ಹಾಸನ ನಗರದಲ್ಲಿ ನೆಲೆಸಿರುವ ಶ್ರೀ ಹಾಸನಾಂಬೆಯ ದೇವಸ್ಥಾನವು ಸುಮಾರು 12 ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕ ಎಂಬ ಪಾಳೆಗಾರರ ಕಾಲದಲ್ಲಿ ಸ್ಥಾಪಿತ ವಾಗಿರುವ ಈ ದೇವಾಲಯವು ಇತರ ದೇವಾನುದೇವತೆಗಳ ಕೆತ್ತನೆಯಲ್ಲಿ ಹಾಸನಾಂಬ ದೇವಿಯು ಹುತ್ತದಲ್ಲಿ ನೆಲೆಸಿರುವ ನೋಟವನ್ನು ಇಲ್ಲಿ ಕಾಣಬಹುದು. ಮೊದಲು ಸಿಂಹಾಸನಪುರಿ ಎಂದು ಕರೆಯಲಾಗುತ್ತಿದ್ದ ಊರಿನಲ್ಲಿ ಹಾಸನಾಂಬೆ ನೆಲೆಯಾಗಿದ್ದರಿಂದ ಅನಂತರದಲ್ಲಿ ಹಾಸನ ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದೆ.
ಸಪ್ತ ಮಾತೃಕೆಯರು ವಾರಣಾಸಿಯಿಂದ (ಕಾಶಿ) ದಕ್ಷಿಣಕ್ಕೆ ವಾಯುವಿಹಾರಾರ್ಥವಾಗಿ ಬಂದರೆಂದೂ, ಆ ಸಪ್ತ ಮಾತೃಕೆಯರೆಂದರೆ, ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು...