Screen Reader Access                 A-  A  A+ 
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ದೊಡ್ಡದಾಳವಟ್ಟ, ತುಮಕೂರು, ತುಮಕೂರು .
Sri Lakshminarasimha Swamy Temple Doddadalavatta, Tumakuru, Tumakuru District [TM000195]
×
Temple History

ಇತಿಹಾಸ

ಶ್ರೀ ಲಕ್ಷ್ಮೀನರಸಿಂಸ್ವಾಮಿ ಸ್ಥಳ ಪುರಾಣ ಕರ್ನಾಟಕ ರಾಜ್ಯ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿ ದೊಡ್ಡದಾಳವಟ್ಟ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು ಬಿ ದರ್ಜೆ ದೇವಾಲಯವಾಗಿದ್ದು ಪ್ರತಿ ನಿತ್ಯ ಸಾವಿರಾರು ಜನ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಕ್ಷೇತ್ರದಲ್ಲಿ ಹಿಂದೆ ದಳ ಮಹರ್ಷಿಗಳು ತಪಸ್ಸು ಮಾಡುತ್ತಿದ್ದಾಗ ಶ್ರೀ ಲಕ್ಷ್ಮೀನರಸಿಂಹ ದೇವರು ಪ್ರತ್ಯಕ್ಷರಾಗಿ ನಾನು ಇಲ್ಲಿ ಉದ್ಧವವಾಗಿರುತ್ತೇನೆ ನೀನು ನನಗೆ ಪೂಜೆ ಮಾಡಬೇಕಾಗಿ ನರೆಸಿಂಹ ದೇವರು ಅಜ್ಞೆ ಮಾಡಿರುತ್ತಾರೆ.ದೇವರ ಅಜ್ಞೆಯಂತೆ ಉದ್ಭವದ ಮೂರ್ತಿಗೆ ಪೂಜೆ ಮಾಡಿಸಿಕೊಂಡಿರುತ್ತಾರೆ.ಕಾಲಕ್ರಮೇಣ ದಳ ಮಹರ್ಷಿಗಳು ದೇವದೀನರಾಗುತ್ತಾರೆ. ನೆಲೆಸಿರುವ ಸ್ವಾಮಿಯ ಉದ್ಭವ ಮೂರ್ತಿಯ ಅರಳಿ ಬೆಳೆದು ನೆರೆಳು ನೀಡುತ್ತಿರುವಾಗ ಕಾಲಕ್ರಮೇಣ ಉದ್ಭವ ಮೂರ್ತಿಯ ಪಕ್ಕದಲ್ಲಿ ಹುತ್ತ ಬೆಳೆದು ಮುಚ್ಚಿ ಹೋಗಿರುತ್ತದೆ ಕಾಳಕ್ರಮೇಣ ಅಡಿಕೆ...

ಸ್ಥಳ ಪುರಾಣ

ಕಾಲಕ್ರಮೇಣ ಅಡಿಕೆ ವ್ಯಾಪಾರಸ್ಥರು ಪೆನಗೊಂಡದಿಂದ ಮುದುಗಿರಿಗೆ ಅಡಿಕೆ ವ್ಯಾಪಾರಕ್ಕಾಗಿ ಹೋಗುವ ಸಂದರ್ಭದಲ್ಲಿ ಪೆನಗೊಂಡವು ಮತ್ತು ಮದುಗಿರಿ ಮಧ್ಯೆ ಅರಳಿ ಮರ ಇರುವುದನ್ನು ಕಂಡು ಮರದ ಕೆಳಗೆ ವಿಶ್ರಾಂತಿ ಪಡೆದು ಮುಂದೆ ಪ್ರಯಾಣ ಬೆಳಸುತ್ತಿದ್ದರು ಆಗ ಒಂದು ದಿನ ಅಲ್ಲಿಗೆ ಬರುವ ಸಮಯಕ್ಕೆ ಊಟದ ಸಮಯವಾಗಿರುತ್ತದೆ. ಆಗ ಅಡಿಕೆ ವ್ಯಾಪಾರಸ್ಥರು ಮರದ ಕೆಳಗೆ ಇರುವ ಸ್ವಾಮಿಯ ಉದ್ಭವ ಮೂರ್ತಿ ಕಲ್ಲು ಎಂದು ತಿಳುದು ಅದರ ಜೊತೆಗೆ ಓಲೆ ಇಡಲು ಎರಡು ಕಲ್ಲುಗಳನ್ನು ತಂದು ಬೆಂಕಿ ಹಚ್ಚಿ ಅಡಿಗೆ ಮಾಡಲು ಪ್ರಯತ್ನಿಸುತ್ತಾರೆ. ಆಗ ಅನ್ನವೆಲ್ಲ ರಕ್ತವಾಗುತ್ತದೆ ಅಡಿಕೆ ವ್ಯಾಪಾಸ್ಥರು ಅಲ್ಲಿದ್ದ ಎಲ್ಲರೂ ಮೂರ್ಛೆ ಹೋಗುತ್ತಾರೆ.ಆಗ ವ್ಯಾಪಾರಸ್ಥರ ಯಜಮಾನ ಅಡಿಗೆ ಸಾಮಾನುಗಳನ್ನು ತರುವುದಕ್ಕೆ ಹೋಗಿರುತ್ತಾರೆ. ಜಮಾನ ಬರುವ ಹೊತ್ತಿಗೆ ಎಲ್ಲೂರು ಮೂರ್ಛೆ ಹೀಗಿರುವುದನ್ನು ಕಂಡು ಯೋಚನೆ...