Screen Reader Access                 A-  A  A+ 
ಶ್ರೀ ಆಂಜನೇಯಸ್ವಾಮಿ ದೇವಾಲಯ ಯಲಹಂಕ ಗೇಟ್, ಬೆಂಗಳೂರು ನಗರ - 560002, ಬೆಂಗಳೂರು .
Sri Anjaneyaswamy Temple Yelahanka Gate, Bengaluru Urban - 560002, Bengaluru Urban District [TM000187]
×
Temple History

ಸ್ಥಳ ಪುರಾಣ

ಈ ಇತಿಹಾಸ ಪ್ರಸಿದ್ಧ ದೇಗುಲಕ್ಕೆ ತನ್ನದೇ ಆದ ಐತಿಹ್ಯವಿದೆ. ಕೆಂಪೇಗೌಡರು ತಮ್ಮ ರಾಜ್ಯವನ್ನು ವಿಸ್ತುರಿಸುವ ಆಸೆಯಿಂದ, ವಿಷಯವನ್ನು ರಾಜಗುರುಗಳಲ್ಲಿ ಒಮ್ಮೆ ಪ್ರಸ್ತಾಪಿಸಿ, ಅವರಿಂದ ಅಸ್ತು ಎನಿಸಿಕೊಂಡಿದ್ದರು. ಕೆಂಪೇಗೌಡರು ಆಂಜನೇಯ ಸ್ವಾಮಿಯ ಮಹಾ ಭಕ್ತರು, ತಮ್ಮ ಅಪೇಕ್ಷೆಯನ್ನು ದೇವರಲ್ಲಿ ಬಿನ್ನಿವಿಸಿಕೊಂಡು, ಮುಡುಪು ಕಟ್ಟಿ ತೆಗೆದಿಟ್ಟರು. ಈ ಘಟನೆ ನಡೆದು 8-9 ದಿನಗಳು ಕಳೆದ ನಂತರ ಒಂದು ರಾತ್ರಿ ಕೆಂಪೇಗೌಡರಿಗೆ ಸುಸ್ವಪ್ನವಾಯಿತು. ಓರ್ವ ಬ್ರಹ್ಮಚಾರಿ ಕಾಣಿಸಿಕೊಂಡ, ಕೆಂಪೇಗೌಡರನ್ನುದ್ದೇಶಿಸಿ, ರಾಜ್ಯ ವಿಸ್ತರಣೆಯ ಆಸೆ ನಿನಗಿದೆ. ಇಲ್ಲಿಂದ 15 ಮೈಲಿ ದೂರದಲ್ಲಿ ಉಪ್ಪಾರಹಳ್ಳಿ ಇದೆ. ಅಲ್ಲಿ ಅಶ್ವಥ್ ಕಟ್ಟೆ ಬಂಡೆ ಇದೆ. ಅಲ್ಲಿ ನಾನು ಇದ್ದೇನೆ ನೀನು ಅಲ್ಲಿಂದ ಒಂದುಒಂದು ದಿಕ್ಕಿಗೂ ಒಂದೊಂದು ಜತೆ ಎತ್ತುಗಳನ್ನು ಓಡಿಸು. ಆ ಎತ್ತುಗಳು ಎಲ್ಲಿ ನಿಲ್ಲುತ್ತವೆಯೋ ಅಲ್ಲಿಯವರೆಗೆ ಗಡಿ ವಿಸ್ತರಿಸು...