ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ, ಗುತ್ತಲು, ಮಂಡ್ಯ - 571401, ಮಂಡ್ಯ .
Sri Arkeshwara Swamy Temple, Guttalu, Mandya - 571401, Mandya District [TM000192]
×
Temple History
ಇತಿಹಾಸ
ಮಂಡ್ಯ ತಾಲ್ಲೂಕಿನ ಗುತ್ತಲು ಗ್ರಾಮದಲ್ಲಿರುವ ಶ್ರೀಅರ್ಕೇಶ್ವರಸ್ವಾಮಿ ದೇವಾಲಯವು ಸರಿ ಸುಮಾರು 12ನೇ ಶತಮಾದಲ್ಲಿ ಚೋಳರ ಆಡಳಿತದ ಸಮಯದಲ್ಲಿ ನಿರ್ಮಿಸಲ್ಪಟ್ಟಿತ್ತು.
ಮೊದಲಿಗೆ ಈ ಸ್ಥಳ ಗೋಮಾಳವಾಗಿತ್ತು ಇಲ್ಲಿ ಪ್ರತಿನಿತ್ಯ ನೂರಾರು ಹಸುಗಳು ಬಂದು ಮೇಯುತ್ತಿದ್ದವು ಮತ್ತು ಹಚ್ಚ ಹಸಿರಿನ ಮೇವಿಗಾಗಿ ಅರಸುತ್ತಾ ಬರುತ್ತಿದ್ದವು ಈ ಎಲ್ಲಾ ಹಸುಗಳು ಗುತ್ತಲಿನ ಪಕ್ಕದ ಸುಮಾರು 1.5ಕಿ.ಮೀ ದೂರದಲ್ಲಿರುವ ಚನ್ನಪ್ಪನದೊಡ್ಡಿ ಎಂಬ ಗ್ರಾಮದ ಮುಖ್ಯಸ್ಥರಿಗೆ ಸೇರಿದ್ದಾಗಿದ್ದವು ಈ ಎಲ್ಲಾ ಹಸುಗಳನ್ನು ಆ ಮನೆಯ ಒಬ್ಬ ಸೇವಕ ಮೇಯಲು ಈ ಗೋಮಾಳಕ್ಕೆ ಕರೆದೂಯ್ಯುತ್ತಿದ್ದ.
ಇದರಲ್ಲಿ ಒಂದು ಹಸು ಗುತ್ತಿಗಿಡಗಳು ವಿಷಾಂಪರಂಜಿಗಿಡ ಆವರಿಕೆಗಿಡ ಮತ್ತು ಮೃತಿಕೆ ಗಿಡಗಳ ಸುತ್ತಮುತ್ತವೇ ಮಾತ್ರ ಹಾಲನ್ನು ನೀಡುತ್ತಿತ್ತು ನಂತರ ಮನೆಯಲ್ಲಿ...ಮಂಡ್ಯ ತಾಲ್ಲೂಕಿನ ಗುತ್ತಲು ಗ್ರಾಮದಲ್ಲಿರುವ ಶ್ರೀಅರ್ಕೇಶ್ವರಸ್ವಾಮಿ ದೇವಾಲಯವು ಸರಿ ಸುಮಾರು 12ನೇ ಶತಮಾದಲ್ಲಿ ಚೋಳರ ಆಡಳಿತದ ಸಮಯದಲ್ಲಿ ನಿರ್ಮಿಸಲ್ಪಟ್ಟಿತ್ತು.
ಮೊದಲಿಗೆ ಈ ಸ್ಥಳ ಗೋಮಾಳವಾಗಿತ್ತು ಇಲ್ಲಿ ಪ್ರತಿನಿತ್ಯ ನೂರಾರು ಹಸುಗಳು ಬಂದು ಮೇಯುತ್ತಿದ್ದವು ಮತ್ತು ಹಚ್ಚ ಹಸಿರಿನ ಮೇವಿಗಾಗಿ ಅರಸುತ್ತಾ ಬರುತ್ತಿದ್ದವು ಈ ಎಲ್ಲಾ ಹಸುಗಳು ಗುತ್ತಲಿನ ಪಕ್ಕದ ಸುಮಾರು 1.5ಕಿ.ಮೀ ದೂರದಲ್ಲಿರುವ ಚನ್ನಪ್ಪನದೊಡ್ಡಿ ಎಂಬ ಗ್ರಾಮದ ಮುಖ್ಯಸ್ಥರಿಗೆ ಸೇರಿದ್ದಾಗಿದ್ದವು ಈ ಎಲ್ಲಾ ಹಸುಗಳನ್ನು ಆ ಮನೆಯ ಒಬ್ಬ ಸೇವಕ ಮೇಯಲು ಈ ಗೋಮಾಳಕ್ಕೆ ಕರೆದೂಯ್ಯುತ್ತಿದ್ದ.
ಇದರಲ್ಲಿ ಒಂದು ಹಸು ಗುತ್ತಿಗಿಡಗಳು ವಿಷಾಂಪರಂಜಿಗಿಡ ಆವರಿಕೆಗಿಡ ಮತ್ತು ಮೃತಿಕೆ ಗಿಡಗಳ ಸುತ್ತಮುತ್ತವೇ ಮಾತ್ರ ಹಾಲನ್ನು ನೀಡುತ್ತಿತ್ತು ನಂತರ ಮನೆಯಲ್ಲಿ ಹಾಲನ್ನು ಕರೆಯುವಾಗ ಹಾಲಿನ ಬದಲಾಗಿ ರಕ್ತವನ್ನು ನೀಡುತ್ತಿತ್ತು ಇದನ್ನು ಗಮನಿಸಿದ ಆ ಸೇವಕ ಮನೆಯ ಯಜಮಾನನಿಗೆ ತಿಳಿಸಿದ.
ನಂತರ ಆ ಯಜಮಾನ ತಾನೆ ಖುದ್ದು ಪರೀಕ್ಷಿಸುವುದಾಗಿ ಹೇಳಿ ಆ ದಿನ ತಾನೆ ಹಸುಗಳನ್ನು ಗೋಮಾಳÀಕ್ಕೆ ಕರೆದೊಯ್ದ. ಹಸುಗಳನ್ನು ಮೇಯಲು ಬಿಡುವ ಮುನ್ನ ಆ ಹಸುವನ್ನು ಅದರ ಬಗ್ಗೆ ಪರೀಕ್ಷಿಸಲು ಕಾದು ನಿಂತ.
ಆ ಹಸು ಮಾಮೂಲಿನಂತೆ ಗುತ್ತಿಗಿಡದ ಬಳಿ ಹೋಗಿ ಹಾಲು ಕೊಡಲು ಆರಂಬಿಸಿತು ಇದನ್ನು ಗಮನಿಸಿದ ಯಜಮಾನ ಮರದ ಮೇಲೆ ಕುಳಿತು ತನ್ನ ಚಂದ್ರಾಯುದದ ಸಹಾಯದಿಂದ ಮರದ ಕೊಂಬೆ ರೆಂಬೆಗಳನ್ನು ಕತ್ತರಿಸುತ್ತಿದ್ದ ಆ ಸಮಯದಲ್ಲಿ ಆಕಸ್ಮಿಕವಾಗಿ ಲಿಂಗದ ಮೇಲೆ ಏಟು ಬಿತ್ತು ಬಿದ್ದ ಏಟಿಗೆ ಲಿಂಗವು ಚೂರುಗಳಾಗಿ ಮೊದಲು ಬಸವನÀಗುಡಿಯಲ್ಲಿ ಬಿದ್ದು ನಂತರ ಅಲ್ಲಿಂದ ಮತ್ತೆರಡು 2 ಕಿ.ಮೀ ದೂರಕ್ಕೆ ಹಾರಿ ಬಿತ್ತು ಮತ್ತೆ ಹಾರಿ ಸುತ್ತಿ ಸುತ್ತಿ ಒಂದು ಕಡೆ ನೆಲೆಯೂರಿತು ನಂತರ ದೇವರು ಪ್ರತ್ಯಕ್ಷನಾಗಿ ಆ ಯಜಮಾನನಿಗೆ ಆ ಸ್ಥಳದಲ್ಲಿ ದೇವಸ್ಥಾನ ಕಟ್ಟಿಸಲು ಸೂಚಿಸಿತು.
ಅದರಂತೆಯೇ ಯಜಮಾನ ಆ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಿದನು. ಈ ದೇವಾಲಯದ ಸುತ್ತಲು ಗುತ್ತಿಗಿಡಗಳು ಆವರಿಕೆಗಿಡಗಳು ಇರುವುದರಿಂದಲೇ ಇದಕ್ಕೆ ಅರ್ಕೇಶ್ವರಸ್ವಾಮಿ ಎಂದು ಹೆಸರಾಯಿತು ನಂತರ ಆ ಜಾಗಕ್ಕೆ ಗುತ್ತಲು ಮತ್ತು ಅರ್ಕೇಶ್ವರ ನಗರ ಎಂದು ಕರೆಯಲ್ಪಟ್ಟಿತ್ತು ಹಾಗೂ ಇಲ್ಲಿ ಹಾವು ಕಚ್ಚಿದ ಗಾಯಕ್ಕೆ ದೇವಾಲಯದ ಶ್ರೀಗಂಧ ತೀಥರ್À ಪ್ರಸಾದ ಹಚ್ಚಿದರೆ ಬೇಗನೇ ಗುಣಮುಖವಾಗುತ್ತದೆ. ಇವತ್ತಿಗೂ ಕೂಡ ನಾಗರಸೊಂಕು ಆಗಿರುವಂತಹ ಭಕ್ತಾಧಿಗಳು ಇಲ್ಲಿನ ಹುತ್ತದ ಮಣ್ಣನ್ನು ಚರ್ಮಕ್ಕೆ ಹಚ್ಚಿದರೆ ಗುಣಮುಖವಾಗುತ್ತದೆ. ಎಂಬ ನಂಬಿಕೆಯಿದ್ದು ಚರ್ಮ ಸಂಬಂಧಿತ ಯಾವುದೇ ಸೋಂಕಿಗೂ ಈ ಹುತ್ತದ ಮಣ್ಣು ರಾಮಬಾಣವಾಗಿದೆ.
ದೇವಾಲಯದ ಮುಖ್ಯ ಕಾರ್ಯಕ್ರಮಗಳಾದಂತಹ ರಥೋತ್ಸವ, ವಿಜಯದಶಮಿಪೂಜೆ, ಕಾರ್ತಿಕ ಮಾಸದ ಪೂಜೆ ಮುಂತಾದ ವಿಶೇಷ ಪೂಜೆಗಳಿಗೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ ಪುರಾಣದ ಪ್ರಕಾರ ಚೂರಾದ ಲಿಂಗ ಮೊದಲು ಬಿದ್ದ ಸ್ಥಳಕ್ಕೆ ಚಿಕ್ಕಮಂಡ್ಯ ಹಾಗೂ ಎರಡನೇಯ ಬಾರಿ ಉರುಳಿ ಉರುಳಿ ಬಿದ್ದು ಬಂದ ಸ್ಥಳಕ್ಕೆ ಇದಕ್ಕೆ ಮಂಡೇಶ್ವರ ಎಂದು ಹೆಸರು ಬಂದಿರುತ್ತದೆ. ಹಾಗೂ ಇತ್ತೀಚಿನ ದಿನಗಳಲ್ಲಿ ಸದರಿ ಲಿಂಗಕ್ಕೆ ಶ್ರೀತಾಂಡವೇಶ್ವರಸ್ವಾಮಿ ಎಂದು ಕರೆಯುತ್ತಾರೆ. ಮತ್ತು ಶ್ರೀ ತಾಂಡವೇಶ್ವರನ ಪ್ರಸಾದವು ಇಲಿ ಕಡಿತಕ್ಕೆ ಜಾಷಧಿಯೂಗಿರುತ್ತದೆಂಬ ನಂಬಿಕೆ ಇದೆ.