ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ ಕಿರಿಮಂಜೇಶ್ವರ, Kirimanjeshwara, ಉಡುಪಿ - 576219, ಉಡುಪಿ .
Sri Agastheshwara Temple Kirimanjeshwar, Udupi - 576219, Udupi District [TM000177]
×
Temple History
ಪೌರಾಣಿಕ ಹಿನ್ನೆಲೆ
ಶ್ರೀ ಅಗಸ್ತೇಶ್ವರ ದೇವಸ್ಥಾನ ಕಿರಿಮಂಜೇಶ್ವರ ಬೈಂದೂರು ತಾಲೂಕು ಉಡುಪಿ ಜಿಲ್ಲೆ 576219
ಇತಿಹಾಸ ಸ್ಥಳ ಪುರಾಣ ದೇವಾಲಯಗಳಲ್ಲಿನ ವಿಶೇಷತೆ ಹಾಗೂ ಮಾಹಿತಿಗಳ ಟಿಪ್ಪಣಿ.
ಹಿಂದೆ ದ್ವಾಪರ ಯುಗದಲ್ಲಿ ಗಿರಿಜಾ ಕಲ್ಯಾಣ ಸಮಯದಲ್ಲಿ ಅಗಸ್ತö್ಯ ಮುನಿಗಳು ಕೈಲಾಸದಿಂದ ದಕ್ಷಿಣಕ್ಕೆ ಬರುವಾಗ ಕಮಂಡಲ ಇಟ್ಟ ಸ್ಥಳದಲ್ಲಿ ಕಮಂಡಲ ಉಕ್ಕಿಬಂತು ಇದೆ ಕಾರಣಿಕವಾದ ಸ್ಥಳವೆಂದು ಮನಗೊಂಡು ಅಗಸ್ತö್ಯ ಮುನಿಗಳು ಲಿಂಗ ಪ್ರತಿಷ್ಟಾಪನೆ ಮಾಡಿದರು ಅಗಸ್ತೇಶ್ವರ ಪ್ರಣಿತವಾದ ಲಿಂಗಕ್ಕೆ ಅಗಸ್ತೇಶ್ವರ ಎಂಬುದಾಗಿ ಪ್ರಸಿದ್ಧಿಯಾಯಿತು. ಅಗಸ್ತೇಶ್ವರ ಜೋತೆಗೆ ಆಗ್ನೇಯ ಭಾಗದಲ್ಲಿ ಪಾರ್ವತಿ ಸ್ಕಂದ ಸಹಿತ ಧ್ವಿಭುಜ ಬಾಲ ಗಣಪತಿ ವಿಗ್ರಹಗಳು ಪ್ರತಿಷ್ಟಾಪಿಸಲಾಯಿತು. ಈಶಾನ್ಯ ಭಾಗದಲ್ಲಿ ಯೋಗಿನಿಯಾದ ದುರ್ಗಾಪರಮೇಶ್ವರಿ ಶ್ರೀ ವಿಶಾಲಾಕ್ಷೀ ಅಮ್ಮನವರು ಲಿಂಗರೂಪದಲ್ಲಿ ನೆಲೆಸಿದ್ದಾಳೆ.
ಕಾರಣಿಕ ಕ್ಷೇತ್ರವಾದ ಗಣಪತಿ ದೇವರಲ್ಲಿ ಪ್ರಾರ್ಥನೆ ಇಟ್ಟು ಬಾಲ ಗಣಪತಿ ಹೋಮ ನಡೆಸುವರೆ ವಿವಾಹ...ಶ್ರೀ ಅಗಸ್ತೇಶ್ವರ ದೇವಸ್ಥಾನ ಕಿರಿಮಂಜೇಶ್ವರ ಬೈಂದೂರು ತಾಲೂಕು ಉಡುಪಿ ಜಿಲ್ಲೆ 576219
ಇತಿಹಾಸ ಸ್ಥಳ ಪುರಾಣ ದೇವಾಲಯಗಳಲ್ಲಿನ ವಿಶೇಷತೆ ಹಾಗೂ ಮಾಹಿತಿಗಳ ಟಿಪ್ಪಣಿ.
ಹಿಂದೆ ದ್ವಾಪರ ಯುಗದಲ್ಲಿ ಗಿರಿಜಾ ಕಲ್ಯಾಣ ಸಮಯದಲ್ಲಿ ಅಗಸ್ತö್ಯ ಮುನಿಗಳು ಕೈಲಾಸದಿಂದ ದಕ್ಷಿಣಕ್ಕೆ ಬರುವಾಗ ಕಮಂಡಲ ಇಟ್ಟ ಸ್ಥಳದಲ್ಲಿ ಕಮಂಡಲ ಉಕ್ಕಿಬಂತು ಇದೆ ಕಾರಣಿಕವಾದ ಸ್ಥಳವೆಂದು ಮನಗೊಂಡು ಅಗಸ್ತö್ಯ ಮುನಿಗಳು ಲಿಂಗ ಪ್ರತಿಷ್ಟಾಪನೆ ಮಾಡಿದರು ಅಗಸ್ತೇಶ್ವರ ಪ್ರಣಿತವಾದ ಲಿಂಗಕ್ಕೆ ಅಗಸ್ತೇಶ್ವರ ಎಂಬುದಾಗಿ ಪ್ರಸಿದ್ಧಿಯಾಯಿತು. ಅಗಸ್ತೇಶ್ವರ ಜೋತೆಗೆ ಆಗ್ನೇಯ ಭಾಗದಲ್ಲಿ ಪಾರ್ವತಿ ಸ್ಕಂದ ಸಹಿತ ಧ್ವಿಭುಜ ಬಾಲ ಗಣಪತಿ ವಿಗ್ರಹಗಳು ಪ್ರತಿಷ್ಟಾಪಿಸಲಾಯಿತು. ಈಶಾನ್ಯ ಭಾಗದಲ್ಲಿ ಯೋಗಿನಿಯಾದ ದುರ್ಗಾಪರಮೇಶ್ವರಿ ಶ್ರೀ ವಿಶಾಲಾಕ್ಷೀ ಅಮ್ಮನವರು ಲಿಂಗರೂಪದಲ್ಲಿ ನೆಲೆಸಿದ್ದಾಳೆ.
ಕಾರಣಿಕ ಕ್ಷೇತ್ರವಾದ ಗಣಪತಿ ದೇವರಲ್ಲಿ ಪ್ರಾರ್ಥನೆ ಇಟ್ಟು ಬಾಲ ಗಣಪತಿ ಹೋಮ ನಡೆಸುವರೆ ವಿವಾಹ ಪ್ರತಿಬಂಧಕ ದೋಷ ನಿವಾರಣೆಯಾಗುತ್ತದೆ. ಈಶ್ವರ ದೇವರಲ್ಲಿ ಭಕ್ತಿಯಿಂದ ರುದ್ರಾಭಿಷೇಕ ಸೇವೆ ನೀಡಿದರೆ ಗ್ರಹಚಾರ ಪೀಡೆ ಶನಿ ಪೀಡೆಗಳು ನೀವಾರಣೆಯಾಗುತ್ತದೆ. ಯೋಗಿನಿಯಲ್ಲಿ ಅಮಲು ಪೂಜೆ ಮಡಿಲು ಪೂಜೆ ಸೇವೆ ನೀಡಿದಾಗ ಸಂತಾನ ಪ್ರತಿಬಂಧಕ ದೋಷ ನಿವಾರಣೆಯಾಗುತ್ತದೆ. ಶಿವ ದೇವಾಲಯವು ಅಭಿಷೇಕದಿಂದ ಪ್ರಸಿದ್ಧಿಯಾಗಿದೆ. ಮಳೆ ಬರದ ಕಾಲದಲ್ಲಿ ಸೀಯಾಳ ಅಭಿಷೇಕ ಹೇಳಿಕೊಂಡರೆ ಮಳೆ ಬಿಳುತ್ತದೆ. ಶ್ರೀ ಮಹಾ ಗಣಪತಿ ದೇವಾಲಯವು ಅಷ್ಟೋತ್ತರ ಪೂಜೆಯಿಂದಲೂ ಅಮ್ಮನವರ ದೇವಾಲಯವೂ ಕುಂಕುಮಾರ್ಚನೆ ಸೇವೆಯಿಂದಲೂ ಪ್ರಸಿದ್ಧಿಯಾಗಿದೆ. ಶ್ರೀ ಅಗಸ್ತೇಶ್ವರ ನಲ್ಲಿ ರುದ್ರಾಭಿಷೇಕ ,ಹಣ್ಣುಕಾಯಿ ,ಮಂಗಳಾರತಿ ,ಶ್ರಾವಣ ಮಾಸ ಒಂದು ಪರಿಯಂತ ,ಏಕಾದಶ ರುದ್ರ ಶತರುದ್ರಾಭಿಷೇಕ, ರುದ್ರ ಹೋಮ ,ಸೋಣೆ ಆರತಿ, ಅಧಿವಾಸ ಹೋಮ, ಕಾರ್ತಿಕ ದೀಪೋತ್ಸವ, ರಂಗ ಪೂಜೆ, ಧನುರ್ಮಾಸ ಪೂಜೆ, ಶಿವರಾತ್ತಿ ಲಕ್ಷ ಬಿಲ್ವಾರ್ಚನೆ, ಬುದ್ಧ ಪೌರ್ಣಿಮೆಯ ದಿನ ಬ್ರಹ್ಮ ರಥೋತ್ಸವ ನೆಡೆಯುತ್ತದೆ. ಶ್ರೀ ಮಾಹಾಗಣಪತಿ ದೇವರಿಗೆ ರಂಗ ಪೂಜೆ, ಹಣ್ಣುಕಾಯಿ, ಮಂಗಳಾರತಿ ಮೂಡುಗಣಪತಿ ಸೇವೆ, ಗಣ ಹೋಮ, ಗಣೇಶ ಚತುರ್ಥಿ, ಕೊಟ್ಟೆ ಕಡುಬು ನೈವೇದ್ಯ, ಸಹಸ್ರ ದುರ್ವಾರ್ಚನೆ, ಪಂಚಕಜ್ಜಾಯ ಸೇವೆ, ಬಾಲ ಗಣಪತಿ ಹೋಮ, ತುಲಾಭಾರ, ಮೋದಕ ನೈವ್ಯೇದ್ಯ ಇತರ ಸೇವೆಗಳು ನೇಡೆಯುತ್ತದೆ. ಶ್ರೀ ವಿಶಾಲಾಕ್ಷಮ್ಮನವರ ದೇವಾಲಯದಲ್ಲಿ ಅರ್ಚನೆ ಪಂಚಮೃತ ಪೂಜೆ, ದುರ್ಗಾ ಹೋಮ, ಚಂಡಿಕಾ ಹೋಮ, ದಿಪೋತ್ಸವ, ಚಂಡಿಕಾ ಪರಾಯಣ, ಮಡಿಲು ತುಂಬುವ ಸೇವೆ ವಿಶೇಷವಾಗಿದೆ.
ಸಾಗರದ ತಡಿಯಲ್ಲಿ ಸದಾ ಕಡಲ ಭೋರ್ಗರೆವ ನಾದ ಅರಬ್ಬಿ ಸಮುದ್ರದ ತಡಿಯಲ್ಲಿ ಅಗಸ್ತೇಶ್ವರ ಪ್ರಣಿತವಾದ ದೇವಾಲಯವು 2003ರಲ್ಲಿ ಜಿರ್ಣೋದ್ಧಾರಗೊಂಡಿದ್ದು ಹಾಗೆಯೆ 2005ನೇ ಇಸವಿಯಲ್ಲಿ ವಿಶಾಲಾಕ್ಷೀ ದೇವಾಲಯವು, 2021ನೇ ಇಸವಿಯಲ್ಲಿ ಗಣಪತಿ ದೇವಾಲಯವು ಜಿರ್ಣೋದ್ದಾರಗೊಂಡಿರುತ್ತದೆ.
ದೇವಾಲಯದ ಉತ್ತರ ಬಾಗದಲ್ಲಿ ಪ್ರಾಚೀನವಾದ ಲಕ್ಷ್ಮೀ ನಾರಾಯಣ ದೇವಾಲಯವಿದ್ದು ವೀರಗಲ್ಲು ಇದೆ. ವಾಸ್ತು ತಜ್ಞರ ಪ್ರಕಾರ ದೇವಾಲಯವು ನಿರ್ಮಾಣಗೊಂಡಿತು, ಶಿಲಾದೀಪಕಂಬ ಧ್ವಜಮರ,ಏಳು ತಿರ್ಥಗಳನ್ನೊಳಗೊಂಡಿದೆ. ಸಾಂಪ್ರದಾಯಿಕವಾದ ಸನಾತನ ಪರಂಪರೆಯಂತೆ ಪೊಜೆ ನೆಡೆಸಲಾಗಿದ್ದು ಅಗಸ್ತೇಶ್ವರ ತಿರ್ಥದಲ್ಲಿ ಸ್ನಾನ ಮಾಡಿದರೆ ದೈಹಿಕ ಸಂಬಂಧ ಕಾಯಿಲೆಗಳು ನಿವಾರಣೆಯಾಗುತ್ತದೆ. ಅಗಸ್ತೇಶ್ವರ ನು ಸಮಸ್ತ ಭಕ್ತರ ಪಾಪ ಪರಿಹಾರಕನು ಇಷ್ಟಾರ್ಥ ನೇರವೆರಿಸುವವನು ಆಗಿದ್ದಾನೆ.