನವು 16 ನೇ ಶತಮಾನಕ್ಕೆ ಸೇರಿದ್ದು, ಈಗ ಸುಮಾರು 500 ವರ್ಷಗಳಷ್ಟು ಹಳೆಯದಾಗಿದೆ. ಮದ್ದಗಿರಿ ಅಂದರೆ ಈಗಿನ ಮಧುಗಿರಿಯಲ್ಲಿ ಸಿದ್ದನಾಯಕನೆಂಬ ಪಾಳೆಗಾರನಿದ್ದು ಮಧುಗಿರಿ ಕೋಟೆಯನ್ನು ರಕ್ಷಿಸುವಲ್ಲಿ ಆತನದ್ದು ಫ್ರಧಾನ ಪಾತ್ರ. ಒಮ್ಮೆ ಮ್ಯಸೂರಿನಲ್ಲಿ ಕಧನ ಪ್ರಾರಂಭವಾದಾಗ ಮೈಸೂರಿನ ಅರಸರು ಸೈನ್ಯವನ್ನು ತೆಗೆದುಕೊಂಡು ಬರುವಂತೆ ಸಿದ್ದನಾಯಕನಿಗೆ ಆದೇಶ ಕಳುಹಿಸಿದರು. ಅರಸರ ಆದೇಶವನ್ನು ಮನ್ನಿಸಿ ಅದರಂತೆ ಸಿದ್ದನಾಯಕನು ತನ್ನ ಸೈನ್ಯವನ್ನು ತೆಗೆದುಕೊಂಡು ಮೈಸೂರು ಅರಸರ ನೆರವಿಗೆ ಹೋದನು. ಕದನದ ಮೊದಲನೆ ದಿನವು ಇವರಿಗೆ ಸೋಲುಂಟಾಯಿತು. ಸೋಲನ್ನೆ ಕಂಡರಿಯದ ಸಾಹಸಿ ಸಿದ್ದನಾಯಕನಿಗೆ ಇದರಿಂದ ಬಾರಿ ನೋವುಂಟಾಯಿತು. ಅದನ್ನೇ ಚಿಂತಿಸುತ್ತಾ ಅಂದು ರಾತ್ರಿ ಸಿದ್ದನಾಯಕನು ಬಿಡಾರದಲ್ಲಿ ಮಲಗಿರಲು ಸಿದ್ದನಾಯಕನಿಗೆ ಕನಸಿನಲ್ಲಿ ಒಂದು ಅಗೋಚರ ಶಕ್ತಿ ಗೋಚರಿಸಿತು. ಸ್ವಪ್ನದಲ್ಲಿ ಅಶರೀರ ವಾಣಿ ಕೇಳಿಸಿತು “ನೀನು ಎದೆಗುಂದದೆ ದೈರ್ಯದಿಂದ ಯುದ್ದ ಮಾಡು ನಾನು ನಿನ್ನ ಕಡೆಗಿದ್ದು ನಿನಗೆ ಜಯವಾಗುವಂತೆ ನೋಡಿಕೊಳ್ಳುತ್ತೇನೆ” ಎಂದು ಹೇಳಿ ಮಾಯವಾಯಿತು. ಮಾರನೆ ದಿನ ದೈವ ಬಲದ ಜೊತೆಗೆ ಸೇನಾಬಲ ಮನೋಬಲದಿಂದ ಸಿದ್ದನಾಯಕನು ಯುದ್ದದಲ್ಲಿ ವೀರಾವೇಶದಿಂದ ಹೋರಾಡಿ ಸುಲಭವಾಗಿ ಜಯಗಳಿಸಿದನು. ಮೈಸೂರು ಅರಸರ ಮೆಚ್ಚುಗೆಯನ್ನು ಪಡೆದು ತನ್ನ ಸೈನ್ಯ ಸಮೆತವಾಗಿ ಕಾಲ್ನಡಿಗೆಯಲ್ಲಿ ಮಧುಗಿರಿರಯ ಕಡೆಗೆ ಪ್ರಯಾಣ ಬೆಳೆಸಿದನು. ಪ್ರಯಾಣದಿಂದ ದಾರಿಯಲ್ಲಿ ಅಲ್ಲಲ್ಲಿ ಬೀಡುಬಿಟ್ಟು ಊಟ ಉಪಚಾರಗಳನ್ನು ಮುಗಿಸಿ ನಂತರ ತಮ್ಮ ಸರಕುಗಳೋಂದಿಗೆ ಪ್ರಯಾಣ ಮುಂದುವರೆಸುತ್ತಿದ್ದರು. ಮುಂದಿನ ಬಿಡಾರದಲ್ಲಿ ಅಡಿಗೆ ಮಾಡಲು ದಿನಸಿ ಸಾಮಾಗ್ರಿಗಳ ಗಂಟನ್ನು ಬಿಚ್ಚಿದರು ಅದರಲ್ಲಿ ಒಂದು ಗುಂಡುಕಲ್ಲು(ಶಿಲೆ) ಇತ್ತು. ಅದನ್ನೆ ಒಲೆ ಗುಂಡಾಗಿ ಇಟ್ಟು ಅದರ ಮೇಲೆ ಅಡಿಗೆ ಮಾಡಿ ಊಟವನ್ನು ಮುಗಿಸಿ ವಿಶ್ರಮಿಸಿಕೊಂಡು ಗುಂಡನ್ನು ಅಲ್ಲೆ ಬಿಟ್ಟು ಹೊರಟರು.
ಹೀಗೆ ಮುಂದಿನ ಬಿಡಾರದಲ್ಲಿ ಯತಾಪ್ರಕಾರ ದಿನಸಿ ಸಾಮಾಗ್ರಿಯ ಗಂಟಿನಲ್ಲಿ ಅದೇ ಗುಂಡುಕಲ್ಲು ಮತ್ತೆ ಕಾಣಿಸಿಕೊಂಡಿತು. ಇದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಲ್ಲಿಯೂ ಅವರು ಅದನ್ನು ಗಂಟಿನಿಂದ ಎಸೆದು ಪ್ರಯಾಣ ಬೆಳೆಸಿದರು. ಅವರ ಪ್ರಯಾಣದುದ್ದಕ್ಕೂ ಐದಾರು ಬಾರಿ ಇದೇ ರೀತಿ ನಡೆಯಿತು. ಅನುಮಾನ ಹಾಗೂ ಅಚ್ಚರಿಯಿಂದ ಚೋಳೇನಹಳ್ಳಿ ಗಡಿಯಲ್ಲಿ ಬಂದು ಬಿಡಾರ ಹೂಡಿದರು. ಯಥಾಪ್ರಕಾರ ಅದೇ ಗುಂಡು ದಿನಸಿ ಸಾಮಾಗ್ರಿಗಳ ಗಂಟಿನಲ್ಲಿ ಕಂಡಿತು. ಸಿದ್ದನಾಯಕನಿಗೆ ಈ ಘಟನೆ ಚಕಿತಗೊಳಿಸಿತು. ಇದನ್ನೇ ಯೋಚಿಸುತ್ತಾ ಮಲಗಿರಲು ಸಿದ್ದನಾಯಕನ ಕನಸಿನಲ್ಲಿ ಹಿಂದೆ ಕಾಣಿಸಿದ ಅಗೋಚರ ಶಕ್ತಿಯು ಮತ್ತೆ ಕಾಣಿಸಿಕೊಂಡು ನೀನು ನನ್ನ ಮರೆತಿರುವೆ ಅಂದು ನಾನು ನಿನಗೆ ಕೊಟ್ಟಿದ್ದ ಮಾತಿನಂತೆ ಯುದ್ದಲ್ಲಿ ನಿನ್ನ ಸೈನ್ಯಕ್ಕೆ ಜಯಗಳಿಸಿ ಕೊಟ್ಟಿದ್ದೇನೆ ದಂಡನ್ನು ಗೆದ್ದ ನಿನ್ನನ್ನು ಹಿಂಬಾಲಿಕೊಂಡು ಬರುತ್ತಿದ್ದೇನೆ. ನಾನು ದಂಡಿನಮಾರಮ್ಮ ಗುಂಡಿನ ರೂಪದಲ್ಲಿರುವ ನನ್ನನ್ನು ಇಲ್ಲಿ ಪ್ರತಿಷ್ಟಾಪಿಸಿ ಒಂದೇ ದಿನದಲ್ಲಿ ಗುಡಿಯನ್ನು ಕಟ್ಟಿಸಿ ಒಂದು ದಿನದ ಜಾತ್ರೆ ಮಾಡಿ ನಂತರ ಪುರ ಪ್ರವೇಶ ಮಾಡಿರಿ. ನಾನು ದಂಡಿನಮಾರಮ್ಮನಾಗಿ ಇಲ್ಲಿ ನೆಲೆಸಿ ಜನರ ಕಷ್ಟ ನಿವಾರಣೆ ಮಾಡುವ ಶಕ್ತಿಯಾಗಿ ಸ್ಥಿರವಾಗಿ ಇಲ್ಲಿ ನೆಲೆಸುತ್ತೇನೆ” ಎಂದು ಹೇಳಿ ಮಾಯವಾಯಿತು.
ದೇವಿಯ ಕೋರಿಕೆಯಂತೆ ಸಿದ್ದನಾಯಕನು ಗುಂಡಿನ ರೂಪದಲ್ಲಿ ಇರುವ ಶಿಲೆಯನ್ನು ಈಗ ದಂಡಿನಮಾರಮ್ಮನ ದೇವಸ್ಥಾನ ವಿರುವ ಸ್ಥಳದಲ್ಲಿಟ್ಟು ಗುಡಿಯನ್ನು ಕಟ್ಟಿಸಿದನು. ನಾಡನ್ನು ಸುಭೀಕ್ಷವಾಗಿಟ್ಟುಕೊಂಡು ಬರುವ ನಾಡಶಕ್ತಿಗಳಲ್ಲಿ ಒಂದಾದ ಸೇನಾ ಶಕ್ತಿಯನ್ನು ಕಾಪಾಡುವ ಶ್ರೀ ದಂಡಿನ ಮಾಹಅಮ್ಮನನ್ನು ದಂಡಿನಮಾರಮ್ಮ ಎಂದು ಕರಿಯುತ್ತಾರೆ.
ಶ್ರೀ ದಂಡಿನಮಾರಮ್ಮ ದೇವಾಲಯವು ಮಧುಗಿರಿ ಪಟ್ಟಣದ ಹೊರಹೊಲಯಲ್ಲಿದೆ .
ಮಧುಗಿರಿ ಶ್ರೀ ದಂಡಿನಮಾರಮ್ಮ ದೇವಸ್ಥಾನವು ಏಕಶಿಲಾ ಬೆಟ್ಟದ ತಪ್ಪಲಿನಲ್ಲಿ ಹಾಗೂ ಪ್ರಕ್ರತಿಯ ಮಡಿಲಿನಲ್ಲಿದೆ. ಮುಂಭಾಗದಲ್ಲಿ ಮರಗಳ ತೋಪು, ಹಿಂಬದಿಯಲ್ಲಿ ಮಧುಗಿರಿ ಬೆಟ್ಟ ಆನಂದರಾಯನ ಗುಡ್ಡಗಳಿವೆ.
ಕ್ರಿ.ಶ.1530 ರಲ್ಲಿ ಕರಿತಿಮ್ಮ ಚಿಕ್ಕಪ್ಪ ಗೌಡನು ವ್ಯಾಸರಾಯರಿಂದ ಶ್ರೀ ಚಕ್ರವನ್ನು ಸ್ಥಾಪಿಸಿ ನಂತರ ಎಳನೀರು ಮತ್ತು ಹಸಿವಿನ ಹಾಲಿನಿಂದ ಹದಗೊಳಿಸಿದ ಒಂಬತ್ತು ತರದ ಭೂತಾಳಿಗಳಿಂದ ರೂಪುಗೊಂಡ ಮ್ರುತ್ತಿಕೆ ಮಣ್ಣನ್ನು ಬಳಸಿ ಶ್ರೀ ದಂಡಿನಮಾರಮ್ಮ ದೇವಿಯ ಸುಂದರವಾದ ವಿಗ್ರಹವನ್ನು ಪ್ರತಿಸ್ತಾಪಿಸಿದರು. ಆಗಲೇ ಕರಿತಿಮ್ಮ ಚಿಕ್ಕಪ್ಪ ಗೌಡನು ದೇವಾಲಯವನ್ನು ಜೀಣೋದ್ದಾರ ಗೊಳಿಸಿದನು.
ಮಧುಗಿರಿ ಇತಿಹಾಸ ಪುಸ್ತಕ ಹಾಗೂ ಕರ್ನಾಟಕ ಸಮಗ್ರ ಇತಿಹಾಸ ಪುಸ್ತಕದಲ್ಲಿ ಶ್ರೀ ದಂಡಿನಮಾರಮ್ಮ ದೇವಸ್ಥಾನದ ಬಗ್ಗೆ ಉಲ್ಲೇಖವಿದೆ.
ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಆರೋಗ್ಯ ಭಾಗ್ಯ, ಕಂಕಣ ಭಾಗ್ಯ ವ್ಯಾಪಾರ ಅಭಿವೃದ್ದಿ, ಕೋರ್ಟ ಕಛೇರಿ ಕೆಲಸಗಳಲ್ಲಿ ಜಯ, ಉದ್ಯೋಗ ವಿದ್ಯಾ ಮುಂತಾದ ಫಲಗಳು ದೊರೆಯುತ್ತವೆ. ಉತ್ತಮ ಮಳೆ ಬೆಳೆ ಹಾಗೂ ದನ ಕರು ಜಾನುವಾರುಗಳು ಆರೋಗ್ಯ ಸುಧಾರಿಸಲು ದೇವಿಯ ಮೊರೆ ಹೋಗುತ್ತಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ರಾಹು ಕಾಲದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸುವುದರಿಂದ ಸಕಲ ದೋಷಗಳು ನಿವಾರಣೆವಾಗುತ್ತವೆ.
ದೇವಿಯ ಕುಂಕುಮಾರ್ಚನೆ ಭಂಡಾರವು ವಿಶೇಷತೆಯಿಂದ ಕೂಡಿದ್ದು, ದೇವಿಗೆ ಹೂವು ಹಣ್ಣು ಕಾಯಿ ಮಾಡಿಸುವುದು ಇಲ್ಲಿನ ವಿಶೆಷ.
1) ಶ್ರೀ ದಂಡಿನಮಾರಮ್ಮ ಉತ್ಸವ ಮೂರ್ತಿಯ ಮೆರವಣಿಗೆ ಇರುತ್ತದೆ. ಆಷಾಡ ಮಾಸದ ಪ್ರತಿ ಮಂಗಳವಾರ ಮತ್ತು ಬುಧವಾರದಂದು ಶ್ರೀ ದಂಡಿನಮಾರಮ್ಮ ಉತ್ಸವ ಮೂರ್ತಿಯನ್ನು ಮಧುಗಿರಿ ಗ್ರಾಮದ ಪ್ರಮುಖ ಬಢಾವಣೆ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಕರೆದುಕೊಂಡು ಹೋಗಿ ವಿಶೆಷ ಪೂಜಾಕಾರ್ಯಗಳನ್ನು ನೆರವೆರಿಸಿ ಉತ್ಸವ ಮೂರ್ತಿಯನ್ನು ಗುಡಿದುಂಬಿಸುವ ಕಾರ್ಯವಿರುತ್ತದೆ.
2) ವಿಜಯದಶಮಿಯಂದು ದೇವಿಗೆ ವಿಶೇಷ ಪೂಜೆ ಹಾಗೂ ಉತ್ಸವ ಮೂರ್ತಿಯ ಶಮಿ ಪುಜೆ, ಅಂಬು ಎಸೆಯುವ ಕಾರ್ಯಕ್ರಮವಿರುತ್ತದೆ.
ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಭಾರಿ ದನಗಳ ಜಾತ್ರೆ ಹಾಗೂ ಶ್ರೀ ದಂಡಿನಮಾರಮ್ಮನವರ ಜಾತ್ರೆಯು 11 ದಿನಗಳ ಕಾಲ ನಡೆಯುತ್ತದೆ. ಜಾತ್ರೆಯ ಕಾರ್ಯಕ್ರಮಗಳು, ಮೊದಲನೆ ದಿನ ಮಂಗಳವಾರದಂದು ಜಾತ್ರೆಯ ಪ್ರಾರಂಭೋತ್ಸವ, ಬುದವಾರ ಗ್ರಾಮಸ್ಥರ ಆರತಿ, ಗುರುವಾರ ಗುಗ್ಗರಿ ಗಾಡಿಗಳ ಸೇವೆ, ಶುಕ್ರವಾರ ರಥೋತ್ಸವ, ಶನಿವಾರ ಉಯ್ಯಾಲೋತ್ಸವ, ಭಾನುವಾರ ಸಿಂಹವಾಹನ, ಸೋಮವಾರ ಚಂದ್ರಮಂಡಲ ವಾಹನ, ಮಂಗಳವಾರ ನವಿಲು ವಾಹನ, ಬುಧವಾರ ಬೆಳ್ಳಿಪಲ್ಲಕ್ಕಿ ಉತ್ಸವ, ಗುರುವಾರದಂದು ಅಗ್ನಿಗುಂಡ, ಶುಕ್ರವಾರ ಮಡಲಕ್ಕಿ ಸೇವೆ ಹಾಗೂ ಜಾತ್ರೆ ಮುಕ್ತಾಯ.
3) ಸಾಮಾನ್ಯವಾಗಿ ರ್ರೈತಾಪಿ ಜನರು ತಮ್ಮ ಜಮೀನುಗಳಲ್ಲಿ ಬೆಳೆಯುವ ಬೆಳೆಗೆ ಯಾವುದಾದರೂ ರೋಗ ಕಾಣಿಸಿಕೊಂಡಾಗ ಬೆಳೆಯ ಮೊದಲನೆ ಫಲ ದೇವಿಗೆ ಅರ್ಪಿಸುತ್ತೇವೆಂದು ಹರಕೆ ಮಾಡಿಕೊಳ್ಳುವರು.
4) ಮಕ್ಕಳಿಗೆ ಯಾವುದಾದರೂ ಆರೋಗ್ಯ ವ್ಯತ್ಯಾಸ ಕಂಡುಬಂದಲ್ಲಿ ಆರತಿ ಸೇವೆ ಮಾಡುವ ಹರಕೆ ಹೊರುವರು. ಆ ಹರಕೆಯಂತೆ ಹಸಿ ಅಕ್ಕಿ ತಂಬಿಟ್ಟು ಮಾಡಿ ಅದರಲ್ಲಿ ದೀಪ ಬೆಳಗಿಸಿ ಬೇವಿನ ಎಸಳು, ಕಣಗಲ ಹೂವು ಹೋಂಭಾಳೆಯಿಂದ ಅಲಂಕರಿಸಿ ಅದನ್ನು ಚಿಕ್ಕ ಮಕ್ಕಳ ತಲೆಯ ಮೇಲೆ ಹೊರಿಸಿಕೊಂಡು ದೇವಿಗೆ ಅರ್ಪಿಸುವರು.
5) ಮನೆಯಲ್ಲಿ ಮಧುವೆ ಮುಂತಾದ ಮಂಗಳ ಕಾಯ್ಗಳು ನಡೆದಾಗ ದೇವಿಗೆ ಸೀರೆ ಹುಡಿಸುವ ಹರಕೆ ಹೊರುವರು ಹಾಗೂ ಮಡಲಕ್ಕಿ ಸೇವೆ ನಡೆಸುವರು ಹಾಗೂ ನಿಂಬೆಹಣ್ಣಿನ ದೀಪ ಹಾಗೂ ಹಾರವನ್ನು ಅರ್ಪಿಸುತ್ತಾರೆ.
6) ಭಕ್ತಾಧಿಗಳು ಕಷ್ಟಪರಿಹಾರಕ್ಕಾಗಿ ಅಗ್ನಿಕುಂಡದ ದಿನ ಆರತಿ ಹೊತ್ತು ಕೆಂಡದ ಮೇಲೆ ಬರೀಗಾಲಲ್ಲಿ ನಡೆದು ಹರಕೆ ತಿರಿಸುವರು.
7) ಬೆಳ್ಳಿಪಲ್ಲಕ್ಕಿ ದಿನ ದೇವಿಯ ಉತ್ಸವ ಸಮಯದಲ್ಲಿ ದೇವರನ್ನು ಹೊತ್ತು ಭಕ್ತಾಧಿಗಳು ಭಂಡಾರ ಹಾಡುವ ಸಂಪ್ರದಾಯವಿದೆ. ಜಾತ್ರಾ ಸಮಯದಲ್ಲಿ ಅಗ್ನಿಗುಂಡದ ದಿನ ಹರಕೆ ಹೊತ್ತ ಭಕ್ತಾಧಿಗಳು ಸೌದೆ, ಹರಳು, ಕಡಲೆಪುರಿಯನ್ನು ತಂದು ಅಗ್ನಿಗುಂಡಕ್ಕೆ ಹಾಕುವ ವಾಡಿಕೆ ಇದೆ.
8) ದೇವಾಲಯದ ಈಶಾನ್ಯ ಭಾಗದಲ್ಲಿರುವ ಕಲ್ಯಾಣಿ ನೀರಿನ ಸ್ನಾನದಿಂದ ಗಂಗೆ ದೋಷ ನಿವಾರಣೆ ಮುಂತಾದ ಫಲಗಳು ದೊರೆಯುತ್ತವೆ.
9) ದೇವಿಗೆ ಪೂಜೆ ಸಲ್ಲಿಸಿ ತೀರ್ಥದ ಕಾಯಿಯನ್ನು ತೆಗೆದುಕೊಂಡು ಹೋಗಿ ಶುಭಸಮಾರಂಭಗಳಿಗೆ, ಹೊಸಮನೆಯ ಗೃಹಪ್ರವೇಶ ಇತರೆ ಮಂಗಳ ಕಾರ್ಯಗಳಲ್ಲಿ ತೀರ್ಥದ ಕಾಯಿಯ ತೀರ್ಥವನ್ನು ಉಪಯೋಗಿಸುವ ಸಂಪ್ರದಾಯವಿದೆ.