ಮಧುಗಿರಿ ಶ್ರೀ ದಂಡಿನಮಾಮ್ಮನ ದೇವಸ್ಥಾನವು 16 ನೇ ಶತಮಾನಕ್ಕೆ ಸೇರಿದ್ದು, ಈಗ ಸುಮಾರು 500 ವರ್ಷಗಳಷ್ಟು ಹಳೆಯದಾಗಿದೆ. ಮದ್ದಗಿರಿ ಅಂದರೆ ಈಗಿನ ಮಧುಗಿರಿಯಲ್ಲಿ ಸಿದ್ದನಾಯಕನೆಂಬ ಪಾಳೆಗಾರನಿದ್ದು ಮಧುಗಿರಿ ಕೋಟೆಯನ್ನು ರಕ್ಷಿಸುವಲ್ಲಿ ಆತನದ್ದು ಫ್ರಧಾನ ಪಾತ್ರ. ಒಮ್ಮೆ ಮ್ಯಸೂರಿನಲ್ಲಿ ಕಧನ ಪ್ರಾರಂಭವಾದಾಗ ಮೈಸೂರಿನ ಅರಸರು ಸೈನ್ಯವನ್ನು ತೆಗೆದುಕೊಂಡು ಬರುವಂತೆ ಸಿದ್ದನಾಯಕನಿಗೆ ಆದೇಶ ಕಳುಹಿಸಿದರು. ಅರಸರ ಆದೇಶವನ್ನು ಮನ್ನಿಸಿ ಅದರಂತೆ ಸಿದ್ದನಾಯಕನು ತನ್ನ ಸೈನ್ಯವನ್ನು ತೆಗೆದುಕೊಂಡು ಮೈಸೂರು ಅರಸರ ನೆರವಿಗೆ ಹೋದನು. ಕದನದ ಮೊದಲನೆ ದಿನವು ಇವರಿಗೆ ಸೋಲುಂಟಾಯಿತು. ಸೋಲನ್ನೆ ಕಂಡರಿಯದ ಸಾಹಸಿ ಸಿದ್ದನಾಯಕನಿಗೆ ಇದರಿಂದ ಬಾರಿ ನೋವುಂಟಾಯಿತು. ಅದನ್ನೇ ಚಿಂತಿಸುತ್ತಾ ಅಂದು ರಾತ್ರಿ ಸಿದ್ದನಾಯಕನು ಬಿಡಾರದಲ್ಲಿ ಮಲಗಿರಲು ಸಿದ್ದನಾಯಕನಿಗೆ ಕನಸಿನಲ್ಲಿ ಒಂದು ಅಗೋಚರ ಶಕ್ತಿ ಗೋಚರಿಸಿತು. ಸ್ವಪ್ನದಲ್ಲಿ ಅಶರೀರ ವಾಣಿ ಕೇಳಿಸಿತು “ನೀನು ಎದೆಗುಂದದೆ...