ಇತಿಹಾಸ ಸ್ಥಳ ಪುರಾಣ ದೇವಾಲಯಗಳಲ್ಲಿನ ವಿಶೇಷತೆ. ಹಿಂದೆ ದ್ವಾಪರ ಯುಗದಲ್ಲಿ ಗಿರಿಜಾ ಕಲ್ಯಾಣ ಸಮಯದಲ್ಲಿ ಅಗಸ್ತö್ಯ ಮುನಿಗಳು ಕೈಲಾಸದಿಂದ ದಕ್ಷಿಣಕ್ಕೆ ಬರುವಾಗ ಕಮಂಡಲ ಇಟ್ಟ ಸ್ಥಳದಲ್ಲಿ ಕಮಂಡಲ ಉಕ್ಕಿಬಂತು ಇದೆ ಕಾರಣಿಕವಾದ ಸ್ಥಳವೆಂದು ಮನಗೊಂಡು ಅಗಸ್ತö್ಯ ಮುನಿಗಳು ಲಿಂಗ ಪ್ರತಿಷ್ಟಾಪನೆ ಮಾಡಿದರು ಅಗಸ್ತೇಶ್ವರ ಪ್ರಣಿತವಾದ ಲಿಂಗಕ್ಕೆ ಅಗಸ್ತೇಶ್ವರ ಎಂಬುದಾಗಿ ಪ್ರಸಿದ್ಧಿಯಾಯಿತು. ಅಗಸ್ತೇಶ್ವರ ಜೋತೆಗೆ ಆಗ್ನೇಯ ಭಾಗದಲ್ಲಿ ಪಾರ್ವತಿ ಸ್ಕಂದ ಸಹಿತ ಧ್ವಿಭುಜ ಬಾಲ ಗಣಪತಿ ವಿಗ್ರಹಗಳು ಪ್ರತಿಷ್ಟಾಪಿಸಲಾಯಿತು. ಈಶಾನ್ಯ ಭಾಗದಲ್ಲಿ ಯೋಗಿನಿಯಾದ ದುರ್ಗಾಪರಮೇಶ್ವರಿ ಶ್ರೀ ವಿಶಾಲಾಕ್ಷೀ ಅಮ್ಮನವರು ಲಿಂಗರೂಪದಲ್ಲಿ ನೆಲೆಸಿದ್ದಾಳೆ. ಕಾರಣಿಕ ಕ್ಷೇತ್ರವಾದ ಗಣಪತಿ ದೇವರಲ್ಲಿ ಪ್ರಾರ್ಥನೆ ಇಟ್ಟು ಬಾಲ ಗಣಪತಿ ಹೋಮ ನಡೆಸುವರೆ ವಿವಾಹ ಪ್ರತಿಬಂಧಕ ದೋಷ ನಿವಾರಣೆಯಾಗುತ್ತದೆ. ಈಶ್ವರ ದೇವರಲ್ಲಿ ಭಕ್ತಿಯಿಂದ ರುದ್ರಾಭಿಷೇಕ ಸೇವೆ ನೀಡಿದರೆ ಗ್ರಹಚಾರ ಪೀಡೆ ಶನಿ ಪೀಡೆಗಳು ನೀವಾರಣೆಯಾಗುತ್ತದೆ....