Sri Hasanamba Temple, Hassan, Hassan District [TM000175]
×
Temple History
ಸ್ಥಳ ಪುರಾಣ
ಹಾಸನ ನಗರದಲ್ಲಿ ನೆಲೆಸಿರುವ ಶ್ರೀ ಹಾಸನಾಂಬೆಯ ದೇವಸ್ಥಾನವು ಸುಮಾರು 12 ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕ ಎಂಬ ಪಾಳೆಗಾರರ ಕಾಲದಲ್ಲಿ ಸ್ಥಾಪಿತ ವಾಗಿರುವ ಈ ದೇವಾಲಯವು ಇತರ ದೇವಾನುದೇವತೆಗಳ ಕೆತ್ತನೆಯಲ್ಲಿ ಹಾಸನಾಂಬ ದೇವಿಯು ಹುತ್ತದಲ್ಲಿ ನೆಲೆಸಿರುವ ನೋಟವನ್ನು ಇಲ್ಲಿ ಕಾಣಬಹುದು. ಮೊದಲು ಸಿಂಹಾಸನಪುರಿ ಎಂದು ಕರೆಯಲಾಗುತ್ತಿದ್ದ ಊರಿನಲ್ಲಿ ಹಾಸನಾಂಬೆ ನೆಲೆಯಾಗಿದ್ದರಿಂದ ಅನಂತರದಲ್ಲಿ ಹಾಸನ ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದೆ.
ಸಪ್ತ ಮಾತೃಕೆಯರು ವಾರಣಾಸಿಯಿಂದ (ಕಾಶಿ) ದಕ್ಷಿಣಕ್ಕೆ ವಾಯುವಿಹಾರಾರ್ಥವಾಗಿ ಬಂದರೆಂದೂ, ಆ ಸಪ್ತ ಮಾತೃಕೆಯರೆಂದರೆ, ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ. ಈ ಸಪ್ತ ಮಾತೃಕೆಯರಲ್ಲಿ ವೈಷ್ಣವಿ ಮಹೇಶ್ವರಿ ಕೌಮಾರಿ ದೇವಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆಂದೂ ಪ್ರತೀತಿಯಂತೆ ತಿಳಿದುಬಂದಿದೆ. ವರ್ಷಕೊಮ್ಮೆ ದೇವಿಯರ ದರ್ಶನವಿದ್ದು ಹಾಸನಾಂಬೆ ದೇವಿಯನ್ನು...ಹಾಸನ ನಗರದಲ್ಲಿ ನೆಲೆಸಿರುವ ಶ್ರೀ ಹಾಸನಾಂಬೆಯ ದೇವಸ್ಥಾನವು ಸುಮಾರು 12 ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕ ಎಂಬ ಪಾಳೆಗಾರರ ಕಾಲದಲ್ಲಿ ಸ್ಥಾಪಿತ ವಾಗಿರುವ ಈ ದೇವಾಲಯವು ಇತರ ದೇವಾನುದೇವತೆಗಳ ಕೆತ್ತನೆಯಲ್ಲಿ ಹಾಸನಾಂಬ ದೇವಿಯು ಹುತ್ತದಲ್ಲಿ ನೆಲೆಸಿರುವ ನೋಟವನ್ನು ಇಲ್ಲಿ ಕಾಣಬಹುದು. ಮೊದಲು ಸಿಂಹಾಸನಪುರಿ ಎಂದು ಕರೆಯಲಾಗುತ್ತಿದ್ದ ಊರಿನಲ್ಲಿ ಹಾಸನಾಂಬೆ ನೆಲೆಯಾಗಿದ್ದರಿಂದ ಅನಂತರದಲ್ಲಿ ಹಾಸನ ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದೆ.
ಸಪ್ತ ಮಾತೃಕೆಯರು ವಾರಣಾಸಿಯಿಂದ (ಕಾಶಿ) ದಕ್ಷಿಣಕ್ಕೆ ವಾಯುವಿಹಾರಾರ್ಥವಾಗಿ ಬಂದರೆಂದೂ, ಆ ಸಪ್ತ ಮಾತೃಕೆಯರೆಂದರೆ, ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ. ಈ ಸಪ್ತ ಮಾತೃಕೆಯರಲ್ಲಿ ವೈಷ್ಣವಿ ಮಹೇಶ್ವರಿ ಕೌಮಾರಿ ದೇವಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆಂದೂ ಪ್ರತೀತಿಯಂತೆ ತಿಳಿದುಬಂದಿದೆ. ವರ್ಷಕೊಮ್ಮೆ ದೇವಿಯರ ದರ್ಶನವಿದ್ದು ಹಾಸನಾಂಬೆ ದೇವಿಯನ್ನು ಭಕ್ತರು ಎಲ್ಲಾ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೊಂದು ಸಾರಿ ಆಶ್ವಯುಜ ಮಾಸ ಪೂರ್ಣಿಮೆ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚುವುದು, ಪುನಃ ಒಂದು ವರ್ಷದ ಕಾಲ ದೇವಿಯರ ದರ್ಶನ ಸಿಗುವುದಿಲ್ಲ. ಹಾಸನಾಂಬಾ ದೇವಿಯ ವಿಶೇಷವೆಂದರೆ ನಂಬಿದ ಭಕ್ತರ ಹರಕೆಗಳನ್ನು ತೀರಿಸುವುದು ಹಾಗೂ ಅವರ ಜೀವನದಲ್ಲಿ ಹೊಸಬೆಳಕು ನೀಡಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವುದು.
ಹಾಸನಾಂಬ ದೇವಿಯ ಬಾಗಿಲು ತೆಗೆಯುವ ಸಮಯ ಬಂದಿತೆಂದರೆ ಜಿಲ್ಲೆಯ ಎಲ್ಲಾ ಮೂಲೆ ಮೂಲೆಗಳಿಂದ ಭಕ್ತಾಧಿಗಳೂ ದೇವಿಯ ದರ್ಶನಕ್ಕೋಸ್ಕರ ಸಾಲುಸಾಲಾಗಿ ನಿಂತು ದರ್ಶನ ಮಾಡುವ ನೋಟವು ಜಾತ್ರೆಯಂತೆ ಕಾಣುತ್ತದೆ. ಬಾಗಿಲು ತೆಗೆಯುವ ದಿವಸ ಹಾಸನದಲ್ಲಿರುವ ಎಲ್ಲಾ ತಳವಾರ ಮನೆತನದವರು ದೇವಿಯ ಗರ್ಭಗುಡಿಯ ಎದುರಿಗೆ ಬಾಳೆಕಂದನ್ನು ನೆಟ್ಟು ಹಾಸನಾಂಬೆಯನ್ನು ಭಕ್ತಿಯಿಂದ ಭಜಿಸುತ್ತಾ ಬಾಳೆಕಂದನ್ನು ಕತ್ತರಿಸಿದ ನಂತರವೇ ದೇವಿಯ ಬಾಗಿಲನ್ನು ತೆಗೆಯುವ ಪ್ರತೀತಿ/ಸಂಪ್ರದಾಯವು ಮೊದಲಿನಿಂದಲೂ ರೂಢಿಯಲ್ಲಿದೆ.
ಪ್ರತಿನಿತ್ಯ ದೇವಿಯ ದರ್ಶನ ಮಾಡಲು ಬರುತ್ತಿದ್ದ ಸೊಸೆಗೆ ಕಿರುಕುಳ ಕೊಡುತ್ತಿದ್ದ ಅತ್ತೆಯು ಒಂದು ದಿನ ಸೊಸೆಯನ್ನು ಹಿಂಬಾಲಿಸಿದಾಗ ಮನೆಯಿಂದ ನೇರವಾಗಿ ಬಂದು ದೇವಿಯ ಮುಂದೆ ನಿಂತು ದೇವಿಯ ಧ್ಯಾನದಲ್ಲಿ ಮಗ್ನಳಾಗಿದ್ದ ಸೊಸೆಯನ್ನು ಕಂಡು ಸಿಟ್ಟಿನಿಂದ ಮನೆಯ ಕೆಲಸ ಕಾರ್ಯಗಳಿಗಿಂತ ದೇವಿಯ ದರ್ಶನ ನಿನಗೆ ಹೆಚ್ಚಾಯಿತೇ ಎಂದು ದೇವಿಯ ಮುಂಭಾಗದಲ್ಲಿದ್ದ ಚಂದ್ರ ಬಟ್ಟಲನ್ನು ತೆಗೆದುಕೊಂಡು ತಲೆಯ ಮೇಲೆ ಕುಕ್ಕಿದ್ದರಿಂದ ನೋವನ್ನು ತಾಳಲಾರದೆ ಸೊಸೆಯು ಅಮ್ಮಾ ಹಾಸನಾಂಬೆ ಎಂದು ಭಕ್ತಿಯಿಂದ ಕೂಗಿದಾಗ ಭಕ್ತಳ ಕಷ್ಟವನ್ನು ನೋಡಲಾರದೆ ದೇವಿಯು ಅವಳ ಭಕ್ತಿಗೆ ಮೆಚ್ಚಿ ತನ್ನ ಸನ್ನಿಧಿಯಲ್ಲಿ ಯಾವಾಗಲೂ ಎದುರಿಗೆ ಕಾಣುವಂತಿರು ಎಂದು ತಿಳಿಸಿದಾಗ ಸೊಸೆಯು ಕಲ್ಲಾಗಿ ನೆಲೆಸಿದಳೆಂದು, ಪ್ರತಿ ವರ್ಷವೂ ಒಂದು ಭತ್ತದ ಕಾಳಿನ ತುದಿಯಷ್ಟು ದೇವಿಯ ಕಡೆ ಚಲಿಸುವಳೆಂದೂ, ಪಾದ ತಲುಪಿದ ಕ್ಷಣದಲ್ಲೇ ಕಲಿಯುಗದ ಅಂತ್ಯ ಎನ್ನುವ ವಾಡಿಕೆ ಮೊದಲಿನಿಂದಲೂ ಸಹ ಬಂದಿದೆ. ಅತ್ತೆಮನೆ ಸೊಸೆ ಕಲ್ಲಾಗಿ ನೆಲೆಸಿರುವ ಈ ದೃಶ್ಯವನ್ನು ಈಗಲೂ ಕಣ್ಣಾರೆ ಕಾಣಬಹುದು.
ದೇವಿಯ ಮೇಲಿರುವ ಆಭರಣಗಳನ್ನು ಅಪಹರಿಸಲೆಂದು ನಾಲ್ಕು ಮಂದಿ ಕಳ್ಳರು ಒಳಪ್ರವೇಶಿಸಿ, ಆಭರಣಗಳನ್ನು ತೆಗೆಯಲು ಹೋದಾಗ ಕುಪಿತಳಾದ ದೇವಿಯು ಶಾಪಕೊಟ್ಟಾಗ ಆ ನಾಲ್ಕು ಮಂದಿ ಕಳ್ಳರು ಕಲ್ಲಾಗಿದ್ದು, ಇಂದಿಗೂ ಇವುಗಳನ್ನು ಕಾಣಬಹುದು. ಈ ಗುಡಿಯನ್ನು ಕಳ್ಳಪ್ಪನ ಗುಡಿ ಎಂದು ಕರೆಯುತ್ತಾರೆ.
ಶ್ರೀ ಹಾಸನಾಂಬೆಯ ದೇವಾಲಯದ ದ್ವಾರದಿಂದ ಒಳಪ್ರವೇಶಿಸಿದ ತಕ್ಷಣವೇ ಮೊದಲು ನೋಡಬಹುದಾದ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಾಲಯವು ಸುಂದರ ರೂಪದಲ್ಲಿದೆ. ಈ ದೇವಾಲಯದಲ್ಲಿ ಸಿದ್ದೇಶ್ವರ ಸ್ವಾಮಿಯನ್ನು ಲಿಂಗರೂಪದಲ್ಲಿ ಅಲ್ಲದೇ ಉದ್ಭವ ಮೂರ್ತಿಯು ಅರ್ಜುನನಿಗೆ ಈಶ್ವರನು ಪಾಶುಪತಾಸ್ತ್ರವನ್ನು ಕೊಡುವ ಆಕಾರದಲ್ಲಿದೆ. ಉದ್ಬವ ಮೂರ್ತಿಯು ಹಣೆಯ ಮೇಲೆ ಜಿನುಗುವ ರೂಪದಲ್ಲಿ ಪ್ರತಿ ವರ್ಷವೂ ವಿಶೇಷವಾಗಿ ಪ್ರತಿ
ನಿತ್ಯವೂ ನೋಡಬಹುದಾಗಿದೆ.
ಪ್ರತಿ ವರ್ಷ ಆಶ್ವಾಯುಜ ಮಾಸದ ಕೃಷ್ಣಾಪಕ್ಷದ ಪ್ರಥಮ ದ್ವಿತೀಯ ಹೊರತುಪಡಿಸಿ ಬರುವ ಗುರುವಾರದಂದು ದೇವಾಲಯದ ಗರ್ಭಗುಡಿಯ ಬಾಗಿಲು ತೆಗೆದು (ದೀಪಾವಳಿ ಕಾಲಗಳಲ್ಲಿ) ಸಂಪ್ರದಾಯಿಕ ವಿಧಿ ವಿಧಾನದಂತೆ ಕನಿಷ್ಠ 9 ದಿನ ಗರಿಷ್ಠ 15 ದಿನಗಳವರೆಗೆ ಶ್ರೀ ದರ್ಶನ ನಂತರ ಯಮದ್ವೀತಿಯ ದಿನದಂದು ಬಾಗಿಲು ಮುಚ್ಚಿದ ನಂತರ ಇತರೆ ದಿನಗಳಲ್ಲಿ ದೇವಾಲಯದಲ್ಲಿರುವ ದೇವರ ಪದಗಳು ಹಾಗೂ ಗರ್ಭಗುಡಿ ದ್ವಾರಕ್ಕೆ ನಿತ್ಯ ಪೂಜೆ ಸಪ್ತಾಹ ಪೂಜೆ ಮತ್ತು ಮಾಸಿಕ ಪೂಜೆಗಳು ನಡೆಯುವುದು.
ಇದೊಂದು ದಂತಕಥೆ ಅರ್ಚಕರು ಮತ್ತು ಭಕ್ತರು ಹಿಂದಿನಿಂದಲೂ ಸ್ಥಳ ಮಹಾತ್ಮೆಯನ್ನು ಹೇಳಿಕೊಂಡು ಬರುತ್ತಿರುವ ಪ್ರತೀತಿ ಆಗಿದೆ ಇದಕ್ಕೆ ಯಾವುದೇ ಶಾಸನಗಳಲ್ಲಿ ಇತಿಹಾಸ ಪುರಾಣಗಳಲ್ಲಿ ಉಲ್ಲೇಖ ಇರುವುದಿಲ್ಲ ಅರ್ಚಕರ ಕುಟುಂಬದ ಪೂರ್ವಿಕರು ಒಬ್ಬರಿಂದ ಒಬ್ಬರಿಗೆ (ಬಾಯಿಂದ ಬಾಯಿಗೆ) ಹೇಳಿಕೊಂಡು ನಡೆದುಕೊಂಡು ಬರುತ್ತಿರುವುದೇ ವಿಶೇಷವಾಗಿದೆ/ ಸಂಪ್ರದಾಯವಾಗಿದೆ.
Temple Opening & Closing Timings
06:00 AM IST - 06:00 AM IST
07:00 AM IST - 10:00 AM IST
10:00 AM IST - 10:00 AM IST
ದರ್ಶ್ನಕ್ಕೆ ಬರುವ ಭಕ್ತಾಧಿಗಳಿಗೆ ಬೆಳಗ್ಗೆ 6.00 ರಿಂದ ರಾತ್ರಿ 10.00 ಗಂಟೆಯವರೆಗೆ ಅವಕಾಶವಿರುತ್ತ್ ದೆ.